ಎಚ್‌ಐಎಲ್ ಲಿಮಿಟೆಡ್ ಈಗ ಬಿರ್ಲಾನು ಲಿಮಿಟೆಡ್
ವಿಜಯ ದರ್ಪಣ ನ್ಯೂಸ್….
ಎಚ್‌ಐಎಲ್ ಲಿಮಿಟೆಡ್ ಈಗ ಬಿರ್ಲಾನು ಲಿಮಿಟೆಡ್
ಬೆಂಗಳೂರು 25 ಮಾರ್ಚ್ 2025: ಯುಎಸ್‌ಡಿ 3 ಬಿಲಿಯನ್ ಸಿಕೆ ಬಿರ್ಲಾ ಗ್ರೂಪ್‌ನ ಭಾಗವಾಗಿರುವ ಎಚ್‌ಐಎಲ್ ಲಿಮಿಟೆಡ್ ಈಗ ಬಿರ್ಲಾನು ಲಿಮಿಟೆಡ್ ಎಂದು ಬ್ರ್ಯಾಂಡ್ ಬದಲಿಸಿರುವುದಾಗಿ ಘೋಷಿಸಿದೆ. ಇದು ಕಂಪನಿಯ ಮಹತ್ವಾಕಾಂಕ್ಷಿ ಬೆಳವಣಿಗೆ ಕಾರ್ಯತಂತ್ರ ಮತ್ತು ವಿಶ್ವದರ್ಜೆಯ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸಲು ತನ್ನ ಬದ್ಧತೆಯನ್ನು ಪ್ರತಿಫಲಿಸುತ್ತದೆ. ಭಾರತ ಮತ್ತು ಯುರೋಪ್‌ನಲ್ಲಿ ಕಂಪನಿಯು 32 ಉತ್ಪಾದನೆ ಘಟನೆಗಳನ್ನು ಹೊಂದಿದೆ. 80 ಕ್ಕೂ ಹೆಚ್ಚು ದೇಶಗಳಲ್ಲಿ ಗ್ರಾಹಕರು ಮತ್ತು ಪಾಲುದಾರರನ್ನು ಕಂಪನಿಯು ಹೊಂದಿದೆ.
ಬಿರ್ಲಾನು ಅಧ್ಯಕ್ಷ ಅವಂತಿ ಬಿರ್ಲಾ ಮಾತನಾಡಿ “ನಮ್ಮ ಹೊಸ ಗುರುತು ಬಿರ್ಲಾನು ನಮ್ಮ ಅಸ್ತಿತ್ವವನ್ನು ಪ್ರತಿಫಲಿಸುತ್ತದೆ. ಎಂದಿಗೂ ನಮ್ಮ ಮಿತಿಯನ್ನು ಮೀರಿ ಶ್ರಮಿಸುವ ಕಂಪನಿ ಇದಾಗಿದೆ. ಗುಣಮಟ್ಟ, ಅನ್ವೇಷಣೆ ಮತ್ತು ದೀರ್ಘಕಾಲ ಬಾಳುವ ಕೆಲಸವನ್ನು ಮಾಡುವುದರಲ್ಲಿ ನಾವು ವಿಶ್ವಾಸ ಇರಿಸಿದ್ದೇವೆ. ಮನೆ ಮಾಲೀಕರು, ಬಿಲ್ಡರ್‌ಗಳು ಮತ್ತು ಡಿಸೈನರ್‌ಗಳಿಗೆ ನಾವು ಸೇವೆ ಸಲ್ಲಿಸುತ್ತೇವೆ. ಹೀಗಾಗಿ, ನಮ್ಮ ಎಲ್ಲ ಕೆಲಸದಲ್ಲೂ ಅವರು ಪ್ರಮುಖವಾಗಿರುತ್ತಾರೆ. ಉತ್ತಮ ಸಾಮಗ್ರಿಗಳನ್ನು ನಿರ್ಮಾಣ ಮಾಡುವುದು, ಸುಸ್ಥಿರತೆಯನ್ನು ಸುಧಾರಿಸುವುದು ಅಥವಾ ನಿರ್ಮಾಣಕ್ಕೆ ಹೊಸ ಐಡಿಯಾವನ್ನು ತರುವುದು ಇತ್ಯಾದಿಯಲ್ಲಿ ನಾವು ಪರಿಣಿತರಾಗಿದ್ದು, ಕಾಲದ ಪರೀಕ್ಷೆಯಲ್ಲಿ ಇವು ಎದ್ದು ನಿಲ್ಲುತ್ತವೆ.”
ಬಿರ್ಲಾನು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಕ್ಷತ್ ಸೇಥ್ ಮಾತನಾಡಿ “ಉತ್ತಮ ಗುಣಮಟ್ಟ, ಸುಸ್ಥಿರವಾದ ಕಟ್ಟಡ ಸಾಮಗ್ರಿಗಳಾದ ಪೈಪ್‌ಗಳು, ನಿರ್ಮಾಣ ರಾಸಾಯನಿಕಗಳು, ಪಟ್ಟಿ, ರೂಫ್‌ಗಳು, ಗೋಡೆಗಳು ಮತ್ತು ಫ್ಲೋರ್‌ಗಳನ್ನು ನಿರ್ಮಿಸುವುದರಲ್ಲಿ ನಾವು ಹೆಚ್ಚು ಗಮನಹರಿಸಿದ್ದೇವೆ. ಇವು ಆಧುನಿಕ ನಿರ್ಮಾಣದ ಅಗತ್ಯಗಳನ್ನು ಪೂರೈಸಬೇಕು ಎಂಬುದು ನಮ್ಮ ಆದ್ಯತೆಯಾಇದೆ. ಅದಕ್ಕೆ ಪೂರಕವಾಗಿ ನಾವು ಮಹತ್ವದ ಹೆಜ್ಜೆ ಹಾಕುತ್ತಿದ್ದೇವೆ. ನಾವು ಅರ್ಗ್ಯಾನಿಕ್ ಬೇಸ್ಡ್ ಸ್ಟೆಬಿಲೈಸ್ಡರ್ಸ್ (ಒಬಿಎಸ್) ಅನ್ನು ಯುಪಿವಿಸಿ ಪೈಪ್ ಉತ್ಪಾದನೆಯಲ್ಲಿ ಪರಿಚಯಿಸಿದ್ದೇವೆ. ಇದು ಭಾರತದಲ್ಲಿನ ಉದ್ಯಮದಲ್ಲೇ ಪ್ರಥಮವಾಗಿದೆ ಮತ್ತು ಹೆವಿ ಮೆಟಲ್‌ಗಳ ಬಳಕೆಯ ಅಗತ್ಯವನ್ನು ನಿವಾರಿಸುತ್ತದೆ. ಚೆನ್ನೈಯಲ್ಲಿ ನಮ್ಮ ಎಎಸಿ ಬ್ಲಾಕ್ ಸಾಮರ್ಥ್ಯವನ್ನು ದುಪ್ಪಟ್ಟು ಮಾಡಿದ್ದು, ವರ್ಷಕ್ಕೆ 4 ಲಕ್ಷ ಕ್ಯೂಬಿಕ್ ಮೀಟರುಗಳಷ್ಟು ಉತ್ಪಾದನೆ ಮಾಡುತ್ತೇವೆ. ಹೀಗಾಗಿ ಇದು ದೇಶದ ಅತಿದೊಡ್ಡ ಸಾಮರ್ಥ್ಯಗಳಲ್ಲಿ ಒಂದಾಗಿದೆ. ಮನೆ ಮತ್ತು ಒಳಾಂಗಣ ವಲಯಕ್ಕೂ ನಮ್ಮ ವಹಿವಾಟನ್ನು ವಿಸ್ತರಿಸುತ್ತಿದ್ದು, ನಮ್ಮ ಜಾಗತಿಕ ಪ್ರೀಮಿಯಂ ಫ್ಲೋರಿಂಗ್ ಬ್ರ್ಯಾಂಡ್ ಪ್ಯಾರಡಾರ್ ಅನ್ನು ಭಾರತಕ್ಕೂ ತರಲಿದ್ದೇವೆ.”