ಏಕಕಾಲಕ್ಕೆ ತೆರಿಗೆಯನ್ನು ಪಾವತಿಸಿದರೆ ರಿಯಾಯಿತಿ: ಪೌರಾಯುಕ್ತ ಮೋಹನ್ ಕುಮಾರ್

ವಿಜಯ ದರ್ಪಣ ನ್ಯೂಸ್….

ಏಕಕಾಲಕ್ಕೆ  ತೆರಿಗೆಯನ್ನು ಪಾವತಿಸಿದರೆ ರಿಯಾಯಿತಿ: ಪೌರಾಯುಕ್ತ ಮೋಹನ್ ಕುಮಾರ್

ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಜಿಲ್ಲೆ : ಏಪ್ಗರಿಲ್ ಳಾಂತ್ಯಕ್ಕೆ ಎಲ್ಲಾ ಆಸ್ತಿಗಳಿಗೆ ಸಂಬಂಧಿಸಿದ ತೆರಿಗೆಯನ್ನು ಏಕಕಾಲದಲ್ಲಿ ಪಾವತಿಸಿದರೆ ಶೇ.5 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ನಗರಸಭೆ ಪೌರಾಯುಕ್ತ ವಿ. ಮೋಹನ್‌ ಕುಮಾರ್ ತಿಳಿಸಿದರು.

ನಗರದ ನಗರಸಭೆ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ  ಮಾತನಾಡಿದ ಅವರು 2025-26ನೇ ಸಾಲಿಗೆ ಖಾಲಿ ನಿವೇಶನ, ಮನೆ, ವಸತಿ ಹಾಗೂ ವಾಣಿಜ್ಯ ಸಂಕೀರ್ಣ ಸೇರಿ ಎಲ್ಲಾ ಆಸ್ತಿಗಳ ತೆರಿಗೆಯನ್ನು ಏಪ್ರಿಲ್ ತಿಂಗಳ ಅಂತ್ಯದೊಳಗೆ ಪಾವತಿಸಿದರೆ ಶೇ.5ರಷ್ಟು ರಿಯಾಯಿತಿ ಪಡೆದು ಕೊಳ್ಳಬಹುದು ಎಂದರು.

ಜುಲೈ ನಂತರ ಪಾವತಿಸುವವರಿಗೆ ಶೇ.2 ರಷ್ಟು ದಂಡ ವಿಧಿಸಲಾಗುವುದು ಹಾಗಾಗಿ ಸಕಾಲಕ್ಕೆ ಆಸ್ತಿ, ವಸತಿ ತೆರಿಗೆ, ಮಳಿಗೆ ಬಾಡಿಗೆ, ಉದ್ದಿಮೆ ಪರವಾನಗಿ ಶುಲ್ಕ, ಒಳ ಚರಂಡಿ ಸಂಪರ್ಕ ಶುಲ್ಕ, ನೀರಿನ ತೆರಿಗೆ ಹಾಗೂ ಜಾಹೀರಾತು ತೆರಿಗೆಯನ್ನು ಪಾವತಿಸಲು ಅವರು ತಿಳಿಸಿದರು.

ಬಾಕಿ ಎಲ್ಲಾ ತೆರಿಗೆಗಳನ್ನು ಪಾವತಿಸಿದವರು ಮಾತ್ರ ರಿಯಾಯಿತಿಗೆ ಅರ್ಹರಾಗುತ್ತಾರೆ. ನಗರದಲ್ಲಿ ಉತ್ತಮ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಎಲ್ಲ ಆಸ್ತಿ ಮಾಲೀಕರು ಸಹಕಾರ ನೀಡಿ, ತೆರಿಗೆ ಪಾವತಿಸುವ ಮೂಲಕ ನಗರಸಭೆಯೊಂದಿಗೆ ಕೈಜೋಡಿಸಬೇಕೆಂದು ಅವರು ಮನವಿ ಮಾಡಿದರು.