ಲಿಂಗಾಯತ- ಒಕ್ಕಲಿಗರನ್ನು ಎದುರು ಹಾಕ್ಕೊಂಡು ರಾಜ್ಯಭಾರ ಅಸಾಧ್ಯ
ವಿಜಯ ದರ್ಪಣ ನ್ಯೂಸ್….
ಲಿಂಗಾಯತ- ಒಕ್ಕಲಿಗರನ್ನು ಎದುರು ಹಾಕ್ಕೊಂಡು ರಾಜ್ಯಭಾರ ಅಸಾಧ್ಯ
ದಾವಣಗೆರೆ: ರಾಜ್ಯದಲ್ಲಿ 10 ವರ್ಷಗಳ ಹಿಂದೆ ನಡೆದ ಜಾತಿ ಗಣತಿ ವರದಿ ಕಳೆದಶುಕ್ರವಾರ ರಾಜ್ಯ ಸಚಿವ ಸಂಪುಟದಲ್ಲಿ ಮಂಡನೆಯಾದ ನಂತರ ಬಿಡುಗಡೆಯಾದ ಜಾತಿವಾರು ಜನಸಂಖ್ಯೆ ಅಂಕಿ-ಅಂಶಗಳ ಬಗ್ಗೆ ಇದೇ ಮೊದಲ ಬಾರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರೂ ಆದ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ ಅವರು, ತಮ್ಮದೇ ಪಕ್ಷದ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ರಾಜ್ಯದಲ್ಲಿ ವೀರಶೈವ ಲಿಂಗಾಯತರು ಹಾಗೂ ಒಕ್ಕಲಿಗರನ್ನು ಎದುರು ಹಾಕಿಕೊಂಡು ರಾಜ್ಯಭಾರ ಮಾಡುವುದಕ್ಕೆ ಆಗುತ್ತದೆಯೇ ಎಂದು ಪ್ರಶ್ನಿಸಿರುವ ಅವರು, ಜನಸಂಖ್ಯೆಯಲ್ಲಿ ರಾಜ್ಯದಲ್ಲಿ ವೀರಶೈವ ಲಿಂಗಾಯತರು ಮೊದಲ ಸ್ಥಾನ, ಒಕ್ಕಲಿಗರು ಎರಡನೇ ಸ್ಥಾನದಲ್ಲಿ ಇದ್ದಾರೆ ಎಂದು ಹೇಳಿದರು.