ಶ್ರೀ ಪ್ರಸನ್ನ ನಂಜುಂಡೇಶ್ವರ ದೇವಾಲಯದಲ್ಲಿ ಯುಗಾದಿ ಹೋಕುಳಿ ಉತ್ಸವ

ವಿಜಯ ದರ್ಪಣ ನ್ಯೂಸ್…

 ಶ್ರೀ ಪ್ರಸನ್ನ ನಂಜುಂಡೇಶ್ವರ ದೇವಾಲಯದಲ್ಲಿ ಯುಗಾದಿ ಹೋಕುಳಿ ಉತ್ಸವ

ತಾಂಡವಪುರ ಮಾರ್ಚ್ 30 ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಚಿಕ್ಕಯ್ಯನ ಛತ್ರ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧಿ ಉಳ್ಳ ಹಳೆ ಶ್ರೀ ಪ್ರಸನ್ನ ನಂಜುಂಡೇಶ್ವರ ದೇವಾಲಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಯುಗಾದಿ ಹೋಬಳಿ ಉತ್ಸವವು ಬಹಳ ವಿಜೃಂಭಣೆ ಜರುಗಿತು.

ಯುಗಾದಿ ಹಬ್ಬದ ಪ್ರಯುಕ್ತ ಇಂದು ಬೆಳಿಗ್ಗೆಯಿಂದಲೂ  ದೇವಾಲಯದಲ್ಲಿ ವಿಶೇಷ ಪೂಜೆ ಅಭಿಷೇಕಗಳು ನಡೆದವು ಅಲ್ಲದೆ ಪ್ರತಿ  ವರ್ಷದಂತೆ ಈ ವರ್ಷವೂ ಯುಗಾದಿ ಹಬ್ಬದ ಪ್ರಯುಕ್ತ ಕಪಿಲ ನದಿಯಿಂದ ಗಂಗಾ ಪೂಜೆ ಮಾಡಿ ಕಳಸದಲ್ಲಿ ನೀರು ತುಂಬಿಕೊಂಡು ಹೆಣ್ಣು ಮಕ್ಕಳ ತಲೆ ಮೇಲೆ ಹೊತ್ತು ವಾದ್ಯಗೋಷ್ಠಿ ಮೂಲಕ ಮೆರವಣಿಗೆ ಮಾಡಿಕೊಂಡು ದೇವಾಲಯದ ಮುಂಭಾಗದಲ್ಲಿರುವ ಕೊಳದಲ್ಲಿ ಪೂಜೆ ಮಾಡಿ ನಂತರ ಗಂಗೆಯನ್ನು ಕೊಳದಲ್ಲಿ ಹಾಕುವ ಮೂಲಕ ದೇವಾಲಯದ ಮುಖ್ಯ ಅರ್ಚಕ ವೆಂಕಟೇಶ್ ರವರು ಒಕುಳಿ ಉತ್ಸವಕ್ಕೆ ಚಾಲನೆ ನೀಡಿದರು.

ಈ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ಪುರಸ್ಕಾರಗಳನ್ನು ನೆರವೇರಿಸುವ ಮೂಲಕ ಈ ವರ್ಷ ಉತ್ತಮ ಮಳೆ ಬೆಳೆಯಾಗಲಿ ರೈತಾಪಿ ವರ್ಗದವರು ಸಮೃದ್ಧ ಬೆಳೆಯನ್ನು ಬೆಳೆಯುವಂತಾಗಲಿ ಭಕ್ತಾದಿಗಳಿಗೆ ಶ್ರೀ ಪ್ರಸನ್ನ ನಲಿವೇಶ್ವರ ಸ್ವಾಮಿ ಅವರು ಆಯಸ್ಸು ಆರೋಗ್ಯ ಸುಖ ಸಂತೋಷ ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದರು .

ಇದೇ ವೇಳೆ ಬಂದಂತ ಭಕ್ತಾದಿಗಳಿಗೆ ದೇವಾಲಯದ ವತಿಯಿಂದ ಪ್ರಸಾದ ವಿನಿಯೋಗವನ್ನು ಮಾಡಲಾಗಿತ್ತು .ಈ ಯುಗಾದಿ ಉತ್ಸವದಲ್ಲಿ ಚಿಕ್ಕಯ್ಯನ ಛತ್ರ ಬಂಚಳ್ಳಿ ಹುಂಡಿ ತಾಂಡವಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳು ಭಕ್ತಾದಿಗಳು ಭಾಗವಹಿಸಿ ದೇವರ ಕೃಪೆಗೆ ಪಾತರಾದರು.