ಶ್ರೀಬ್ಯಾಟರಯಸ್ವಾಮಿ ದೇವಾಲಯದ ಕಲ್ಯಾಣಿಯನ್ನು ಟೈಟಾನ್ ಕಂಪನಿಯ ನೆರವಿನಿಂದ ಪುನಶ್ಚೇತನ
ವಿಜಯ ದರ್ಪಣ ನ್ಯೂಸ್….
ಶ್ರೀಬ್ಯಾಟರಯಸ್ವಾಮಿ ದೇವಾಲಯದ ಕಲ್ಯಾಣಿಯನ್ನು ಟೈಟಾನ್ ಕಂಪನಿಯ ನೆರವಿನಿಂದ ಪುನಶ್ಚೇತನ
ಶಿಡ್ಲಘಟ್ಟ : ತಾಲ್ಲೂಕಿನ ಪುರಾತನ ಕಾಲದ ಚಿಕ್ಕದಾಸರಹಳ್ಳಿಯ ಗುಟ್ಟಿನ ಮೇಲಿರುವ ಭೂನಿಳ ಸಮೇತ ಶ್ರೀಬ್ಯಾಟರಯಸ್ವಾಮಿ ದೇವಾಲಯದ ಪಕ್ಕದ ಕಲ್ಯಾಣಿಯನ್ನು ಟೈಟಾನ್ (Titan) ಕಂಪನಿಯ ನೆರವಿನಿಂದ ಸುಂದರವಾಗಿ ಪುನಶ್ಚೇತನ ಮಾಡಲಾಗಿದ್ದು, ಅದನ್ನು ತಾಲ್ಲೂಕು ಆಡಳಿತಕ್ಕೆ ಹಸ್ತಾಂತರ ಮಾಡಲಾಯಿತು.
ತಹಶಿಲ್ದಾರ್ ಬಿ.ಎನ್.ಸ್ವಾಮಿ ಮಾತನಾಡಿ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿದರೆ ಪರಿಸರದ ರಕ್ಷಣೆ ಮತ್ತು ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪ್ರಾಮಾಣಿಕ ಸಹಕಾರದೊಂದಿಗೆ ಇನ್ನೂ ಅನೇಕ ಹಳ್ಳಿಗಳಲ್ಲಿ ಹೊಂಡ ಹಾಗು ಕಲ್ಯಾಣಿಗಳನ್ನು ಅಭಿವೃದ್ಧಿ ಮಾಡಿ ಮುಂದಿನ ತಲೆಮಾರಿಗೆ ಶುದ್ಧ ನೀರಿನ ಮೂಲವಾಗಿ ಉಳಿಸಬೇಕು ಎಂದು ಹೇಳಿದರು.
ಟೈಟಾನ್ ಸಿ.ಎಸ್.ಆರ್ ಯೋಜನೆಯ ಸಿಇಒ ಎನ್.ಎಸ್. ರಾಘವನ್ ಮಾತನಾಡಿ,ಇದು ನಮ್ಮ ಮೊದಲ ಕಲ್ಯಾಣಿ ಪುನಶ್ಚತನ ಯೋಜನೆ ಮುಂದಿನ ವರ್ಷಗಳಿಂದ ಪ್ರತಿವರ್ಷವೂ ಒಂದು ಕಲ್ಯಾಣಿ ಪುನಶ್ಚತನ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
ಪರಿಸರ ಸಂಘದ ಅಧ್ಯಕ್ಷ ಆರ್.ಜಿ. ನಡದೂರ್ ಮಾತನಾಡಿ ನಮ್ಮ 27 ವರ್ಷಗಳ ಸೇವಾ ಯಾತ್ರೆಯ ಭಾಗವಾಗಿದೆ, ಈಗಾಗಲೇ ಚಿಂತಾಮಣಿಯಲ್ಲಿ ಒಂದು ಕಲ್ಯಾಣಿ ಪುನಶ್ಚೇತನ ಮಾಡಿದ್ದೇವೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೆಲಸಗಳನ್ನು ಹಮ್ಮಿಕೊಳ್ಳುವ ಯೋಜನೆ ಇದೆ ಎಂದರು.
ಇದೇ ವೇಳೆ ತಹಶೀಲ್ದಾರ್ ಬಿ.ಎನ್.ಸ್ವಾಮಿ ನಾಮಫಲಕವನ್ನು ಅನಾವರಣಗೊಳಿಸಿದರು,ಭಾಗವಹಿಸಿದ ಎಲ್ಲಾ ಗಣ್ಯರನ್ನು ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಟೈಟಾನ್ ಸಂಸ್ಥೆಯ ಶ್ರೀಧರ್,ಸುದರ್ಶನ್, ಶ್ರೀಕಾಂತ್ ,ಆರ್.ತನುಜ್, ವಿನೋದ್, ಗ್ರಾಮಾಂತರ ಟ್ರಸ್ಟ್‌ನ ಗಣೇಶ್ ರಾಜ್,ಕುಮಾರಸ್ವಾಮಿ,ಸತ್ಯಮೂರ್ತಿ, ಭಾಸ್ಕರ್, ಸುಜಾತ,ಬಾಲಾಜಿ, ದೇವಾಲಯ ಸಮಿತಿಯ ಅಧ್ಯಕ್ಷ ಬ್ಯಾಟರಾಯಶೆಟ್ಟಿ,ಗ್ರಾಮ ಪಂಚಾಯ್ತಿ ಸದಸ್ಯೆ ಜಯಮ್ಮಮುನಿರಾಜು,ನಾಗರಾಜ್, ನಾಗೇಶ್, ಮಾಜಿ ಅಧ್ಯಕ್ಷ ಭಾಗ್ಯಮ್ಮಪಾಪಣ್ಣ, ಕಾರ್ಯದರ್ಶಿ ತಿಮ್ಮೇಗೌಡ, ಗ್ರಾಮ ಆಡಳಿತ ಅಧಿಕಾರಿ ರೇವಣ್ಣಸಿದ್ದಪ್ಪನಾಗೂರ್, ಮುಖಂಡರಾದ ದೇವರಾಜಪ್ಪ,ಬ್ಯಾಟರಾಯಪ್ಪ ,ದಾಮೋದರ್,ಎಂ.ವಿ.ರವಿಕುಮಾರ್, ಶ್ರೀರಾಮಪ್ಪ, ಮೇಸ್ತ್ರಿ ಅಮೀರ್ ಸಾಬ್ ಹಾಗು ಗ್ರಾಮಸ್ಥರು ಪಾಲ್ಗೊಂಡಿದ್ದರು.