ನೀರಾವರಿ ಪ್ರದೇಶ ವಿಸ್ತರಿಸಿ: ನೀರಾವರಿ ತಜ್ಞ ಆಂಜನೇಯ ರೆಡ್ಡಿ
ವಿಜಯ ದರ್ಪಣ ನ್ಯೂಸ್…
ನೀರಾವರಿ ಪ್ರದೇಶ ವಿಸ್ತರಿಸಿ: ನೀರಾವರಿ ತಜ್ಞ ಆಂಜನೇಯ ರೆಡ್ಡಿ
ಆಂಜನೇಯ ರೆಡ್ಡಿ, ನೀರಾವರಿ ತಜ್ಞ
ಬಜೆಟ್ ಸಮಯದಲ್ಲಿ ನೀರಾವರಿಗೆ ಬಜೆಟ್‌ನಲ್ಲಿ ಏನು, ನೀರಾವರಿಯ ಬೇಡಿಕೆಗಳೇನು ಎಂಬ ವಿಷಯ ಸದ್ದು ಮಾಡುತ್ತದೆ. ಆದರೆ ನಾವು ಇತ್ತೀಚಿನ 2-3 ದಶಕಗಳನ್ನು ಗಮನಿಸಿದರೆ ಎಲ್ಲ ನೀರಾವರಿ ಯೋಜನೆ ಗಳು ಬಿಳಿಯಾನೆಯಾಗಿದೆ ಮತ್ತು ಯೋಜನೆಗಳಿಂದ ಪ್ರಯೋಜನ ಎಂಬುದು ಮರೀಚಿಕೆಯಾಗಿದೆ ಎಂದು ನೀರಾವರಿ ತಜ್ಞ ಆಂಜನೇಯ ರೆಡ್ಡಿ ಸರ್ಕಾರದ ವಿರುದ್ಧ ಕೀಡಿ ಕಾರಿದರು.
ನೀರಾವರಿಗೆ ಬಜೆಟ್ ಗಾತ್ರ ದೊಡ್ಡದಾ ಗುತ್ತಿದೆಯೇ ಹೊರತು ನೀರಾವರಿ ಪ್ರದೇಶ ವಿಸ್ತರಣೆ ಆಗುತ್ತಿಲ್ಲ. ನೀರಾವರಿಗೆ ಹಂಚಿಕೆ ಆಗಿರುವ ಹಣವನ್ನು ಬಳಸಿಕೊಳ್ಳಲು ನಮ್ಮಿಂದ ಆಗುತ್ತಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಆರಂಭದಲ್ಲಿ 2 ಸಾವಿರ ಕೋಟಿ ರೂ ಯೋಜನಾ ವೆಚ್ಚ ಇದ್ದದ್ದು ಇದೀಗ 20 ಸಾವಿರ ಕೋಟಿ ರೂಗೆ ಏರಿದೆ. ಅದರೆ ಪೂರ್ಣ ಫಲಿತಾಂಶ ಯಾರಿಗೂ ಸಿಗುತ್ತಿಲ್ಲ.
ತುಂಗಭದ್ರಾ ಜಲಾಶಯ ದಲ್ಲಿ ಹೂಳು ತುಂಬಿ ಆಂಧ್ರ ಪ್ರದೇಶಕ್ಕೆ ಹೆಚ್ಚಿನ ನೀರು ಹರಿದು ಹೋಗುತ್ತಿದೆ. ಆಲಮಟ್ಟಿ ಯೋಜನೆಯಿಂದ ಸಿಗಬೇಕಾದಷ್ಟು ಪ್ರಯೋಜನ ಪಡೆದು ಕೊಳ್ಳಲು ವಿಫಲವಾಗಿದ್ದೇವೆ. ಮಹದಾಯಿ ವ್ಯಾಜ್ಯ ಪರಿಹಾರವಾಗುವ ಲಕ್ಷಣ ಕಾಣುತ್ತಿಲ್ಲ. ಎತ್ತಿನಹೊಳೆ ಯೋಜನೆ 8 ಸಾವಿರ ಕೋಟಿ ರೂ.ನಿಂದ ಈಗ 24 ಸಾವಿರ ಕೋಟಿ ರೂಗೆ ಹೋಗಿದ್ದು ಈ ಯೋಜನೆ ಫಲಿತಾಂಶ ನೀಡುವ ಯಾವ ಸೂಚನೆಯೂ ಇಲ್ಲ, ಮಹತ್ವದ ಮೇಕೆದಾಟು ಕುಡಿಯುವ ನೀರು ಯೋಜನೆ ಚುನಾವಣಾ ವಿಷಯ ಆಗುತ್ತದೆ. ಆದರೆ ಯೋಜನೆ ಮಾಡುವ ಬದ್ಧತೆ ಯಾವ ಪಕ್ಷಕ್ಕೂ ಇಲ್ಲ, ಗುತ್ತಿಗೆದಾರರು ಮತ್ತು ಸಮಾಲೋಚಕರ ಅಭಿಪ್ರಾಯದ ಮೇರೆಗೆ ನೀರಾವರಿ ಯೋಜನೆ ಕೈಗೆತ್ತಿಕೊಳ್ಳದೆ ಬಜೆಟ್ ಅನುದಾನ ಪ್ರಾಮಾಣಿಕವಾಗಿ ಖರ್ಚಾಗಬೇಕು ಎಂದರು
–