ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಹಿಳಾ ದಿನಾಚರಣೆ.

ವಿಜಯ ದರ್ಪಣ ನ್ಯೂಸ್…

ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಹಿಳಾ ದಿನಾಚರಣೆ.

ತಾಂಡವಪುರ ಮೈಸೂರು ಮಾರ್ಚ್ 27: ಮೈಸೂರಿನ ನಗರ ವ್ಯಾಪ್ತಿಯಲ್ಲಿ ಬರುವ ಕೆಜಿ ಕೊಪ್ಪಲಿನಲ್ಲಿರುವ ಹೊಸ ನ್ಯಾಯಾಲಯದ ಎದುರು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಮೈಸೂರು, ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು  ಡಾ. ಟಿ ಸಿ ಪೂರ್ಣಿಮಾ  ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

ಅವರು ಕಾರ್ಯಕ್ರಮವನ್ನು ಕುರಿತು ಮಾತನಾಡುತ್ತಾ ಮೊದಲು ಮಹಿಳಾ ದಿನಾಚರಣೆಯನ್ನು ಯಾಕೆ ಮಾಡುತ್ತಿದ್ದೇವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು, ಮಹಿಳೆಯರೇ ಸೇರಿ ಸಂಭ್ರಮಿಸುವ ಕ್ಷಣಕ್ಕೆ ಸ್ಪೂರ್ತಿಯಾಗುವಂತೆ ಆಚರಣೆ ಮಾಡಬೇಕು, ನಾವೆಲ್ಲ ಉದ್ಯೋಗಸ್ತ ಮಹಿಳೆಯರು ಎಲ್ಲಾ ಕೆಲಸಗಳನ್ನು ಬಿಟ್ಟು ಒಂದೆಡೆ ಸೇರಿದ್ದೇವೆ, ಈ ಒಂದು ದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ  ಡಾ. ಟಿಸಿ ಪೂರ್ಣಿಮಾ ,  ಡಾ. ಸುಮಿತ್ರ ಪ್ರಧ್ಯಾಪಕರು,  ಮೀನಾಕುಮಾರಿ ಹಾಗೂ ಕುಮಾರಿ ಹಾಸಿನಿ ರವರನ್ನು ಸನ್ಮಾನಿಸಲಾಯಿತು.

ಈ ವೇಳೆ ಅಧ್ಯಕ್ಷೆ ಉಷಾರಾಣಿ, ಗೌರವಧ್ಯಕ್ಷೆ ಶೋಭ, ಉಪಾಧ್ಯಕ್ಷೆ ಅನಿತಾ ಮನೋಹರ್, ಕಾರ್ಯದರ್ಶಿ ಸವಿತ, ಖಜಾಂಚಿ ಅನಿತಾ ಹೇಮಂತ್, ನಿರ್ದೇಶಕರುಗಳಾದ ಲಲಿತಾ, ಲತ, ಮಂಜುಳಾ, ಸುವರ್ಣ, ಗೌರಿ, ಪ್ರತಿಮಾ, ವಿದ್ಯಾ, ಶಾಂತ ಉಪಸ್ಥಿತರಿದ್ದರು.