ದ್ವಿತೀಯ ಪಿಯುಸಿ ಫಲಿತಾಂಶ : ಶಿಡ್ಲಘಟ್ಟ ತಾಲ್ಲೂಕಿಗೆ ಉತ್ತಮ ಫಲಿತಾಂಶ
ವಿಜಯ ದರ್ಪಣ ನ್ಯೂಸ್…..
ದ್ವಿತೀಯ ಪಿಯುಸಿ ಫಲಿತಾಂಶ : ಶಿಡ್ಲಘಟ್ಟ ತಾಲ್ಲೂಕಿಗೆ ಉತ್ತಮ ಫಲಿತಾಂಶ
ಶಿಡ್ಲಘಟ್ಟ : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ನಗರದ Dolphin’s PU College ನ ತನಾಜ್ ಮಹಿ (Tannaz Mahi) ಎಂಬ ವಿದ್ಯಾರ್ಥಿನಿ ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಿಗೆ 591 ಅಂಕಗಳೊಂದಿಗೆ ಶೇ 98.5 ಫಲಿತಾಂಶವನ್ನು ಪಡೆಯುವ ಮೂಲಕ ರಾಜ್ಯಕ್ಕೆ 9 ನೇ rank , ಜಿಲ್ಲೆಗೆ ಎರಡನೇ rank ಮತ್ತು ತಾಲ್ಲೂಕಿಗೆ ಪ್ರಥಮ rank ಪಡೆದಿದ್ದಾರೆ.
ಇವರೊಂದಿಗೆ ಡಾಲ್ಫಿನ್ಸ್ ಪಿಯು ಕಾಲೇಜಿನ ತಾಸ್ಮೀಯಾ ಕೌಸರ್ 579 ಅಂಕಗಳೊಂದಿಗೆ ಶೇ 97 ಫಲಿತಾಂಶವನ್ನು ಪಡೆದು ತಾಲ್ಲೂಕಿಗೆ ನಾಲ್ಕನೇ rank ಪಡೆದಿದ್ದಾರೆ. ಇದರೊಂದಿಗೆ ಅಫ್ರೀನ್ ತಾಜ್ ಶೇ 95, ನಿಶತ್ ಅಂಜುಮ್ ಶೇ 94, ಝರೀನಾ ತಾಜ್ ಶೇ 92, ಝಯಿನಾ ತಬಸುಮ್ ಶೇ 92, ಚಿತ್ರಾ ಶೇ 91, ಮಾಹಿನ್ ಶೇ 91, ಪೂರ್ಣೀಮಾ ಶೇ 90, ರಿಹಾನುಲ್ಲಾ ಶರೀಫ್ ಶೇ 90 ಫಲಿತಾಂಶ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಬಿಜಿಎಸ್ ಪಿಯು ಕಾಲೇಜಿನ ಎಸ್.ಸಿ.ದೀಕ್ಷಿತ್ 586(97.66%),ಕೆ.ನೇಹ ಮತ್ತು ಕೆ.ಸಿ.ನಿಶ್ಚಿತ 584(97.33%), ಎಂ.ನಮಿತಾ 583(97.16%) ಅಂಕಗಳನ್ನು ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ತಾಲ್ಲೂಕಿನ ಎಚ್.ಕ್ರಾಸ್ ನ ಸಾಯಿ ವಿದ್ಯಾನಿಧಿ ನ್ಯಾಷನಲ್ ಪಿಯು ಕಾಲೇಜ್ ವಿದ್ಯಾರ್ಥಿನಿ ಎಸ್.ಹಂಸವೇಣಿ 579(96.5%) ಪಡೆದು ತಾಲ್ಲೂಕಿಗೆ ಪ್ರಥಮರಾಗಿದ್ದರೆ, ಡಾಲ್ಫಿನ್ಸ್ ಪಿಯು ಕಾಲೇಜಿನ ಕಿರಣ್ ಬಾಲ 576(95.8%) ಮತ್ತು ಬಿಜಿಎಸ್ ಪಿಯು ಕಾಲೇಜಿನ ವಿ.ಜೆ.ಪವನಶ್ರೀ 576(95.8%) ಅಂಕಗಳೊಂದಿಗೆ ತಾಲ್ಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಡಾಲ್ಫಿನ್ಸ್ ಪಿಯು ಕಾಲೇಜಿನ ನಂದಿನಿ ಶೇ 94 ಮೊಹಮ್ಮದಿ ಮಯುಸ್ಕಾನ್ ಶೇ 93, ತೇಜಸ್ವಿನಿ ಶೇ 92, ಮೊಹಮದ್ ಹುಸೈಬಾ ಶೇ 91, ಜೀವಿಕಾ ಶೇ 89 ಫಲಿತಾಂಶವನ್ನು ಪಡೆದಿದ್ದಾರೆ.
ಬಿಜಿಎಸ್ ಪಿಯು ಕಾಲೇಜಿನ ಟಿ.ಡಿ.ಪೂರ್ಣಶ್ರೀ ಮತ್ತು ಎಂ.ಪೃಥ್ವಿ 573(95.5%), ಕೆ.ಪ್ರಿಯಾಂಕ ಹಾಗು ಎ.ಗಾನವಿ 572(95.33%) ಅಂಕಗಳನ್ನು ಪಡೆದಿದ್ದಾರೆ.