ಸಂಸದ ಡಾ.ಕೆ ಸುಧಾಕರ್ ಅವರಿಂದ ಬಸ್ ನಿಲ್ದಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ
ವಿಜಯ ದರ್ಪಣ ನ್ಯೂಸ್…..
ಸಂಸದ ಡಾ.ಕೆ ಸುಧಾಕರ್ ಅವರಿಂದ ಬಸ್ ನಿಲ್ದಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ
ನೆಲಮಂಗಲ ಬೆಂ.ಗ್ರಾ ಜಿಲ್ಲೆ ಏ.16 : ಸಂಸದರ ಸ್ಥಳೀಯ ಪ್ರದೇಶ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನೆಲಮಂಗಲ ತಾಲ್ಲೂಕಿನ ಅರಿಶಿನಕುಂಟೆ ವಾರ್ಡ್ ನಂ 31ರ ಆದರ್ಶ ನಗರದ ಮಾರುತಿ ಸರ್ಕಲ್ ಬಳಿ ಹಾಗೂ ಶ್ರೀ ಸಾಯಿ ರಾಮ್ ಲೇಔಟ್ ನ ಬಸವನಹಳ್ಳಿ ವಾರ್ಡ್ ನಂ 22 ರಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸುವ ಕಾಮಗಾರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಸಂಸದ ಡಾ.ಕೆ ಸುಧಾಕರ್ ಅವರು ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ನೆಲಮಂಗಲ ಮಾಜಿ ಶಾಸಕ ಎಂ ವಿ ನಾಗರಾಜ್, ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಉಪಸ್ಥಿತರಿದ್ದರು.
6ನೇ ತರಗತಿ ಪ್ರವೇಶಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಏಪ್ರಿಲ್ 16 : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯ ನಿರ್ವಹಿಸುತ್ತಿರು ಮೌಲಾನ ಆಜಾದ್ ಮಾದರಿ (MAMS) ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಆನ್ ಲೈನ್ (Online) ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವವರು ಮೇ 10 ರೊಳಗೆ https://sevasindhuservices.karnataka.gov.in ವೆಬ್ಸೈಟ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.
ಮೌಲಾನ ಆಜಾದ್ ಮಾದರಿ ಶಾಲೆ, ವಿಜಯಪುರ,ದೇವನಹಳ್ಳಿ ಶಾಲೆಯಲ್ಲಿ 6 ಸೀಟುಗಳು. ಮೌಲಾನ ಆಜಾದ್ ಮಾದರಿ ಶಾಲೆ, ಮುತ್ತೂರು, ದೊಡ್ಡಬಳ್ಳಾಪುರ ಶಾಲೆಯಲ್ಲಿ 6 ಸೀಟುಗಳು. ಮೌಲಾನ ಆಜಾದ್ ಮಾದರಿ ಶಾಲೆ, ಇಸ್ಲಾಂಪುರ ನೆಲಮಂಗಲ,ಶಾಲೆಯಲ್ಲಿ 6 ಸೀಟುಗಳು ಮತ್ತು ಮೌಲಾನ ಆಜಾದ್ ಮಾದರಿ ಶಾಲೆ, ಹೊಸಕೋಟೆ ಟೌನ್ ಶಾಲೆಯಲ್ಲಿ 6 ಸೀಟುಗಳು ಲಭ್ಯವಿರುತ್ತದೆ.
ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಶೇ.75ರಷ್ಟು ಹಾಗೂ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶೇ 25ರಷ್ಟು ಮೀಸಲಾತಿ ನೀಡಲಾಗಿದೆ.
ಮಾಹಿತಿಗಾಗಿ ಆಯಾ ಶಾಲೆಯ ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸುವುದು. ಪ್ರಿಯಾ ದರ್ಶಿನಿ ಮುಖ್ಯೋಪಾಧ್ಯಾಯರು ವಿಜಯಪುರ, ದೂ.ಸಂ 9066296080. ನಾಗೇಶ್ ಮುಖ್ಯೋಪಾಧ್ಯಾಯರು ಮುತ್ತೂರು, ದೂ.ಸಂ 9743239154. ಚಿಕ್ಕತಾಯ್ಯಮ್ಮ ಮುಖ್ಯೋಪಾಧ್ಯಾಯರು ಇಸ್ಲಾಂಪುರ, ದೂ.ಸಂ 9663189408. ನಾಗೇಶ್ ಮುಖ್ಯೋಪಾಧ್ಯಾಯರು ಮುತ್ತೂರು, ದೂ.ಸಂ 9743239154.
ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಛೇರಿ ದೂ.ಸಂ- 080-27682882, 080- 27931899, 9845622337. 7676905779, 9986874875, 8660197516. ಹಾಗೂ ಜಿಲ್ಲಾ ಅಧಿಕಾರಿಗಳ ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು (ಗ್ರಾ) ಜಿಲ್ಲೆ. ನಂ.216, 2ನೇ ಮಹಡಿ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ-562110. ದೂ.ಸಂ- 080-29787455. ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.