ಪಶು ಆಸ್ಪತ್ರೆಯಲ್ಲಿ ರೈತರಿಗೆ ಉಚಿತವಾಗಿ ಮೇವಿನ ಬೀಜ ವಿತರಣೆ

ವಿಜಯ ದರ್ಪಣ ನ್ಯೂಸ್….

ಪಶು ಆಸ್ಪತ್ರೆಯಲ್ಲಿ ರೈತರಿಗೆ ಉಚಿತವಾಗಿ ಮೇವಿನ ಬೀಜ ವಿತರಣೆ


ತಾಂಡವಪುರ ಏಪ್ರಿಲ್ 8 : ಮುಂಗಾರು ಹಂಗಾಮು ಸುರ್ವಾದ ಹಿನ್ನೆಲೆಯಲ್ಲಿ ಮೈಸೂರ್ ತಾಲೂಕು ಕಡಕೋಳ ಗ್ರಾಮದ ಪಶು ಆಸ್ಪತ್ರೆಯಲ್ಲಿ ಸರ್ಕಾರಿ ಉಚಿತವಾಗಿ ನೀಡಿರುವ ಮೇವಿನ ಬೀಜವನ್ನು ರೈತರಿಗೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶ್ರೀಕಂಠ ತೊಂಡೆಗೌಡ ಪಶು ವೈದ್ಯಧಿಕಾರಿ ಎನ್ಎಂ ಮುದುಕರ ರವರು ವಿತರಿಸಿದರು

ಇದೇ ವೇಳೆ ಮಾತನಾಡಿದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶ್ರೀಕಂಠ ತೊಂಡೆಗೌಡರು ಈಗಾಗಲೇ ಮುಂಗಾರು ಶುರುವಾಗಿದ್ದು ಸರ್ಕಾರದಿಂದ ರೈತರಿಗೆ ಅನುಕೂಲವಾಗಲಿ ಎಂದು ಉಚಿತವಾಗಿ 5 ಕೆ.ಜಿ ಬ್ಯಾಗ್ ಉಳ್ಳ ಬಿತ್ತನೆ ಬೀಜವನ್ನು ನೀಡಲಾಗುತ್ತಿದ್ದು ರೈತರು ಒಳ್ಳೆಯ ತೇವಾಂಶ ನೋಡಿ ಬಿತ್ತನೆ ಮಾಡಿ ಎಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಕಡಕೋಳ ಶ್ರೀಕಂಠ ಪಶು ವೈದ್ಯಧಿಕಾರಿ ಮಧುಕರ್ ಎನ್ ಎಂ ಪಶು ವೈದ್ಯ ನಿರೀಕ್ಷಕಿ ಕೆ ಮಹಾಲಕ್ಷ್ಮಿ
ಪಶು ಆಸ್ಪತ್ರೆಯ ಕಾಂಪೌಂಡ್ ಸುರೇಶ್ ಹಾಗೂ ಗ್ರಾಮದ ಮುಖಂಡ ಈರಪ್ಪ  ಹಾಜರಿದ್ದರು.