ವಿಜಯ ದರ್ಪಣ ನ್ಯೂಸ್…
ಐಟಿಸಿ ಕಂಪನಿ ಸ್ನೇಹ ಸಂಸ್ಥೆ ತಾಂಡವಪುರ ಗ್ರಾಮ ಪಂಚಾಯತಿ ಸಹಕಾರದಿಂದ :
ಅಭಿವೃದ್ಧಿಯತ್ತ ತಾಂಡವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ತಾಂಡವಪುರ ಏಪ್ರಿಲ್ 10 : ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ಐಟಿಸಿ ಕಂಪನಿ ಸ್ನೇಹ ಸಂಸ್ಥೆ ಹಾಗೂ ತಾಂಡವಪುರ ಗ್ರಾಮ ಪಂಚಾಯತಿಯ ಸಹಕಾರದಿಂದ ಈ ಸರ್ಕಾರಿ ಶಾಲೆಯನ್ನು ಸುಮಾರು 16 ಲಕ್ಷಕ್ಕೂ ಹೆಚ್ಚು ರೂಗಳು ವೆಚ್ಚದಲ್ಲಿ ನವೀಕರಣ ಮಾಡುವ ಮೂಲಕ ಯಾವುದೇ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲ ಎಂದು ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿಯತ್ತ ಸಾಗುತ್ತಿದ್ದು ಶಾಲೆಯು ವಿದ್ಯಾರ್ಥಿಗಳನ್ನು ಕೈಬಿಸಿ ಕರೆಯುತ್ತಿದೆ.
ತಾಂಡವಪುರ ಗ್ರಾಮವು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಸೂಚನೆವರೆಗೆ ತಮ್ಮ ಕಂಪನಿಯ ಸಿಎಸ್ಆರ್ ಅನುದಾನದಲ್ಲಿ ಸುಮಾರು 16 ಲಕ್ಷಕ್ಕೂ ಹೆಚ್ಚು ರೂಗಳ ವೆಚ್ಚದಲ್ಲಿ ನವೀಕರಣದ ಅಭಿವೃದ್ಧಿ ಕಾಮಗಾರಿಯನ್ನು ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ಕೈಗೆತ್ತಿಕೊಂಡು ಈಗಾಗಲೇ ಕಾಮಗಾರಿಯು ಶೇಕಡ 90ರಷ್ಟು ಪೂರ್ಣಗೊಂಡಿದ್ದು ಇನ್ನುಳಿದ ಸಣ್ಣಪುಟ್ಟ ಕೆಲಸಗಳನ್ನು ಸದ್ಯದಲ್ಲಿ ಮುಗಿಲಿದೆ ಎಂದು ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಗೇಶ್ ರವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರಿಗೆ ತಿಳಿಸಿದರು
ಈಗಾಗಲೇ ಶಾಲೆಯ ಸುತ್ತ ಹಾಗೂ ಒಳಭಾಗದಲ್ಲಿ ಬಣ್ಣವನ್ನು ಹೊಡೆಯಲಾಗಿದ್ದು ಜೊತೆಗೆ ಚಿತ್ರ ಬರಹಗಳನ್ನು ಸಹ ಬಿಡಿಸುವ ಶಾಲೆಯ ನೆಲ ಹಾಸಿಗೆಯಲ್ಲಿ ಸಹ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ನೆಲ ಹಾಸಿಗೆ ಏನು ಸಹ ನವೀಕರಣ ಮಾಡಲಾಗಿದ್ದು ಈ ಸಾರಿನ ಶೈಕ್ಷಣಿಕ ವರ್ಷದಿಂದ ಯುಕೆಜಿ ಎಲ್ಕೆಜಿ ಪ್ರಾರಂಭಿಸುವ ಉದ್ದೇಶವನ್ನು ಸರ್ಕಾರ ಹೊಂದಿದ್ದು, ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಸರ್ಕಾರಿ ಶಾಲೆಗೆ ಸೇರಿಸುವಂತೆ ಶಾಲೆಯ ಮುಖ್ಯ ಶಿಕ್ಷಕಿ ಮಹದೇವಮ್ಮ ಹಾಗೂ ಸಂಸ್ಥೆಯ ಯೋಗೇಶ್ ರವರು ಮನವಿ ಮಾಡಿದರು.