ರೈತರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಕ್ರಮ : ಸಚಿವ ಡಾ.ಎಂ.ಸಿ. ಸುಧಾಕರ್
ವಿಜಯ ದರ್ಪಣ ನ್ಯೂಸ್….
ರೈತರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಕ್ರಮ : ಸಚಿವ ಡಾ.ಎಂ.ಸಿ. ಸುಧಾಕರ್
ಶಿಡ್ಲಘಟ್ಟ ಚಿಕ್ಕಬಳ್ಳಾಪುರ ಜಿಲ್ಲೆ : ಜಂಗಮಕೋಟೆ ಹೋಬಳಿಯಲ್ಲಿ ಕೆಐಎಡಿಬಿ ವ್ಯಾಪ್ತಿಗೆ ಒಳಪಡುವ 13 ಗ್ರಾಮಗಳ ಜಮೀನಿನ ರೈತರ ಸಭೆಯನ್ನು ಏ-25ರಂದು ಕರೆದಿದ್ದು, ಸಭೆಯಲ್ಲಿ ರೈತರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಉನ್ನತ ಶಿಕ್ಷಣ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು.
ನಗರದಲ್ಲಿ ನಡೆದ ಬಾಬಾ ಸಾಹೇಬ್ ಡಾ.ಅಂಬೇಡ್ಕರ್, ಡಾ. ಬಾಬು ಜಗಜೀವನ್ ರಾಂ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಜಂಗಮಕೋಟೆ ಕ್ರಾಸ್ ನಲ್ಲೇ ಕೆಐಎಡಿಬಿಗೆ ಒಳಪಡುವ ಜಮೀನುಗಳ ಖಾತೆದಾರ ರೈತರನ್ನು ಕರೆದು ಪ್ರತಿ ಕೆಐಎಡಿಬಿಗೆ ಜಮೀನು ಬಿಟ್ಟುಕೊಡಲು ಎಷ್ಟು ರೈತರು ಒಪ್ಪಿಕೊಳ್ಳುತ್ತಾರೆ, ಬಿಟ್ಟುಕೊಡದಿರಲು ಎಷ್ಟು ರೈತರು ಇತಲಿದ್ದಾರೆ ಎಂಬ ಮಾಹಿತಿಯನ್ನು ಸ್ವತಃ ರೈತರಿಂದಲೇ ಪಡೆದು ಹೆಚ್ಚಿನ ಸಂಖ್ಯೆಯ ರೈತರ ಒಲವಿನಂತೆ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.
ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿಸಿ ಉತ್ಪಾದಕತೆ ಹೆಚ್ಚಿಸಿ, ಆರ್ಥಿಕ ಅಭಿವೃದ್ಧಿ ಸಾಧಿಸುವುದು ಸರ್ಕಾರದ ಉದ್ದೇಶವೇ ಹೊರತು ರೈತರ ಜಮೀನು ಸ್ವಾಧೀನಪಡಿಸಿಕೊಂಡು, ರೈತರನ್ನು ಗುಳೆ ಎಬ್ಬಿಸುವುದಲ್ಲ ಎಂದು ಅವರು ತಮ್ಮ ನಿಲುವು ಸ್ಪಷ್ಟಪಡಿಸಿದರು,ಹಾಗಾಗಿ ಸರ್ಕಾರ ರೈತರ ಅಭಿಪ್ರಾಯಕ್ಕೆ ಒತ್ತು ನೀಡಲಿದೆ ಹೆಚ್ಚಿನ ಸಂಖ್ಯೆಯ ರೈತರು ಜಮೀನು ಬಿಟ್ಟುಕೊಡಲು ಒಪ್ಪಿದರೆ ಮುಂದಿನ ಪ್ರಕ್ರಿಯೆ ನಡೆಸುತ್ತೇವೆ, ಜಮೀನು ನೀಡಲು ಒಪ್ಪದ ರೈತರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ ಸಂಖ್ಯೆಯೇ ಹೆಚ್ಚಿದರೆ ಈ ಬಗೆ ಸರ್ಕಾರದ ಜತೆ ಚರ್ಚಿಸಿ ಪರ್ಯಾಯ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.