ಪರಿಣಾಮ ಬೀರದ ಕರ್ನಾಟಕ ಬಂದ್ …..
ವಿಜಯ ದರ್ಪಣ ನ್ಯೂಸ್…..
ಪರಿಣಾಮ ಬೀರದ ಕರ್ನಾಟಕ ಬಂದ್ …..
ತಾಂಡವಪುರ ಮೈಸೂರು ಮಾರ್ಚ್ 22: ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಹಲ್ಲೆ ಖಂಡಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ರವರು ನೀಡಿದ್ದ ಕರ್ನಾಟಕ ಬಂದ್ ಕರೆ ಅಷ್ಟಾಗಿ ಪರಿಣಾಮ ಬೀರದೆ ಎಂದಿನಂತೆ ಮೈಸೂರಿನ ನಂಜನಗೂಡು ಊಟಿ ರಸ್ತೆಯ ಸಾರಿಗೆ ಸಂಚಾರ ಖಾಸಗಿ ವಾಹನಗಳ ಸಂಚಾರವು ಕಂಡು ಬಂತು ಸಾರ್ವಜನಿಕರ ಸಹಕಾರವಿಲ್ಲದೆ ಯಾವುದೇ ಬಂದ್ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ಕರೆ ನೀಡಿದ್ದ ಬಂದ್ ಸಾರ್ವಜನಿಕರ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಿಲ್ಲ ಕಾರಣ ರಾಜ್ಯದಲ್ಲಿ 10ನೇ ತರಗತಿ ಪರೀಕ್ಷೆ ನಡೆದಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಸಾರ್ವಜನಿಕರು ಈ ಬಂದ್ ಕಾರ್ಯಕ್ರಮಕ್ಕೆ ಅಷ್ಟಾಗಿ ಸಹಕಾರ ನೀಡಿದ ಎನ್ನುವುದು ಕಂಡುಬಂದಿತ್ತು.
ಮೈಸೂರಿನಲ್ಲಿ ನಂಜನಗೂಡು ಊಟಿ ರಸ್ತೆ ಸೇರಿದಂತೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ತಾಂಡವಪುರ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳು ಇಂದಿನಂತೆ ತಮ್ಮ ಕಾರ್ಯ ಚಟುವಟಿಕೆಗಳನ್ನು ನಡೆಸಿದವು ಇದೇ ವೇಳೆ ಮಾತನಾಡಿದ ಗ್ರಾಮೀಣ ಭಾಗದ ಸಾರ್ವಜನಿಕರು ಕರ್ನಾಟಕ ಬಂದ್ ಕರೆ ನೀಡಿರುವುದು ಸರಿಇಲ್ಲ ಏಕೆಂದರೆ ಇದು ಪರೀಕ್ಷೆ ಸಮಯ ಈ ದಿನ ವಿದ್ಯಾರ್ಥಿಗಳ ಭವಿಷ್ಯದ ದಿನವಾಗಿದೆ ಆದ್ದರಿಂದ ಮುಖಂಡರುಗಳು ಯಾವುದೇ ಬಂದ್ ಕರೆ ನೀಡಬೇಕಾದರೆ ಸಾರ್ವಜನಿಕರ ಅಭಿಪ್ರಾಯ ಪಡೆದು ಮಾಡಿದರೆ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು