ಕೊಡಗುರ್ಕಿಯಲ್ಲಿ ನೂತನ ಪಶು ಆಸ್ಪತ್ರೆಗೆ ಸಚಿವ ಕೆ ಎಚ್.ಮುನಿಯಪ್ಪ ಶಂಕು ಸ್ಥಾಪನೆ
ವಿಜಯ ದರ್ಪಣ ನ್ಯೂಸ್…
ಕೊಡಗುರ್ಕಿಯಲ್ಲಿ ನೂತನ ಪಶು ಆಸ್ಪತ್ರೆಗೆ ಸಚಿವ ಕೆ ಎಚ್.ಮುನಿಯಪ್ಪ ಶಂಕು ಸ್ಥಾಪನೆ
ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಪ್ರಿಲ್ 05 :- ತಾಲ್ಲೂಕಿನ ಬಹುತೇಕ ಕುಟುಂಬಗಳು ಹೈನುಗಾರಿಕೆಯನ್ನು ಉಪಕಸುಬಾಗಿಸಿಕೊಂಡಿವೆ. ಸಾಕು ಪ್ರಾಣಿಗಳು ಅನಾರೋಗ್ಯಕ್ಕೆ ತುತ್ತಾದಾಗ ದೂರದೂರಿಗೆ ತೆರಳಿ ಚಿಕಿತ್ಸೆ ನೀಡುವುದು ಕಷ್ಟ ಸಾಧ್ಯ ಹಾಗಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಪಶುಪಾಲನ ಆಸ್ಪತ್ರೆ ತೆರೆಯುವುದರಿಂದ ಜಾನುವಾರುಗಳನ್ನು ಅವಲಂಬಿಸಿ ರುವ ರೈತರಿಗೆ ಹೆಚ್ಚಿನ ಅನುಕೂಲ ಪಡೆಯಲಿದ್ದಾರೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆಎಚ್.ಮುನಿಯಪ್ಪ ಅಭಿಪ್ರಾಯಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡುಗುರ್ಕಿ ಸಿಸಿ ರಸ್ತೆ, ಪ್ರಯಾಣಿಕರ ತಂಗುದಾಣ, ಪಶು ಆಸ್ಪತ್ರೆ, ಸೇರಿದಂತೆ ಸುಮಾರು 65 ಲಕ್ಷದ ರೂ ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಬಿದಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು ಮಾತನಾಡಿ, ಕೃಷಿ, ತೋಟಗಾರಿಕೆ ಜೀವಾಳವಾಗಿರುವ ಜಿಲ್ಲೆಯಲ್ಲಿ ಹೈನುಗಾರಿಕೆ ಅವಲಂಬಿಸಿರುವ ಸಾವಿರಾರು ಕುಟುಂಬಗಳಿವೆ. ಪಶುಗಳು ಅನಾರೋಗ್ಯಕ್ಕೆ ತುತ್ತಾದರೆ ಸಕಾಲಕ್ಕೆ ಚಿಕಿತ್ಸೆ ಕೊಡಿಸಲು ಪರದಾಡುವ ಹೈ ನುಗಾರರು ಪ್ರೀತಿಯಿಂದ ಸಲುಹಿದ ಜಾನುವಾರು ಕಣ್ಣೆದುರು ಮೃತಪಡುವ ಸನ್ನಿವೇಶ ನೋಡಲಾಗದೆ ಹೈನುಗಾರಿಕೆಯಿಂದ ವಿಮುಖಗೊಳ್ಳುವ ಸ್ಥಿತಿ ಇದೆ. ಇಂತಹ ದುಸ್ಥಿತಿಯನ್ನು ತಪ್ಪಿಸುವ ಉದ್ದೇಶದಿಂದ ನಮ್ಮ ಪಂಚಾಯಿತಿ ವ್ಯಾಪ್ತಿಯ ಕೋಡುಗುರ್ಕಿಯಲ್ಲಿ ನೂತನ ಪಶು ಆಸ್ಪತ್ರೆಯನ್ನು ನಿರ್ಮಿಸಲು ಮಂತ್ರಿಗಳು ಮನಸ್ಸು ಮಾಡಿರುವುದು, ಅವರ ಸಾಮಾಜಿಕ ಕಳಕಳಿಗೆ ಗ್ರಾಮಸ್ಥರೆಲ್ಲರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಪಶು ಆಸ್ಪತ್ರೆ ತೆರೆಯುವ ಬಹು ದಿನಗಳ ಬೇಡಿಕೆ ಈಡೇರಿರುವುದು ನಿಜಕ್ಕೂ ಸಂತಸ ತಂದಿದೆ.
ಈ ಸಂದರ್ಭದಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಾಂತಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಚನ್ನಹಳ್ಳಿ ರಾಜಣ್ಣ, ಹಿರಿಯ ಮುಖಂಡ ಅಶ್ವತ್ ನಾರಾಯಣ್, ಪಶುಪಾಲನ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಜಗದೀಶ್, ತಾಲೂಕು ಆಡಳಿತ ವೈದ್ಯಧಿಕಾರಿ ಡಾ. ಅನಿಲ್, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ಪ್ರಧಾನ ಕಾರ್ಯದರ್ಶಿ ಮಾಳಿಗೇನಹಳ್ಳಿ ನಾಗೇಗೌಡ, ಬಿದಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು,ಉಪಾಧ್ಯಕ್ಷ ಜ್ಞಾನೇಶ್ವರಿ ಸದಸ್ಯರಾದ ಪ್ರಕಾಶ್ ಪಿಡಿಒ ಸಿದ್ದರಾಜು, ಸಾವಕನಹಳ್ಳಿ ಎಂ ಪಿ ಸಿ ಎಸ್ ಅಧ್ಯಕ್ಷ ಎಸ್ ಪಿ ಮುನಿರಾಜು, ಕೋಡಗುರ್ಕಿ ಸುರೇಶ್, ಹಾಗೂ ಊರಿನ ಗ್ರಾಮಸ್ಥರಾದ ಮನೋಹರ್, ಶ್ರೀನಿವಾಸ್, ಚೇತನ್, ಪ್ರಮೋದ್, ರಮೇಶ್, ಅನೀಲ್, ಮುನಿಕೃಷ್ಣ ಉಪಸ್ಥಿತರಿದ್ದರು.