ಎನ್‌ಪಿಎಸ್ ಇಂಡಿಯಾ 2025 ರಲ್ಲಿ 3 ಚಿನ್ನದ ಪದಕ ಗೆದ್ದ ಭಾನುಪ್ರಕಾಶ್, ನ್ಯಾಷನಲ್ ಪೋಕರ್ ಚಾಂಪಿಯನ್ ಶೋಡೌನ್‌ಗೆ ಕರ್ನಾಟಕದಿಂದ ಆಯ್ಕೆ
ವಿಜಯ ದರ್ಪಣ ನ್ಯೂಸ್….
ಎನ್‌ಪಿಎಸ್ ಇಂಡಿಯಾ 2025 ರಲ್ಲಿ 3 ಚಿನ್ನದ ಪದಕ ಗೆದ್ದ ಭಾನುಪ್ರಕಾಶ್, ನ್ಯಾಷನಲ್ ಪೋಕರ್ ಚಾಂಪಿಯನ್ ಶೋಡೌನ್‌ಗೆ ಕರ್ನಾಟಕದಿಂದ ಆಯ್ಕೆ
ಕರ್ನಾಟಕ,, ಏಪ್ರಿಲ್ 11, 2025: ಕರ್ನಾಟಕದ ಭಾನುಪ್ರಕಾಶ್ ಕೆ ಸಿ ಅವರು ರಾಷ್ಟ್ರೀಯ ಪೋಕರ್ ಸಿರೀಸ್ (ಎನ್‌ಪಿಎಸ್) ಇಂಡಿಯಾ 2025 ರಲ್ಲಿ ವಿಜಯ ಸಾಧಿಸುವ ಮೂಲಕ ಭಾರತೀಯ ಪೋಕರ್ ಜಗತ್ತಿನಲ್ಲಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಅವರು ಒಟ್ಟು 72.72 ಲಕ್ಷ ರೂ. ಗೆದ್ದಿದ್ದು, ಮೂರು ಚಿನ್ನ ಹಾಗೂ ಎರಡು ಬೆಳ್ಳಿ ಸೇರಿದಂತೆ ಐದು ಪದಕಗಳನ್ನು ಗೆದ್ದಿದ್ದಾರೆ. ಭಾನುಪ್ರಕಾಶ್ ಅವರು ಭಾರತದ ಪೋಕರ್ ಆಟಗಾರರಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಷ್ಟೇ ಅಲ್ಲ, ತನ್ನ ರಾಜ್ಯಕ್ಕೆ ಅಪಾರ ಹೆಮ್ಮೆ ತಂದಿದ್ದಾರೆ.
ಈ ಅಭೂತಪೂರ್ವ ವಿಜಯದ ನಂತರದಲ್ಲಿ ಭಾನುಪ್ರಕಾಶ್ ಅವರು 5 ದಿನದ ರಾಷ್ಟ್ರೀಯ ಪೋಕರ್ ಚಾಂಪಿಯನ್ (ಎನ್‌ಪಿಸಿ) ಶೋಡೌನ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಇದು ಏಪ್ರಿಲ್ 13 ರಿಂದ 17 ರ ವರೆಗೆ ನಡೆಯಲಿದೆ. ದೇಶದ 12 ಉತ್ತಮ ಆಟಗಾರರು ಎನ್‌ಪಿಸಿಯಲ್ಲಿ ಆಡಲಿದ್ದಾರೆ. ಪ್ರತಿಯೊಬ್ಬರೂ ಎನ್‌ಪಿಎಸ್ ಇಂಡಿಯಾ 2025 ರಲ್ಲಿ ಅದ್ಭುತ ಕಾರ್ಯಕ್ಷಮತೆಯನ್ನು ತೋರುವ ಮೂಲಕ ಅಪಾರ ಮನ್ನಣೆ ಗಳಿಸಿದ್ದು, ಇವರು ತಮ್ಮ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.
ವಿಜೇತರಿಗೆ 1 ಕೋಟಿ ಬಹುಮಾನವಿದ್ದು, ವಿಜೇತ ರಾಜ್ಯದ ಆಟಗಾರರಿರಿಗೆ ಫ್ರೀರೋಲ್‌ಗೆ ಹೆಚ್ಚುವರಿ 1 ಕೋಟಿ ರೂ. ನೀಡಲಾಗುತ್ತದೆ. ಎನ್‌ಪಿಸಿ ಶೋಡೌನ್‌ನಲ್ಲಿ ಭಾನುಪ್ರಕಾಶ್ ಗೆದ್ದರೆ, ಪೋಕರ್‌ಬಾಝಿಯಲ್ಲಿ ನಡೆಯಲಿರುವ 1 ಕೋಟಿ ರೂ. ಫ್ರೀರೋಲ್ ಟೂರ್ನಮೆಂಟ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆಯುತ್ತಾರೆ.
ಭಾನುಪ್ರಕಾಶ್ ಅವರು ಅತ್ಯಂತ ಪರಿಶ್ರಮದಿಂದ ಈ ಹಂತವನ್ನು ತಲುಪಿದ್ದಾರೆ. ಬಾಲ್ಯದಿಂದಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಅವರು ಕಾರ್ಯತಂತ್ರ ಮತ್ತು ಸ್ಫರ್ಧೆಯನ್ನು ಅತ್ಯಂತ ಶ್ರದ್ಧೆಯನ್ನು ನಿರ್ವಹಿಸುತ್ತಾರೆ. ಸಿನಿಮಾ ನಿರ್ದೇಶನದಲ್ಲಿ ವೃತ್ತಿ ಜೀವನವನ್ನು ಕಟ್ಟಿಕೊಳ್ಳಲು ಹೊರಟ ಅವರಿಗೆ ಪೋಕರ್ ಅತ್ಯಂತ ಆಸಕ್ತಿಯ ಕ್ರೀಡೆಯಾಗಿ ಕಾಣಿಸಿದೆ. ಸಾಫ್ಟ್‌ವೇರ್ ವೃತ್ತಿಯಲ್ಲಿದ್ದ ಅವರು ನಂತರ ಪೂರ್ಣಕಾಲಿಕ ಪೋಕರ್ ಆಟಗಾರರಾಗಿ ಹೊರಹೊಮ್ಮಿದರು. ಗಮನ ಕೇಂದ್ರೀಕರಣ, ಶಿಸ್ತು ಪಾಲನೆ ಮತ್ತು ತುಂಬಾ ಸಮಯದವರೆಗೆ ಸಹನೆಯಿಂದ ಕಾಯುವ ಗುಣಗಳನ್ನು ಬೆಳೆಸಿಕೊಳ್ಳಲು ಅವರು ಪೋಕರ್ ಆಡಲು ಶುರು ಮಾಡಿದ್ದರು. ಕರ್ನಾಟಕದ ರಾಮನಗರದ ಮೂಲದವರಾದ ಭಾನುಪ್ರಕಾಶ್, ವಿಶ್ಲೇಷಣಾ ಮನಸ್ಥಿತಿಗೆ ಹೆಸರಾದವರು ಮತ್ತು ಹವ್ಯಾಸವಾಗಿದ್ದ ಕ್ರೀಡೆಯೊಂದನ್ನು ವೃತ್ತಿಪರ ಕ್ರೀಡೆಯನ್ನಾಗಿಸುವಲ್ಲಿ ಹಾಕಿದ ಪರಿಶ್ರಮಕ್ಕೆ ಮೆಚ್ಚುಗೆ ಪಡೆದಿದ್ದಾರೆ.
ಎನ್‌ಪಿಎಸ್ ಇಂಡಿಯಾ 2025 ರ ಆವೃತ್ತಿಯಲ್ಲಿ 191 ರಲ್ಲಿ 190 ಟೂರ್ನಮೆಂಟ್‌ಗಳನ್ನು ಪೂರ್ತಿಗೊಳಿಸಿದ್ದಾರೆ ಮತ್ತು ಆ ಪೈಕಿ 158 ಅನ್ನು ಗೆದ್ದಿದ್ದಾರೆ. ಎನ್‌ಪಿಎಸ್ ಇಂಡಿಯಾ 2025 ಸಿರೀಸ್ ಲೀಡರ್‌ಬೋರ್ಡ್‌ನಲ್ಲಿ ಅಗ್ರಪಂಕ್ತಿಯಲ್ಲಿದ್ದಾರೆ. ಒಟ್ಟಾರೆಯಾಗಿ ಅವರು 72.72 ಲಕ್ಷ ರೂ. ಅನ್ನು ಪಡೆದಿದ್ದಾರೆ. ಎನ್‌ಪಿಎಸ್ ಹೊರತಾಗಿ ಭಾನುಪ್ರಕಾಶ್ ಅವರು ಪೋಕರ್‌ಬಾಝಿಯಲ್ಲಿ ಪ್ರಸ್ತುತ 3.69 ಕೋಟಿ ರೂ. ಗೆದ್ದಿದ್ದಾರೆ.
ಭಾನುಪ್ರಕಾಶ್ ಕೆಸಿ ಅವರು ತನ್ನ ಯಶಸ್ಸಿಗೆ ಸ್ಥಿರತೆ, ಭಾವನಾತ್ಮಕ ಸಹಿಷ್ಣುತೆ ಮತ್ತು ಗುಣಮಟ್ಟದ ನಿರ್ಧಾರವನ್ನು ಮಾಡುವ ಮನಸ್ಥಿತಿಯೇ ಕಾರಣ ಎಂದಿದ್ದಾರೆ. “ಪೋಕರ್ ನಿಜಕ್ಕೂ ಮೈಂಡ್ ಗೇಮ್ ಆಗಿದ್ದು, ನಮ್ಮ ಸಹನೆಯನ್ನು ಪ್ರಶ್ನಿಸುತ್ತದೆ. ಇದಕ್ಕೆ ಸೂಕ್ಷ್ಮವಾಗಿ ಚಿಂತನೆ ನಡೆಸಬೇಕಾಗುತ್ತದೆ. ಇದು ನಮ್ಮ ಭಾವನಾತ್ಮಕ ಸಹಿಷ್ಣುತೆಯನ್ನು ಪರೀಕ್ಷಿಸುತ್ತದೆ. ಎನ್‌ಪಿಎಸ್ ಇಂಡಿಯಾ 2025 ರಲ್ಲಿ ಈ ಪಯಣವು ಕೇವಲ ಗೆಲ್ಲುವುದಾಗಿರಲಿಲ್ಲ. ಸ್ಥಿರವಾಗಿರುವುದು ಮತ್ತು ಪ್ರತಿ ಹಂತದಲ್ಲೂ ಕಲಿಯುವುದು ಮತ್ತು ಅತ್ಯಂತ ಉತ್ತಮ ನಿರ್ಧಾರಗಳನ್ನು ಮಾಡುವುದರ ಮೇಲೆ ಗಮನ ಕೇಂದ್ರೀಕರಿಸುವುದಾಗಿದೆ. ನ್ಯಾಷನಲ್ ಪೋಕರ್ ಚಾಂಪಿಯನ್ ಶೋಡೌನ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವುದು ನನಗೆ ಒಂದು ಗೌರವದ ಸಂಗತಿಯಾಗಿದೆ. ಬದ್ಧತೆ ಮತ್ತು ಶಿಸ್ತಿನ ಉತ್ಸಾಹವನ್ನು ಹೊತ್ತೊಯ್ಯುವುದಕ್ಕೆ ನಾನು ಹೆಮ್ಮೆ ಹೊಂದಿದ್ದೇನೆ”.
ನ್ಯಾಷನಲ್ ಪೋಕರ್ ಚಾಂಪಿಯನ್ ಶೋಡೌನ್‌ನ ಫಿನಾಲೆ ಏಪ್ರಿಲ್ 13 ರಿಂದ 17 ರ ವರೆಗೆ ನಡೆಯಲಿದ್ದು, ಇದು ಗೋವಾದಲ್ಲಿರಲಿದೆ. ಕೇವಲ 12 ಸ್ಪರ್ಧಿಗಳಿಗಷ್ಟೇ ಅಲ್ಲ, ಅವರ ಇಡೀ ರಾಜ್ಯಕ್ಕೂ ಇದು ಹೆಮ್ಮೆಯ ಮತ್ತು ಕುತೂಹಲದ ಕ್ಷಣವಾಗಿದೆ. ದೇಶದ ಪೋಕರ್ ಸಮುದಾಯವು ಈ ಟೂರ್ನಮೆಂಟ್‌ಗಳನ್ನು ಅತ್ಯಂತ ಕುತೂಹಲದಿಂದ ವೀಕ್ಷಿಸುತ್ತಿದೆ. ಈ ಕಾರ್ಯಕ್ರಮವನ್ನು ಮೈದಾನದಲ್ಲಿ ವೀಕ್ಷಿಸಬಹುದು ಮತ್ತು ಜಿಯೋಹಾಟ್‌ಸ್ಟಾರ್‌ನಲ್ಲಿ ಎಕ್ಸ್‌ಕ್ಲೂಸಿವ್ ಆಗಿಯೂ ವೀಕ್ಷಿಸಬಹುದಾಗಿದೆ. ಈ ಐತಿಹಾಸಿಕ ಕಾರ್ಯಕ್ರಮವು ಅತ್ಯಂತ ಮಹತ್ವದ ಕ್ಷಣವಾಗಿದೆ. ಭಾರತದ ಚಾಂಪಿಯನ್ ಯಾರು ಎಂಬುದನ್ನು ಈ ಫಿನಾಲೆ ನಿರ್ಧರಿಸಲಿದೆ. ಅಲ್ಲದೆ, ದೇಶದ ಮೈಂಡ್ ಸ್ಪೋರ್ಟ್‌ನಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ.