ಯಣ್ಣಂಗೂರು ದೇವಾಲಯಗಳ ಮಹಾದ್ವಾರ ಲೋಕಾರ್ಪಣೆ ಮಾಡಿದ ಶಾಸಕ ಬಿಎನ್ ರವಿಕುಮಾರ್

ವಿಜಯ ದರ್ಪಣ ನ್ಯೂಸ್….

ಯಣ್ಣಂಗೂರು ದೇವಾಲಯಗಳ ಮಹಾದ್ವಾರ ಲೋಕಾರ್ಪಣೆ ಮಾಡಿದ ಶಾಸಕ ಬಿಎನ್ ರವಿಕುಮಾರ್

ಶಿಡ್ಲಘಟ್ಟ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ : ದಾರ್ಮಿಕ ಪರಂಪರೆಯ ಭಾರತೀಯರ ಸಂಸ್ಕೃತಿಯನ್ನು ನಿರಂತರವಾದ ಧಾರ್ಮಿಕ ಕಾರ್ಯಗಳ ಮೂಲಕ ಮಾನಸಿಕ ನೆಮ್ಮದಿ, ಶಾಂತಿಯನ್ನು ಪಡೆಯಬಹುದು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.

ತಾಲ್ಲೂಕಿನ ಯಣ್ಣಂಗೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ಸೋಮೇಶ್ವರಸ್ವಾಮಿ, ಶ್ರೀವೇಣುಗೋಪಾಲಸ್ವಾಮಿ ಹಾಗು ಶ್ರೀ ಯೋಗಿ ನಾರೇಯಣಯತೀಂದ್ರ ದೇವಾಲಯಗಳ ಮಹಾದ್ವಾರದ ಕಳಶಗಳ ಕುಂಭಾಭಿಷೇಕ, ಪ್ರಾರಂಭೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಯುವಪೀಳಿಗೆಯಲ್ಲಿ ನೈತಿಕ ಮೌಲ್ಯಗಳನ್ನು ವೃದ್ಧಿಸಿ
ರಾಮಾಯಣ, ಮಹಾಭಾರತ, ಭಗವದ್ಗೀತೆ, ಭಾಗವತ ಬೋಧನೆಯ ಮೂಲಕ ನಮ್ಮ ಸಂಸ್ಕೃತಿಯನ್ನು ಪರಿಚಯಿಸಬೇಕು ಎಂದು ಹೇಳಿದರು.

ಪುರಾಣಗಳಲ್ಲಿನ ಪ್ರತಿ ಪಾತ್ರಗಳು ಮಗುವಿನ ಮನಸ್ಸಿನಲ್ಲಿ ಮೌಲ್ಯಗಳನ್ನು ಸೃಜಿಸುತ್ತವೆ ಮೌಲ್ಯಯುತ ಸಭ್ಯ ಸಮಾಜದ ದೃಷ್ಟಿಯ ಉದ್ದೇಶದಿಂದ ಬಾಲ್ಯದಿಂದಲೇ ಸಾಮಾಜಿಕ, ನೈತಿಕ ಮತ್ತು ಧಾರ್ಮಿಕಮೌಲ್ಯಗಳನ್ನು ಬಿತ್ತಬೇಕು ಎಂದು ನುಡಿದರು.

ರಾಜ್ಯದಲ್ಲಿಯೇ ಶಿಡ್ಲಘಟ್ಟ ವಿಧಾನಸಭಾಕ್ಷೇತ್ರವು ಬಹಳ ಹಿಂದುಳಿದ ಕ್ಷೇತ್ರವಾಗಿದ್ದು ಕಳೆದ ಒಂದು ವರ್ಷದಿಂದ ಕ್ಷೇತ್ರದ ಎಲ್ಲಾ ಭಾಗಗಳಲ್ಲಿಯೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿದ್ದು ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ, ಡಾ.ಬಿ.ಆರ್.ಅಂಬೇಡ್ಕರ್ ಭವನ,ನೌಕರರ ಭವನ ಹಾಗು ಗುರುಭವನದ ಕಾಮಗಾರಿಗಳು ಪ್ರಗತಿಯಲ್ಲಿದ್ದು ಕ್ಷೇತ್ರದ ಎಲ್ಲಾ ನಾಗರಿಕರು ಶಾಂತಿ ,ನೆಮ್ಮದಿಯಿಂದ ಬದುಕು ಸಾಗಿಸಲು ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲಾಗುತ್ತಿದೆ ಎಂದು ಹೇಳಿದರು.

ಬಿಜೆಪಿ ಗ್ರಾಮಾಂತರ ಮಂಡಲ ಅದ್ಯಕ್ಷ ಸೀಕಲ್ ಆನಂದಗೌಡ ಮಾತನಾಡಿ,ಯುವಪೀಳಿಗೆಯಲ್ಲಿ ಗುರು, ಹಿರಿಯರಲ್ಲಿನ ಗೌರವಾದರ ಭಾವನೆಗಳು ,ಕ್ಷೀಣಿಸುತ್ತಿರುವ ಸಂಸ್ಕಾರ ಮರುಸೃಷ್ಟಿಯಾಗಬೇಕಿದೆ ಜೀವನದ ಸರಳತೆ ಅನಿವಾರ್ಯವಾಗಿದ್ದು, ಆಡಂಬರ, ಆಧುನೀಕರಣತೆಯ ಪ್ರಭಾವದಿಂದ ಕುಸಿಯುತ್ತಿರುವ ಮೌಲ್ಯಗಳು ಮರುಸ್ಥಾಪನೆಯಾಗಬೇಕು ಎಂದು ಹೇಳಿದರು.

ಕೈವಾರ ತಾತಯ್ಯ ಸಂಚಾರ ಮಾಡಿದ ಗ್ರಾಮ: ಬೆಂಗಳೂರು ಗ್ರಾಮಾಮಾಂತರ ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ,
ಗ್ರಾಮದ ದ್ವಾರಬಾಗಿಲು ಜಯ,ವಿಜಯ ಹಾಗು ಆನೆಗಳನ್ನು ಹೊಂದಿದ್ದು, ಮೇಲ್ಬಾಗದಲ್ಲಿ ಶ್ರೀ ಸೋಮೇಶ್ವರಸ್ವಾಮಿ,ಶ್ರೀ ವೇಣುಗೋಪಾಲಸ್ವಾಮಿ ಮತ್ತು ಕೈವಾರ ಯೋಗಿನಾರೇಯಣ ಗುರುಗಳ ವಿಗ್ರಹಗಳನ್ನು ಹೊಂದಿದ್ದು ಬಹು ಆಕರ್ಷಕವಾಗಿವೆ, ಕಳಶಗಳ ಪ್ರತಿಷ್ಟಾಪನೆ, ಕುಂಭಾಭಿಷೇಕ ಕಾರ್ಯಗಳು ಲೋಕಹಿತಾರ್ಥವಾಗಿ ಧಾರ್ಮಿಕರೀತ್ಯ ನಡೆದಿರುವುದು ಸಂತಸದಾಯಕವಾದುದು ಎಂದ ಅವರು ಯಣ್ಣಂಗೂರು ಗ್ರಾಮಕ್ಕೆ ಇತಿಹಾಸವಿದ್ದು ಕಾಲ ಜ್ಙಾನಿಗಳಾದ ಕೈವಾರ ಯೋಗಿನಾರೇಯಣ ಯತೀಂದ್ರರು ಸಂಚರಿಸಿದ್ದಾರೆ ಎಂದರು.

ಈ ವೇಳೆ ಶ್ರೀವೇಣುಗೋಪಾಲಸ್ವಾಮಿ,ಶ್ರೀ ಸೋಮೇಶ್ವರಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ವ್ಯವಸ್ಥೆ ಮಾಡಲಾಗಿತ್ತು, ಇದರ ಅಂಗವಾಗಿ ನೂತನ ಹೆಬ್ಬಾಗಿಲು ಬಳಿ ವಿ.ಎನ್.ರಾಮಮೋಹನ್‌ಶಾಸ್ತ್ರಿ ಮತ್ತು ತಂಡದವರಿಂದ ಕಳಶಸ್ಥಾಪನೆ, ಹೋಮಾದಿಕಾರ್ಯಗಳು, ಕುಂಭಾಭಿಷೇಕ, ಪ್ರತಿಷ್ಟಾಪನಾ ಕಾರ್ಯಕ್ರಮಗಳು ಜರುಗಿದವು.

ಶಾಸಕ ಬಿ.ಎನ್.ರವಿಕುಮಾರ್ ಅವರು ನಾಮಫಲಕಗಳನ್ನು ಅನಾವರಣಗೊಳಿಸಿ ದ್ವಾರಭಾಗಿಲು ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಂಕ್‌ಮುನಿಯಪ್ಪ, ನಿರ್ದೇಶಕ ಕೆ.ಮಂಜುನಾಥ್, ಮಾಜಿ ನಿರ್ದೇಶಕ ಸಿ.ವಿ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಹುಜಗೂರು ರಾಮಯ್ಯ, ಕೃಷಿಕ ಸಮಾಜದ ನಿರ್ದೇಶಕ ನಾಗಮಂಗಲ ಶ್ರೀನಿವಾಸಗೌಡ, ತಾದೂರು ರಘು, ಹೊಸಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದ್ಯಾವಮ್ಮಕೆಂಪಣ್ಣ, ಉಪಾಧ್ಯಕ್ಷೆ ಶ್ವೇತಾ,ಪಿಳ್ಳಣ್ಣ, ಸಾಯಿಜ್ಯೋತಿ ಇಂಟರ್‌ನ್ಯಾಶನಲ್ ಶಾಲೆಯ ಸಿಇಒ ಕುಶಾಂತ್‌ರಾಜ್‌ಗೌಡ, ಗ್ರಾಮಪಂಚಾಯಿತಿ ಮಾಜಿ ಸದಸ್ಯ ಕೆಂಪರೆಡ್ಡಿ, ಲಕ್ಷ್ಮಣಮೂರ್ತಿ,ಗೋಪಾಲ್,ರಾಜಣ್ಣ, ಈರಪ್ಪ,ಚನ್ನಕೃಷ್ಣಪ್ಪ, ಪಿ.ಗುಮ್ಮಣ್ಣ,ಬಿ.ನಾಗರಾಜು, ಅಶೋಕ್ ಹಾಗು ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಮತ್ತಿತರರು ಹಾಜರಿದ್ದರು.