ತಲೆ ಗಟ್ಟಿಗಿದೆ ಅಂತ ಕಲ್ ಬೆಟ್ಟಕ್ಕೆ ಡಿಚ್ಚಿ ಹೊಡೆಯಕ್ ಆಯ್ತದ…?
ವಿಜಯ ದರ್ಪಣ ನ್ಯೂಸ್….
ತಲೆ ಗಟ್ಟಿಗಿದೆ ಅಂತ ಕಲ್ ಬೆಟ್ಟಕ್ಕೆ ಡಿಚ್ಚಿ ಹೊಡೆಯಕ್ ಆಯ್ತದ…?
ತಲೆಗಟ್ಟಿಗೈತೆ ಅಂತಾ ಕಲ್ಲು ಬಂಡೆ ಇರೋ ಬೆಟ್ಟಕ್ಕೆ ಡಿಚ್ಚಿ ಹೊಡೆಯೋಕೋದ ವಿರೋಧಪಕ್ಷದ ನಾಯಕ ಯತ್ನಾಳ್ ಯಡವಟ್ಟಪ್ಪನ ಬೇಬಿ ವಿಜಯೇಂದ್ರನನ್ನೇ ಕೆಳಗಿಳಿಸೋ ಯತ್ನ ಮಾಡಿದ್ದ ಇವರನ್ನು ಪಕ್ಷದಿಂದಾನೇ ಉಚ್ಛಾಟನೆ ಮಾಡಿಸಿದ ವಿಜಯೇಂದ್ರನ ಅಪ್ಪ ಯಡಿಯೂರಪ್ಪ. ತನ್ನ ಸ್ವಪಕ್ಷದಿಂದ ಸ್ವಪಕ್ಷೀ ಯರಿಂದ ಏನೂ ಮಾಡಲಿ ಕ್ಕಾಗದ ಪರಿಸ್ಥಿತಿಗೆ ಬಂದಾಲಾಗಾಯ್ತು, ಮತ್ತೊಮ್ಮೆ ಮಗದೊಮ್ಮೆ ಕರ್ನಾಟಕದ ಭಾರತೀಯ ಜನತಾ ಪಕ್ಷಕ್ಕೆ ಯಡ್ಡೀನೇ ಗತಿ ಅಂತ ಬಿಜೆಪಿಯ ಹೈಕಮಾಂಡ್ ತೀರ್ಮಾನ ಮಾಡಾಯ್ತು.
ಇನ್ನೇನಿದ್ರೂ ಪಕ್ಷವನ್ನು ಮೂರುಕಾಸಿಗೆ ಹರಾಜಾಕುವ ನರ್ಸ್ ರೇಣುಕಾನದ್ದೇ ಮಾತು. ಮಾತುಂದ್ರೆ ಮಾತು, ಹೊನ್ನಾಳಿ ಮಾತು ಅಂತ ಬಡಬಡಾಯಿಸ್ತಾ ಇರ‍್ತಾನೆ.
ಹೈಕಮಾಂಡ್ ನ ನಡ್ಡಾ, ಸುಪ್ರೀಂಗಳಾದ ಮೋದಿ, ಅಮಿತ್ ಶಾ ಗಳಿಗೆ ಯಡ್ಡಿ ಹೇಳಿದ್ದೇ ವೇದವಾಕ್ಯ. ಯಡ್ಡಿ ಮಗ ವಿಜಿ ರಿಪೋರ್ಟ್ ಕೊಟ್ಟಿದ್ದೇ ಫೈನಲ್ ಅನ್ನೋದಾದ್ರೆ ಬಸವನಗೌಡ ಯತ್ನಾಳ್ ಸಹ ಒಬ್ಬ ಲಿಂಗಾಯಿತ. ಉತ್ತರ ಕರ್ನಾಟಕದ ಕಡೆ ಯತ್ನಾಳ್ ಮಾತು ನಡೆಯುತ್ತದೆ. ಆತ ಕಾಂಗ್ರೆಸ್‌ನ ಸಿದ್ದು, ಡಿಕೆಶಿ, ಡಿಕೆಸು, ದಿನೇಶ್, ರೆಡ್ಡಿ, ಜಾರ್ಜು ಇವರಿಗೆಲ್ಲಾ ಸಕತ್ ಟಕ್ಕರ್ ಕೊಡುತ್ತಲೇ ಬಂದಿದ್ದಾರೆ. ಆದರೆ ಯಡ್ಡಿ, ಬಾಯೇ ತೆರೆದಿಲ್ಲ. ಯಾಕಂದ್ರೆ ಡಿಕೆಶಿ ಭಯ. ಮಧು ಬಲೆ ಹರಡಿ, ತನ್ನನ್ನು ಯಾವುದಾದ್ರೂ ಎಳೆನಿಂಬೆತಾಯಿ ಜೊತೆ ಜೋಡಣೆ ಮಾಡಿ ಕೇಸ್ ಹಾಕಿ ಪೊಲೀಸ್ ಕಳಿಸಿ ಪರಪ್ಪನ ಅಗ್ರಹಾರದ ಐಬಿಗೆ ರವಾನೆ ಮಾಡುದ್ರೆ ಏನು ಮಾಡೋದು ಅನ್ನೋ ಭಯ.
ಅಲ್ಲಿ ದಪ್ಪನೆಯ ಕಪ್ಪು ಸೊಳ್ಳೆಗಳ ಕೈಲಿ ಕಡಿಸಿಕೊಳ್ಳೋ ಕರ್ಮ ಈ ವಯಸ್ಸಲ್ಲಿ ಬೇಕಾ ಅಂತಾ ಯೋಚ್ನೆ ಮಾಡ್ತಾರೆ. ಈ ಯತ್ನಾಳ್ ಆ ಮಧು ಬಲೆಗೆ ಸಿಕ್ಕಾಕಿ ಕೊಳ್ಳೊ ಆಸಾಮಿ ಖಂಡಿತಾ ಅಲ್ಲ. ಏನಾದ್ರೂ ಪೋರ್ಜರಿ ಕೇಸ್ ಹಾಕಿ ಒಳಕ್ಕೆ ಹಾಕಿದ್ರೆ ಬುಟ್‌ಬುಟ್ಟೇವಾ ಅಂತ ಘರ್ಜಿಸ್ತಾನೇ ವಿಜೀನ ತಡಕೊಳ್ತಾನೆ.ಬಿಜೆಪಿ ಹೈಕಮಾಂಡ್‌ಗೆ ಒಂದoತೂ ಗ್ಯಾರಂಟಿ ಇದೆ. ಕರ್ನಾಟಕದ ಜನ ಒಮ್ಮೆ ಈ ಪಕ್ಷ, ಮತ್ತೊಮ್ಮೆ ಮುಂದಿನ ಪಕ್ಷ ಅಂತಾರೆ. 2028ರ ವಿಧಾನಸಭೆ ಚುನಾವಣೇಲಿ ನಂ ಪಕ್ಷಾನೇ ಲೀಡ್ ಬರೋದು ಅಂತ ಅವ್ರೆಲ್ಲಾ ಅಂದ್ಕೊoಡವ್ರೇ. ಆದ್ರೆ ಕಾಂಗ್ರೆಸ್‌ನವರು ಕಿಲಾಡಿಗಳು, ಗೃಹಲಕ್ಷ್ಮಿ ಹಣ ಕೊಡದೇ ರೇಟ್‌ಗಳನ್ನೆಲ್ಲಾ ಈಗ ಜಾಸ್ತಿ ಮಾಡಿದ್ರೂ ಮುಂದಕ್ ಜನ ಮರ್ತೋಗ್ಬಿಡ್ತಾರೆ. ಎಲೆಕ್ಷನ್ ಇನ್ನಾರ್ ತಿಂಗಳಿದೆ ಅನ್ನೋ ಟೈಮ್ನಲ್ಲಿ ಗೃಹ ಲಕ್ಷ್ಮಿ ಹಣ 2,000/- ರ ಬದ್ಲು 4,000/- ಕೊಟ್ಟು ಹೆಂಗಸ್ರು, ಮುಸ್ಲಿಮ್ ಸಮುದಾಯದ ಬಡ ಮತದಾರರ ಓಟುಗಳನ್ನ ಕಿತ್ ಕೊಳ್ಳೋದು ಆoತಾ ಪ್ಲಾನ್ ಮಡಿಕೊಂಡವ್ರೆ. ಈ ತರ‍್ಬೋಕಿ ಬಿಜಿಪಿಗರಿಗೆ, ಅದರ ಅಧ್ಯಕ್ಷನಿಗೆ,ಸೀಟಿ ಹೊಡೆಯೋ ರವಿಗೆ ಅದೆಲ್ಲಾ ಖಂಡಿತಾ ಗೊತ್ತಿಲ್ಲ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎನ್ನುವ ಅಶೋಕ್‌ಗೆ ಗೊತ್ತಿಲ್ವಾ? ಯತ್ನಾಳ್ ಎಂದೂ, ಬಿಜೆಪಿ ಪಕ್ಷದ ಬಗ್ಗೆ ಪಕ್ಷದ ಹೈಕಮಾಂಡ್ ಬಗ್ಗೆ ವಿರುದ್ಧಮಾತನಾಡಿಲ್ಲ ಕಾಂಗ್ರೇಸ್ ಪಕ್ಷದ, ಕಾಂಗ್ರೇಸಿಗರ ವಿರುದ್ಧ ಲೀಲಾಜಾಲವಾಗಿ ಮಾತನಾಡುವ ಯತ್ನಾಳ್ ಪಕ್ಷಕ್ಕೆ ಬೇಕಿರುವ ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆಗೆ ಹೋರಾಟ ಮಾಡಿದ್ದಾರೆ. ಕೇವಲ ಯಡ್ಡಿ, ವಿಜಿ, ಕುಟುಂಬ ರಾಜಕೀಯದ ವಿರುದ್ದ ಮಾತನಾಡಿರುವ ಬಸವಗೌಡ ಯತ್ನಾಳ್‌ರನ್ನು ಉಚ್ಚಾಟನೆ ಮಾಡಿರುವುದು ಅಕ್ಷಮ್ಯ. ಕೇವಲ ಯಡ್ಡಿಯ ಒಲೈಕೆಗೆ ಒಂದು ಪಕ್ಷ, ಪಕ್ಷದ ಹೈಕಮಾಂಡ್ ನಿಂತಿದೆಯೆoದರೆ ಪಕ್ಷದ ಅಧೋಗತಿ ಶುರುವಾಗಿದೆ ಅನ್ನಿಸುತ್ತೆ. ಜೈ ಶ್ರೀರಾಮ್.
– ಬಿ.ಆರ್.ನರಸಿಂಹಮೂರ್ತಿ
– 9448174932