ಸಿಇಒ ಡಾ.ಕೆ.ಎನ್ ಅನುರಾಧ ಅವರಿಂದ ಕ್ಷೇತ್ರ ಸಂಚಾರ: ಕಾಮಗಾರಿಗಳ ಪರಿಶೀಲನೆ

ವಿಜಯ ದರ್ಪಣ ನ್ಯೂಸ್…

ಸಿಇಒ ಡಾ.ಕೆ.ಎನ್ ಅನುರಾಧ ಅವರಿಂದ ಕ್ಷೇತ್ರ ಸಂಚಾರ: ವಿವಿಧ ಕಾಮಗಾರಿಗಳ ಪರಿಶೀಲನೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅನುರಾಧ ಕೆ ಎನ್ ರವರು ಇಂದು ದೇವನಹಳ್ಳಿ ತಾಲ್ಲೂಕಿನ ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪಂಚಾಯಿತಿಯ ಸಿಬ್ಬಂದಿಗಳು ಹಾಜರಾತಿ ಮತ್ತು ಕಡತಗಳನ್ನು ಪರಿಶೀಲಿಸಿದರು. ನಂತರ ದುದ್ದನಹಳ್ಳಿ ಗ್ರಾಮದ ಮಹಾತ್ಮ ಗಾಂಧಿ ನರೇಗಾ ಯೋಜನೆಯ 2025-26 ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಹೊಸ ಕಾಮಗಾರಿಗಳ Pre-measurement ಮಾಡುವುದನ್ನು ನರೇಗಾ ಸಿಬ್ಬಂದಿಗಳು ಜೋತೆಗೆ ಪರಿಶೀಲನೆ ಮಾಡಿದರು. ಆಶ್ರಯ ಯೋಜನೆಯಡಿ ಸರ್ಕಾರದ ಜಾಗ ವೀಕ್ಷಿಸಿದರು,
ದಿನ್ನೂರು ಗ್ರಾಮದಲ್ಲಿ ಕೂಸಿನ ಮನೆ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳಿಗೆ ನೀಡುತ್ತಿರುವ ಆಹಾರ ಗುಣಮಟ್ಟವನ್ನು ಪರಿಶೀಲಿಸಿ ಕಾಲಕಾಲಕ್ಕೆ ಮಕ್ಕಳಿಗೆ ತೂಕ, ಎತ್ತರ, ಆರೋಗ್ಯ ತಪಾಸಣೆ ನಡೆಸುವಂತೆ ಸೂಚಿಸಿದರು.

ದಿನ್ನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲಾ ಕೊಠಡಿಗಳನ್ನು ಪರಿಶೀಲಿಸಿ ಮಕ್ಕಳೊಂದಿಗೆ ಸಂವಾದ ನಡೆಸಿದರು ಮಕ್ಕಳಿಗೆ ಪರಿಸರ, ಸ್ವಚ್ಚತೆ ಮತ್ತು ನೈರ್ಮಲ್ಯ ಕುರಿತು ಅರಿವು ನೀಡಿ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

#################################

ಹೋಳಿ

ಹೋಳಿ ಹೋಳಿ ಹೋಳಿ ಹೋಳಿ     

ಬಣ್ಣ ಬಣ್ಣ ಬಣ್ಣ ಬಣ್ಣದೋಕುಳಿ

ತಾರಕನೆಂಬ ರಕ್ಕಸನು   

ಪಡೆದನು ಬ್ರಹ್ಮನ ವರವನ್ನು 

ಲೋಕವನುಳಿಸಲು ಮನ್ಮಥನು           

ಸುರಿಸಲು ಹೂ ಮಳೆ ಬಾಣವನು         

ಯೋಗ ಸಮಾಧಿಯ ಪರಶಿವನು.         

ತೆರೆಯಲು ಮೂರನೆ ನೇತ್ರವನು           

ಧಗ ಧಗ ಧಗ ಧಗ ದಹಿಸಿದನು….

ಹೋಲಿಕಾ ಎಂಬ ರಕ್ಕಸಿಯು

ಪ್ರಹ್ಲಾದನೆಂ ಹರಿ ಭಕ್ತನನು       

ವಧಿಸಲು ಕಳುಹಿದ ಹಿರಿಣ್ಯಕನು       

ರಕ್ಕಸಿ ಅಗ್ನಿಗಾಹುತಿಯಾದಳು           

ಉಳಿದನು ಪ್ರಹ್ಲಾದ ಚರಿತ್ರೆಯೊಳು.           

ಅಳಿದವು ಅಸುರ ಶಕ್ತಿಗಳು       

ನಾಶ ನಾಶ ನಾಶ ನಿರ್ನಾಶವಾದವು         

ಸಂಭ್ರಮ ಸಾರಲು ಹೋಳಿಯಾಟ   

 ರಂಗು ರಂಗು ರಂಗು ರಂಗಿನಾಟ

ರಾಧಿಕಾ ವಿಶ್ವನಾಥ್,ಮಡಿಕೇರಿ