ಡಾ. ಬಿ. ಆರ್. ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕು : ಸಚಿವ ಡಾ. ಎಂ ಸಿ ಸುಧಾಕರ್
ವಿಜಯ ದರ್ಪಣ ನ್ಯೂಸ್…
ಡಾ. ಬಿ. ಆರ್. ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕು : ಸಚಿವ ಡಾ. ಎಂ ಸಿ ಸುಧಾಕರ್
ಶಿಡ್ಲಘಟ್ಟ : ಜಗತ್ತಿನಲ್ಲಿನ ಅತ್ಯಂತ ಮೇಧಾವಿ ಎಂಬ ಖ್ಯಾತಿ ಪಡೆದಿರುವುದು ಡಾ.ಅಂಬೇಡ್ಕರ್ ಅವರು ಅಮೇರಿಕಾದ ಪ್ರತಿಷ್ಠಿತ ವಿಶ್ವ ವಿದ್ಯಾಲಯದಲ್ಲಿ ಇವರನ್ನು ಜಗತ್ತಿನ ಅತ್ಯಂತ ಪ್ರಭಾವಿ ಅರ್ಥಶಾಸ್ತ್ರಜ್ಞ, ಕಾನೂನು ಶಾಸ್ತ್ರಜ್ಞರೆಂದು ಪ್ರತಿಬಿಂಬಿಸಲಾಗಿದೆ ಎಂದು ಉನ್ನತ ಶಿಕ್ಷಣ ಹಾಗು
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ನಗರದ ತೋಟಗಾರಿಕೆ ಇಲಾಖೆಯ ಆವರಣದಲ್ಲಿ
ರಾಷ್ಟಿಯ ಹಬ್ಬಗಳ ಆಚರಣಾ ಸಮಿತಿ, ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್,ಡಾ.ಬಾಬು ಜಗಜೀವನ್ ರಾಂ ಅವರ ಜಯಂತಿ ಹಾಗೂ ಅಂಬೇಡ್ಕರ್ ಭವನ, ಶಿಕ್ಷಕರ ಭವನ ಮತ್ತು ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಇಡೀ ಜಗತ್ತಿನಲ್ಲಿಯೆ ಅತ್ಯಂತ ಹೆಚ್ಚು ಪದವಿಗಳನ್ನು ಪಡೆದ ಜ್ಞಾನಿಯೂ ಹಾಗು ನಮ್ಮೆಲ್ಲರ ಬದುಕಿನ ಪ್ರತಿ ಹಂತದಲ್ಲೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬದುಕು, ಹೋರಾಟ, ಗುರಿ ಎಲ್ಲವೂ ಸ್ಪೂರ್ತಿದಾಯಕವಾಗಿದೆ ಅವರ ತತ್ವ ಸಿದ್ದಾಂತ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ಸೇರಿದಂತೆ ಹಲವು ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ ಜಂಗಮಕೋಟೆ ಮೂಲಕ ಮುಳಬಾಗಿಲು, ಕೋಲಾರಕ್ಕೆ ಚತುಷ್ಪತ ರಸ್ತೆ ನಿರ್ಮಾಣವಾಗಲಿದೆ, ಶಿಡ್ಲಘಟ್ಟ ನಗರಕ್ಕೆ ಬೈಪಾಸ್ ರಸ್ತೆ ನಿರ್ಮಿಸಲು ನಿರ್ಧರಿಸಿದ್ದು ಎಲ್ಲ ಹಾದು ಹೋಗುತ್ತದೆ ಎಂಬುದನ್ನು ಇನ್ನಷ್ಟೆ ನಿರ್ಧರಿಸಬೇಕಿದೆ ಎಂದರು.
ಜಿಲ್ಲಾ ಕೇಂದ್ರದಲ್ಲಿ ಹೂವಿನ ಮಾರುಕಟ್ಟೆ ನಿರ್ಮಾಣವಾಗಲಿದ್ದು ಸಿಎಂ ಸಿದ್ದರಾಮಯ್ಯ ಅವರು ಪಬ್ಲಿಕ್ ಅಂಡ್ ಪ್ರೆಂಟೆಂಟ್ ಪಾರ್ಟ್ನರ್‌ಶಿಫ್‌ನಲ್ಲಿ ಆರಂಭಿಸಲು ಸೂಚಿಸಿದ್ದು ಅವರ ಮನವೊಲಿಸಿ ಸರ್ಕಾರದಿಂದಲೇ ನಿರ್ಮಿಸುವಂತೆ ಮಾಡಲಿದ್ದೇನೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇಷ್ಟೆಲ್ಲಾ ಅಭಿವೃದ್ದಿ ಕೆಲಸಗಳು, ಜನ ಸಾಮಾನ್ಯರಿಗೆ ಮೂಲ ಸೌಕರ್ಯಗಳನ್ನು ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಡಿಯಲ್ಲಿ ನೀಡಲು ಸಾಧ್ಯವಾಗುತ್ತಿದೆ ಇಲ್ಲವಾದಲ್ಲಿ ಇಲ್ಲ ಎಂದು ಸಂವಿಧಾನ ಹಾಗೂ ಅಂಬೇಡ್ಕರ್ ಅವರ ಮಹತ್ವವನ್ನು ವಿವರಿಸಿದರು.
ಶಾಸಕ ಬಿ.ಎನ್.ರವಿಕುಮಾರ್ ಅವರು ಈ ಕ್ಷೇತ್ರದಲ್ಲಿ ಏನಾದರೂ ಶಾಶ್ವತ ಕೆಲಸಗಳನ್ನು ಮಾಡಬೇಕೆನ್ನುವ ಉದ್ದೇಶವಿಟ್ಟುಕೊಂಡು ಶ್ರಮಿಸುತ್ತಿದ್ದಾರೆ ಅವರ ಎಲ್ಲಾ ಕಾರ್ಯಗಳಿಗೂ ನಮ್ಮ ಬೆಂಬಲ ಸಹಕಾರ ಇದ್ದೇ ಇರುತ್ತದೆ ಎಂದು ನುಡಿದರು.
ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ,
ಸಂವಿಧಾನದಿಂದ ಈ ದೇಶದಲ್ಲಿ ಎಲ್ಲಾರೂ ಸಮಾನತೆಯಿಂದ ಸ್ವಾಭಿಮಾನದಿಂದ ಬದುಕುವ ಹಕ್ಕು ಎಲ್ಲರಿಗೂ ದೊರೆತಿದ್ದು ನಾವು ಸಂವಿಧಾನವನ್ನು ಗೌರವಿಸಬೇಕು, ಸಂವಿಧಾನದ ಆಶಯದಂತೆ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ್ಮ ನಾಡಿನಲ್ಲಿ ಹುಟ್ಟಿ ಸಂವಿಧಾನವನ್ನು ಬರೆಯಲಿಲ್ಲ ಎಂದರೆ ನಾನು ಈ ದಿನ ಸಂಸದನಾಗಲು ಸಾಧ್ಯವೇ ಆಗುತ್ತಿರಲಿಲ್ಲ ದೀನ ದಲಿತರು ಹಿಂದುಳಿದ ಶೋಷಿತ ವರ್ಗದವರು ಅಧಿಕಾರ ಹಿಡಿಯುವುದು ಬರೀ ಕನಸನ್ನು ಕಾಣಬೇಕಾಗಿತ್ತ ಎಂದರು.
ಅಧ್ಯಕ್ಷತೆ ವಹಿಸಿ ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ,ಅತಿ ಹಿಂದುಳಿದ ಕ್ಷೇತ್ರವಾದ ಶಿಡ್ಲಘಟ್ಟ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಇಲ್ಲಿ ಅಂಬೇಡ್ಕರ್ ಭವನ ಇಲ್ಲ,, 100 ಹಾಸಿಗೆಗಳ ಆಸ್ಪತ್ರೆ ಇಲ್ಲದಿರುವ ತಾಲ್ಲೂಕು ಕೇಂದ್ರ ಇದೊಂದೆ ಇರಬೇಕು, ಈ ಹಿಂದೆ ಅಧಿಕಾರ ನಡೆಸಿದವರ ಸ್ವಾರ್ಥವೋ, ದೂರದೃಷ್ಠಿಯ ಕೊರತೆಯೋ ಇಲ್ಲಿ ಮೂಲ ಸೌಕರ್ಯಗಳು ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ನಮ್ಮ ಶಿಡ್ಲಘಟ್ಟ ಕ್ಷೇತ್ರವನ್ನು ಒಂದು “ಬ್ರಾಂಡ್ ನೇಮ್” ಬರುವಂತೆ ಇಲ್ಲಿ ಅಭಿವೃದ್ದಿ ಕಾರ್ಯಗಳನ್ನು ನಾನು ಕೈಗೊಳ್ಳುತ್ತೇನೆ, ಅಭಿವೃದ್ದಿ ವಿಚಾರದಲ್ಲಿ ಇಡೀ ರಾಜ್ಯ ಶಿಡ್ಲಘಟ್ಟ ಕ್ಷೇತ್ರದತ್ತ ನೋಡುವಂತೆ ಮಾಡುತ್ತೇನೆ ಅದಕ್ಕೆ ನಿಮ್ಮೆಲ್ಲರ ಸಹಕಾರ ಇರಬೇಕು ಎಂದು ಮನವಿ ಮಾಡಿದರು.
ಸತತ 30 ವರ್ಷಗಳಿಂದಲೂ ದಲಿತಪರ ಸಂಘಟನೆಗಳ ಮುಖಂಡರ ಹೋರಾಟದ ಪ್ರತಿಫಲವಾಗಿ ಇಂದು ಶಿಡ್ಲಘಟ್ಟದಲ್ಲಿ 10 ಕೋಟಿ ರೂ.ವೆಚ್ಚದ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರುತ್ತಿದ್ದು ಈ ಕೀರ್ತಿ ಎಲ್ಲಾ ದಲಿತ ಸಂಘಟನೆಗಳ ಮುಖಂಡರು, ಹೋರಾಟಗಾರರಿಗೆ ಸಲ್ಲಬೇಕೆಂದು ಬಯಸಿದರು.
ನಾಗರಿಕ ಆಹಾರ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಮೊಭೈಲ್ ಮೂಲಕ ಮೈಕ್ ನಲ್ಲಿ ಸಭೆಯಲ್ಲಿ ಮಾತನಾಡಿ ಬೆಂಗಳೂರಿನ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರಿಂದ ಸಭೆಗೆ ಬರಲಾಗಲಿಲ್ಲ ಐತಿಹಾಸಿಕ ಅಂಬೇಡ್ಕರ್ ಭವನಕ್ಕೆ ಸರ್ಕಾರದ ವತಿಯಿಂದ ಎನೇ ಕೆಲಸವಿದಧರು ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕರಿಗೆ ಭರವಸೆ ನೀಡಿದ ಅವರು ಎಲ್ಲಾರಿಗು ಡಾ. ಅಂಬೇಡ್ಕರ್ ಜಯಂತಿಯ ಶುಭಾಶಯ ಕೋರಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶಾಸಕ ಬಿ.ಎನ್.ರವಿಕುಮಾರ್ ಹಾಗೂ ಸಂಸದ ಎಂ.ಮಲ್ಲೇಶ್ ಬಾಬು ಬೃಹತ್ ಅದ್ದೂರಿ ಮೆರವಣಿಗೆಗೆ ಚಾಲನೆ ನೀಡಿದರು.
ಸರ್ಕಾರಿ ಬಸ್ ನಿಲ್ದಾಣದಿಂದ ನಾನಾ ಜನಪದ ಕಲಾ ತಂಡ, ಅಂಬೇಡ್ಕರ್ ಮುತ್ತಿನ ಪಲ್ಲಕಿಯ ಉತ್ಸವದ ಮೆರವಣಿಗೆ ವಿವಿಧ ಕಲಾ ತಂಡಗಳೊಂದಿಗೆ ಬೃಹತ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆಯೊಂದಿಗೆ ಕಲಾತಂಡಗಳೊಂದಿಗೆ ಸಾಗಿತು.
ಇದೇ ವೇಳೆ ಎಸ್,ಎಸ್,ಎಲ್,ಸಿ ಹಾಗು ಪಿಯುಸಿಯ 100 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಸಕ ಬಿ.ಎನ್.ರವಿಕುಮಾರ್ ಅವರು ಪ್ರತಿಬಾ ಪುರಸ್ಕಾರ ನೀಡಿ ಸನ್ಮಾನಿಸಿದರು.
ಶಾಸಕರ ಅನುದಾನದಲ್ಲಿ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು,
ಕಾರ್ಮಿಕ ಇಲಾಖೆಯಿಂದ ಅರ್ಹ 150 ಕಟ್ಟಡ ಕಾರ್ಮಿಕರಿಗೆ ಕಿಟ್ ಗಳನ್ನು ವಿತರಿಸಿದರು.
ಸಣ್ಣ ಕೈಗಾರಿಕೆ ಇಲಾಖೆ ವತಿಯಿಂದ ಟ್ರೈಲರ್ ಮಿಷನ್ ಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯಸಭೆಯ ಮಾಜಿ ಸದಸ್ಯ ಎಲ್.ಹನುಮಂತಯ್ಯ,0ತಹಶೀಲ್ದಾರ್ ಬಿ.ಎನ್.ಸ್ವಾಮಿ,ತಾಲ್ಲೂಕು ಪಂಚಾಯತಿ ಇಒ ಹೇಮಾವತಿ ಸಿ. ವೆಂಕಟನಾರಾಯಣಮ್ಮ, ನಗರಸಭೆ ಅದ್ಯಕ್ಷಎಂ.ವಿ. ವೆಂಕಟಸ್ವಾಮಿ,ಉಪಾದ್ಯಕ್ಷೆ ರೂಪಾ ನವೀನ್,
ಪಿ.ಎಲ್.ಡಿ.ಬ್ಯಾಂಕ್ ಅದ್ಯಕ್ಷ ಬಂಕ್ ಮುನಿಯಪ್ಪ,ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮಂಜುನಾಥ್, ಸಿ.ವಿ.ಲಕ್ಷ್ಮಣ್ ರಾಜು,0ನಗರಸಭೆ ಆಯುಕ್ತ ಮೋಹನ್ ಕುಮಾರ್,ತಾಲ್ಲೂಕು ವೈದ್ಯಾದಿಕಾರಿ ವೆಂಕಟೇಶ್ ಮೂರ್ತಿ,ಆರಕ್ಷಕ ವೃತ್ತ ನಿರೀಕ್ಷಕ ಶ್ರೀನಿವಾಸ್,ಸಮಾಜ ಕಲ್ಯಾಣ ಇಲಾಖೆಯ ಎಂ.ಜಗದಝಶ,ಸರ್ಕಾರಿ ನೌಕರರ ಸಂಘದ ಅದ್ಯಕ್ಷ,ಕೆ.ಎನ್. ಸುಬ್ಬಾರೆಡ್ಡಿ,ವಕೀಲರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಬಶೆಟ್ಟಿಹಳ್ಳಿ ವೆಂಕಟೇಶ್, ತಾದೂರು ರಘು,ಸೀಕಲ್ ಆನಂದ ಗೌಡ,ಗಂಜಿಗುಂಟೆ ನರಸಿಂಹಮೂರ್ತಿ,
ಕುಂದಲಗುರ್ಕಿ ಮುನೀಂದ್ರ,ತಾತಹಳ್ಳಿ ಚಲಪತಿ, ಕೆ.ಎಸ್.ಮಂಜುನಾಥ್,ಆರ್.ಎ.ಉಮೇಶ್,ಎಂ.ರಮೇಶ್,
ಸಮಾಜ ಸೇವಕ ಹೆಚ್.ಆರ್.ಸಂದೀಪ್ ರೆಡ್ಡಿ ತಾಲ್ಲೂಕಿನ ಎಲ್ಲಾ ದಲಿತಪರ,ಕನ್ನಡಪರ,ರೈತಪರ ಸೇರಿದಂತೆ ಇತರೆ ಸಂಘಟನೆಗಳು, ವಿವುಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.