ಪ್ರಾಚಾರ್ಯೆಯಿಂದ ಹಳೇ ವಿದ್ಯಾರ್ಥಿ ವಿರುದ್ಧ ಜಾತಿ ನಿಂದನೆ ಕೇಸ್
ವಿಜಯ ದರ್ಪಣ ನ್ಯೂಸ್….
ಹಳೇ ವಿದ್ಯಾರ್ಥಿ ವಿರುದ್ಧ ಜಾತಿ ನಿಂದನೆ ಕೇಸ್
ತಾವರಗೇರಾ ಕೊಪ್ಪಳ ಜಿಲ್ಲೆ : ಹಲ್ಲೆ, ಜಾತಿ ನಿಂದನೆ ಆರೋಪದಡಿ ಇಲ್ಲಿನ ಸರ್ಕಾರಿ ಡಿಗ್ರಿ ಕಾಲೇಜಿನ ಪ್ರಾಚಾರ್ಯೆ ಅರುಣಾಕುಮಾರಿ, ಕಾಲೇಜಿನ ಹಳೇ ವಿದ್ಯಾರ್ಥಿ ವಿರುದ್ಧ ತಾವರಗೇರಾ ಪಟ್ಟಣ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದ್ದಾರೆ.
ವರ್ಷವಿಡೀ ಕಾಲೇಜಿಗೆ ಗೈರು, ಪರೀಕ್ಷೆಯಲ್ಲಿ ಕಾಪಿ ಮಾಡಿದ್ದರಿಂದ ಹಳೇ ವಿದ್ಯಾರ್ಥಿ ಸಿದ್ದನಗೌಡ ಪುಂಡಗೌಡ ಇವರನ್ನು ಪ್ರಾಚಾರ್ಯೆ ಅರುಣಾಕುಮಾರಿ ಕಾಲೇಜಿನಿಂದ ಹೊರಹಾಕಿದ್ದರು.
ಇದನ್ನೇ ಮನಸಿನಲ್ಲಿ ಇಟ್ಟುಕೊಂಡ ವಿದ್ಯಾರ್ಥಿ, ಕಾಲೇಜಿನ ಉಪನ್ಯಾಸಕ ಲಾಲ್‌ಸಾಬ್ ಜತೆ ಪಾನಮತ್ತರಾಗಿ ಚೇಂಬರ್‌ಗೆ ನುಗ್ಗಿ ಹಲ್ಲೆಗೆ ಮುಂದಾಗಿದ್ದರು. ಏಕವಚನದಲ್ಲಿ ಬೈದಿದ್ದಲ್ಲದೆ ಜಾತಿ ನಿಂದನೆ ಮಾಡಿದ್ದಾರೆ. ಇವರಿಂದ ತಮ್ಮ ಜೀವಕ್ಕೆ ಹಾನಿ ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸಿದ್ದನಗೌಡ ಪುಂಡಗೌಡ ಆರ್‌ಟಿಐ ಕಾರ್ಯಕರ್ತನಾಗಿದ್ದು, ಈತನ ವಿರುದ್ಧ ಈಗಾಗಲೇ ಹಲವು ಅಪರಾಧದಡಿ ಪಟ್ಟಣ ಠಾಣೆಯಲ್ಲಿ ಮೂರು ಪ್ರಕರಣ ದಾಖಲಾಗಿವೆ.
ಸದ್ಯ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಾವರಗೇರಾ ಪೊಲೀಸ್ ಠಾಣೆ ಪಿಎಸ್‌ಐ ನಾಗರಾಜ ಕೊಟಗಿ ತಿಳಿಸಿದ್ದಾರೆ.