ಜಾತಿ ಗಣತಿ ಮಂಡನೆಗೆ ನಮ್ಮ ವಿರೋಧವಿದೆ : ಶಾಸಕ ಬಿ.ಎನ್.ರವಿಕುಮಾರ್
ವಿಜಯ ದರ್ಪಣ ನ್ಯೂಸ್…..
ಜಾತಿ ಗಣತಿ ಮಂಡನೆಗೆ ನಮ್ಮ ವಿರೋಧವಿದೆ : ಶಾಸಕ ಬಿ.ಎನ್.ರವಿಕುಮಾರ್
ಶಿಡ್ಲಘಟ್ಟ : ಜಾತಿ ಗಣತಿ ಸಮೀಕ್ಷೆ ಸಮರ್ಪಕವಾಗಿ ನಡೆದಿಲ್ಲ ಆದ ಕಾರಣ “ಜಾತಿ ಗಣತಿ ಮಂಡನೆ”ಗೆ ನಮ್ಮ ವಿರೋಧವಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರದಿಗೆ ಮಾತನಾಡಿದ ಅವರು ಜಾತಿ ಗಣತಿ ವರದಿಯನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡನೆ ಮಾಡಿರುವುದು ಮತ್ತು ಬಳಿಕ ಆ ವರದಿಯದ್ದೇ ಎನ್ನಲಾದ ಮಾಹಿತಿ ಸೋರಿಕೆ ಆಗಿರುವ ಹಿನ್ನೆಲೆಯಲ್ಲಿ ಈ ಜಾತಿ ಗಣತಿ ಸಮೀಕ್ಷೆ ಸರಿಯಿಲ್ಲ ಎಂದ ಅವರು ಮುಖ್ಯಮಂತ್ರಿಗಳು ಜಾತಿಗಣತಿ ವರದಿಯ ಬಗ್ಗೆ ಚರ್ಚೆ ನಡೆಸಲು ಜನಪ್ರತಿನಿಧಿಗಳಿಗೂ ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ನೀಡಲಾಗುವುದು ಎಂಬ ಮಾಹಿತಿ ಇದೆ, ಜಾತಿ ಗಣತಿ ಚರ್ಚೆ ವಿಷಯದಲ್ಲಿ ಮಾತನಾಡಲು ಅವಕಾಶ ನೀಡಿದ್ದಲ್ಲಿ ತಾವು ಆ ವರದಿ ಜಾರಿಗೆ ವಿರೋಧದ ಬಗ್ಗೆ ತಿಳಿಸಲಾಗುವುದು ಎಂದು ಹೇಳಿದರು.