ನಮ್ಮ ಮನೆ ಮಗಳು ಪ್ರಶಸ್ತಿಯನ್ನು ಪ್ರಧಾನ ಮಾಡಿದ ಶ್ರೀ ಮಹಾ ತಪಸ್ವಿ ಫೌಂಡೇಶನ್
ವಿಜಯ ದರ್ಪಣ ನ್ಯೂಸ್…..
ಶ್ರೀ ಮಹಾ ತಪಸ್ವಿ ಫೌಂಡೇಶನ್ ನಮ್ಮ ಮನೆ ಮಗಳು ಪ್ರಶಸ್ತಿ ಪ್ರಧಾನ
ಶ್ರೀ ಮಹಾ ತಪಸ್ವಿ ಫೌಂಡೇಶನ್ ಸಂಸ್ಥೆಯು ಪ್ರತಿವರ್ಷ ಬರುವಂತಹ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿಭಿನ್ನವಾದ ಮತ್ತು ವಿಶೇಷವಾದ ಅಭಿಯಾನವನ್ನು ಮಾಡುತ್ತಾ ಬಂದಿರುತ್ತದೆ. ಈ ನಿಟ್ಟಿನಲ್ಲಿ ಈ ವರ್ಷದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಂಗಳಮುಖಿಯರ ಸಮುದಾಯಕ್ಕೆ ಏನಾದರೂ ವಿಶೇಷವಾದಂತಹ ಸ್ಥಾನಮಾನ ನೀಡುವ ಕುರಿತು ಚರ್ಚಿಸಿದಾಗ ಪುರುಷರಾಗಿ ಹುಟ್ಟಿ ಮಹಿಳೆಯ ಭಾವನೆಯನ್ನು ಹೊಂದಿ ಸಮಾಜದಲ್ಲಿ ಅಪಾರ ಸಾಧನೆಯನ್ನು ಮಾಡಿರುವಂತಹ ಮಂಗಳ ಮುಖಿಯರನ್ನು ಗುರುತಿಸಿ ಅವರಿಗೆ ನಮ್ಮ ಮನೆ ಮಗಳು ಎನ್ನುವ ಪ್ರಶಸ್ತಿಯನ್ನು ನೀಡಿ ಗೌರವಿಸುವ ಜೊತೆಗೆ ನೀವು ಕೂಡ ಈ ಸಮಾಜದ ಕಣ್ಣು ,ನೀವು ಎಲ್ಲರಂತೆ ಹೆಮ್ಮೆಯ ಹೆಣ್ಣು ಎಂದು ಅಭಿನಂದಿಸಲಾಗಿದೆ.
ಈ ನಿಟ್ಟಿನಲ್ಲಿ ಮಂಗಳಮುಖಿ ಸಮುದಾಯವನ್ನು ಅತ್ಯಂತ ಎತ್ತರ ಮಟ್ಟದಲ್ಲಿ ಕೊಂಡೊಯ್ಯಲು ಪ್ರಯತ್ನಿಸುತ್ತಿರುವ ಡಾ ಗೀತಾ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿ ಬೆಂಗಳೂರಿನಲ್ಲಿ ಅವರಿಗೆ ನಮ್ಮಮನೆ ಮಗಳು ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಡಾ ಗೀತಾ ರವರು ಅವರು ಫೌಂಡೇಶನ್ ನ ಕಾರ್ಯವೈಖರ್ಯ ಬಗ್ಗೆ ಹಾಗೂ ತೃತೀಯ ಲಿಂಗಿಗಳ ಒಂದು ಉದ್ಧಾರಕ್ಕಾಗಿ ಫೌಂಡೇಶನ್ ಶ್ರಮಿಸುತ್ತಿರುವುದನ್ನು ಕಂಡು ಸಂತೋಷ ವ್ಯಕ್ತಪಡಿಸಿ ನಿಮ್ಮ ಸಂಸ್ಥೆ ಜೊತೆಗೆ ನಮ್ಮ ಎಲ್ಲಾ ಕಾರ್ಯಕರ್ತರು ಜೊತೆಗಿದ್ದೇವೆ ಎನ್ನುವಂತ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಬೆಂಗಳೂರು ಶಾಖೆಯ ಲಕ್ಷ್ಮಿ, ರಾಜೇಶ್ವರಿ, ವಾಗೀಶ್, ಗಿರಿಜಾ, ಭವ್ಯವಾಗೀಶ್, ಗಾಯತ್ರಿ, ಲಕ್ಷ್ಮಿ ಹರಿನಾಥ್ ಹಾಗೂ ಹೊಸೂರು ಭಾಗದ ಚಂದ್ರಶೇಖರ್ ರವರು ಉಪಸ್ಥಿತರಿದ್ದರು. ಸ್ವಯಂಸೇವಕ ಅನಿಲ್ ರವರು ಭಾಗವಹಿಸಿದ್ದರು.