ತಮಿಳುನಾಡು ಆನ್‌ಲೈನ್ ಗೇಮಿಂಗ್‌ ನಿಯಮವನ್ನು ವಿರೋಧಿಸಿದ ಪರಿಣಿತ ಗೇಮರ್‌ಗಳು ಮತ್ತು ಪ್ಲೇಯರ್ಸ್‌ ವೆಲ್‌ಫೇರ್ ಅಸೋಸಿಯೇಶನ್: “ಗೇಮಿಂಗ್ ನಮ್ಮ ಜೀವನಾಡಿ”

ವಿಜಯ ದರ್ಪಣ ನ್ಯೂಸ್…..

ತಮಿಳುನಾಡು ಆನ್‌ಲೈನ್ ಗೇಮಿಂಗ್‌ ನಿಯಮವನ್ನು ವಿರೋಧಿಸಿದ ಪರಿಣಿತ ಗೇಮರ್‌ಗಳು ಮತ್ತು ಪ್ಲೇಯರ್ಸ್‌ ವೆಲ್‌ಫೇರ್ ಅಸೋಸಿಯೇಶನ್: “ಗೇಮಿಂಗ್ ನಮ್ಮ ಜೀವನಾಡಿ”

ಫೆಬ್ರವರಿ 25, 2025 – ತಮಿಳುನಾಡಿನ ವೃತ್ತಿಪರ ಗೇಮ್‌ಗಳ ಸಮೂಹ ಹಾಗೂ ಇಸ್ಪೋರ್ಟ್ಸ್ ಪ್ಲೇಯರ್ಸ್ ವೆಲ್‌ಫೇರ್ ಅಸೋಸಿಯೇಶನ್ (ಇಪಿಡಬ್ಲ್ಯೂಎ) ಇತ್ತೀಚೆಗೆ ಪರಿಚಯಿಸಿದ ರಿಯಲ್ ಮನಿ ಗೇಮಿಂಗ್‌ ಕುರಿತ ತಮಿಳುನಾಡು ನಿಯಮಾವಳಿಯನ್ನು ತಮಿಳುನಾಡು ಹೈಕೋರ್ಟ್‌ನಲ್ಲಿ ಪ್ರಶ್ನಿಸಿವೆ. ಈ ದಾವೆಯ ಪ್ರಕಾರ (i) ಭಾರತೀಯ ಸಂವಿಧಾನದ ನಿಯಮಾವಳಿ 14, 19 ಮತ್ತು 21 ರ ಪ್ರಕಾರ ಆನ್‌ಲೈನ್ ಗೇಮರ್‌ಗಳ ಮೂಲಭೂತ ಹಕ್ಕನ್ನು ಈ ನಿಯಮಾವಳಿಯು ಉಲ್ಲಂಘಿಸುವ ಮೂಲಕ ವೃತ್ತಿಪರ ಗೇಮಿಂಗ್‌ ಸಮುದಾಯದ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತಿದೆ; (ii) ಸಂವಿಧಾನದ ಅಡಿಯಲ್ಲಿ ಇಂತಹ ನಿಯಮಾವಳಿಯನ್ನು ಹೊರಡಿಸಲು ರಾಜ್ಯಗಳಿಗೆ ಅಧಿಕಾರವಿಲ್ಲ ಮತ್ತು ಸ್ಕಿಲ್ ಗೇಮ್‌ಗಳನ್ನು ಕೇಂದ್ರ ಸರ್ಕಾರ ಮಾತ್ರ ಮಾಹಿತಿ ತಂತ್ರಜ್ಞಾನ (ಮಧ್ಯಂತರ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೈತಿಕ ನಿಯಮಗಳು) ನಿಯಮಾವಳಿಗಳು 2021 ರ ಅಡಿಯಲ್ಲಿ ನಿಯಂತ್ರಿಸಬಹುದಾಗಿದೆ; ಮತ್ತು (iii) ತಪ್ಪಾದ ಮತ್ತು ಅಸ್ತಿತ್ವದಲ್ಲಿಲ್ಲದ ಡೇಟಾ ಆಧರಿಸಿ ನಿಯಮಾವಳಿಯನ್ನು ಹೊರಡಿಸಲಾಗಿದೆ ಮತ್ತು ಮೇಲ್ನೋಟಕ್ಕೇ ಇದು ಪ್ರತಿವಾದ ಮಾಡಬಹುದಂತಿದೆ.

ಲುಮಿಕಾಯ್ ಮತ್ತು ಅಮೆಜಾನ್ ವೆಬ್ ಸರ್ವೀಸಸ್ (ಎಡಬ್ಲ್ಯೂಎಸ್‌) ನ ಸಹಭಾಗಿತ್ವದಲ್ಲಿ ನಡೆಸಿದ “ಸ್ಟೇಟ್ ಆಫ್ ಇಂಡಿಯಾ ಗೇಮಿಂಗ್ ರಿಪೋರ್ಟ್ 2022” ಪ್ರಕಾರ, ಭಾರತದಲ್ಲಿ ಇಸ್ಪೋರ್ಟ್ಸ್‌ ಪ್ಲೇಯರ್‌ಗಳ ಸಂಖ್ಯೆಯು 2021 ರಲ್ಲಿ 150,000 ಇಂದ 2022 ರಲ್ಲಿ 600,000 ಗೆ ಏರಿಕೆಯಾಗಿದೆ. 2027 ರ ವೇಳೆಗೆ ಈ ಸಂಖ್ಯೆ 1.5 ಮಿಲಿಯನ್‌ಗೆ ತಲುಪಲಿದ್ದು, ಭಾರತೀಯ ಗೇಮಿಂಗ್ ಉದ್ಯಮದ ತ್ವರಿತ ಬೆಳವಣಿಗೆಯನ್ನೂ ಇದು ಸೂಚಿಸುತ್ತದೆ.

ತಮಿಳುನಾಡಿನಲ್ಲಿ ವ್ಯಾಪಕವಾದ ಗೇಮಿಂಗ್ ಸಮುದಾಯವನ್ನು ಇಪಿಡಬ್ಲ್ಯೂಎ ಪ್ರತಿನಿಧಿಸುತ್ತದೆ. ಇದರಲ್ಲಿ ಭಾರತದ ಅತ್ಯಂತ ಪ್ರತಿಷ್ಠಿತ ವೃತ್ತಿಪರ ಪೋಕರ್ ಪ್ಲೇಯರ್‌ಗಳು ಮತ್ತು ಇಸ್ಪೋರ್ಟ್ಸ್‌ ಕಾಂಪಿಟಿಟರ್‌ಗಳೂ ಸೇರಿದ್ದಾರೆ. ಈ ಪೈಕಿ, 2017 ರ ಏಷ್ಯನ್ ಪೋಕರ್ ಟೂರ್ (ಎಪಿಟಿ) ಹೈಪರ್‌ಟರ್ಬೋ ಚಾಂಪುಯನ್‌ಶಿಪ್‌ ವಿಜೇತ ಮತ್ತು 2017 ಎಪಿಟಿ ಮೇನ್ ಈವೆಂಟ್‌ನ 3ನೇ ಸ್ಥಾನದ ಫಿನಿಶರ್ ಆಗಿರುವ ವಿಕ್ರಮ್ ಕುಮಾರ್ ಲುಂಗಿ ಮತ್ತು ಜಾಗತಿಕ ರ್‍ಯಾಂಕಿಂಗ್ 737 ಆಗಿರುವ ಭಾರತದ ಯುವ ಚೆಸ್ ಗ್ರ್ಯಾಂಡ್‌ಮಾಸ್ಟರ್ ಕನಸು ಕಾಣುತ್ತಿರುವ ಚೆಸ್‌ ಪರಿಣಿತ ವಿಎಸ್ ರತ್ನವೇಲ್ ಕೂಡ ಸೇರಿದ್ದಾರೆ. ದಾವೆದಾರರ ಪೈಕಿ ವರ್ಲ್ಡ್‌ ಸಿರೀಸ್ ಆಫ್ ಪೋಕರ್ (ಡಬ್ಲ್ಯೂಎಸ್‌ಒಪಿ) ಬ್ರೇಸ್‌ಲೆಟ್ ವಿಜೇತ ಹಾಗೂ ಭಾರತದ ಯಶಸ್ವಿ ಪೋಕರ್ ವೃತ್ತಿಪರ ಹಾಗೂ ಬಾಂಬರ್ ಎಂದೇ ಹೆಸರು ಪಡೆದಿರುವ ಆದಿತ್ಯ ಸುಶಾಂತ್ ಡೊಂಕಾ ಕೂಡಾ ಸೇರಿದ್ದಾರೆ.

ನಿಯಮಾವಳಿಯು ಕಠಿಣ ನಿರ್ಬಂಧಗಳನ್ನು ಹೇರುತ್ತಿದ್ದು, ರಾತ್ರಿ 12 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಆನ್‌ಲೈನ್‌ ಗೇಮಿಂಗ್‌ಗೆ ನಿಷೇಧವನ್ನೂ ವಿಧಿಸಿದೆ. ಇದು ವೃತ್ತಿಪರ ಗೇಮಿಂಗ್‌ನ ವಾಸ್ತವಾಂಶಕ್ಕೆ ಸಂಪೂರ್ಣವಾಗಿ ತದ್ವಿರುದ್ಧವಾಗಿದೆ ಎಂದು ಆಟಗಾರರು ವಾದಿಸುತ್ತಿದ್ದಾರೆ. ಬಹುತೇಕ ಆಟಗಾರರಿಗೆ ಇದು ಪ್ರಮುಖ ಸಮಯವಾಗಿದ್ದು, ವಿಶ್ವದ ಅತ್ಯಂತ ಪ್ರತಿಭಾವಂತ ಆಟಗಾರರ ಎದುರು ಈ ಸಮಯದಲ್ಲೇ ಅವರು ಸೆಣೆಸುತ್ತಿರುತ್ತಾರೆ. ಇಂಟರ್ನ್ಯಾಷನಲ್‌ ಪ್ಲೇಯರ್‌ಗಳ ಜೊತೆಗೆ ಹಗಲಿನ ಸಮಯದಲ್ಲಿ ಕೆಲಸಕ್ಕೆ ಹೋಗಿ, ರಾತ್ರಿ ಗೇಮಿಂಗ್‌ಗೆ ಬರುವವರನ್ನೂ ಇವರು ಈ ಸಮಯದಲ್ಲಿ ಎದುರಿಸುತ್ತಿರುತ್ತಾರೆ.

ಇಪಿಡಬ್ಲ್ಯೂಎ ಮತ್ತು ಆಟಗಾರರು ಈ ನಿರ್ಬಂಧಗಳನ್ನು ಕೆಲವು ಮೂಲಭೂತ ಅಂಶಗಳ ಆಧಾರದಲ್ಲಿ ಪ್ರತಿರೋಧಿಸುತ್ತಿದ್ದಾರೆ:

– ಜೀವನಾವಶ್ಯಕತೆಯ ಹಕ್ಕಿನ ಉಲ್ಲಂಘನೆ: ವೃತ್ತಿಪರ ಗೇಮಿಂಗ್ ಎಂಬುದು ಸಾವಿರಾರು ಪ್ಲೇಯರ್‌ಗಳಿಗೆ ಒಂದು ನ್ಯಾಯುತ ವೃತ್ತಿಯಾಗಿದೆ ಮತ್ತು ನಿರ್ಬಂಧಿಸಿದ ಈ ಸಮಯವು ಅವರ ಜೀವನಾವಶ್ಯಕತೆಯನ್ನು ಹತ್ತಿಕ್ಕುತ್ತದೆ.

– ಸ್ಫರ್ಧಾತ್ಮಕತೆ ಮತ್ತು ಜಾಗತಿಕ ಭಾಗವಹಿಸುವಿಕೆ: ಬಹುತೇಕ ಸ್ಫರ್ಧಾತ್ಮಕ ಮತ್ತು ಜಾಗತಿಕ ಗೇಮ್‌ಗಳು ತಡರಾತ್ರಿಯೇ ನಡೆಯುತ್ತದೆ. ಈ ಸಮಯದಲ್ಲಿ ನಿರ್ಬಂಧಿಸಿದರೆ ಸ್ಫರ್ಧಾತ್ಮಕ ಆಟವನ್ನು ಪ್ರತಿರೋಧಿಸಿದಂತಾಗುತ್ತದೆ.

● ಪ್ರತಿರೋಧಕ ನಿರ್ಬಂಧಗಳು: ಸರ್ಕಾರ ಊಹಿಸಿದಂತೆ ನಿದ್ರಾ ಅವಧಿಯು (ಮಧ್ಯರಾತ್ರಿ 12 ರಿಂದ ಬೆಳಗಿನ ಜಾವ 5 ಗಂಟೆ) ವೃತ್ತಿಪರ ಗೇಮಿಂಗ್ ಮತ್ತು ಹಲವು ಪ್ಲೇಯರ್‌ಗಳ ಕಾರ್ಯನಿರ್ವಹಣೆ ಅವಧಿಯನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿದೆ.

ಆಟಗಾರರ ಪ್ರತಿಕ್ರಿಯೆಗಳು:

ವಿಕ್ರಮ್ ಕುಮಾರ್ ಲುಂಗಿ, ಎಪಿಟಿ ಚಾಂಪಿಯನ್, “ನಾವು ತಮಿಳುನಾಡಿನಲ್ಲಿದ್ದೇವೆ ಎಂಬ ಕಾರಣಕ್ಕೆ ನಮಗೆ ಮಲತಾಯಿ ಧೋರಣೆಯನ್ನು ಅನುಸರಿಸಲಾಗುತ್ತಿದೆ. ಯಾವುದೇ ನಿರ್ಬಂಧಗಳಿಲ್ಲದೇ ಎಲ್ಲರೂ ಸ್ಫರ್ಧಿಸಬಹುದು ಎಂದಾದರೆ ನಮ್ಮನ್ನು ಯಾಕೆ ನಿರ್ಬಂಧಿಸಬೇಕು? ಗೇಮಿಂಗ್ ನನ್ನ ವೃತ್ತಿಯಾಗಿದೆ ಮತ್ತು ಹಳೆಯ ಕಾಲದ ನೀತಿಗಳು ನಮ್ಮನ್ನು ನಿರ್ಬಂಧಿಸುವುದನ್ನು ನಾವು ಒಪ್ಪುವುದಿಲ್ಲ.”

ವಿಎಸ್ ರತ್ನವೇಲ್, “ನಾವು ಜಾಗತಿಕವಾಗಿ ಸ್ಫರ್ಧಿಸಬೇಕು ಎಂಬುದನ್ನು ತಿಳಿದಿದ್ದೇವೆ. ಚೆಸ್‌ಗೆ ಕಾರ್ಯತಂತ್ರ, ಸಹನೆ ಅಗತ್ಯವಿದೆ ಮತ್ತು ವಿಶ್ವದ ಉತ್ತಮ ಪ್ರತಿಭೆಗಳನ್ನು ನಾವು ಎದುರಿಸಬೇಕಿರುತ್ತದೆ. ರಾತ್ರಿ ಆಡುವುದರಿಂದ ನಿರ್ಬಂಧಿಸಿದರೆ ಅತ್ಯಂತ ಪೀಕ್ ಅವರ್‌ನಲ್ಲಿ ತರಬೇತಿ ಪಡೆದುಕೊಳ್ಳಬೇಡಿ ಎಂದಂತಾಗುತ್ತದೆ. ಇದಕ್ಕೆ ಯಾವ ಅರ್ಥವೂ ಇಲ್ಲ.”

ಅದಿತ್ಯ ಸುಶಾಂತ್ ಡೊಂಕಾ, ಡಬ್ಲ್ಯೂಎಸ್‌ಒಪಿ ಬ್ರೇಸ್‌ಲೆಟ್ ವಿಜೇತ “ಸ್ಪರ್ಧಾತ್ಮಕ ಗೇಮ್‌ಗಳಲ್ಲಿನ ಹಲವು ಪ್ಲೇಯರ್‌ಗಳು ಕಚೇರಿಗೆ ಹೋಗುವವರಾಗಿದ್ದು, ಅವರು ತಡರಾತ್ರಿ ಮನೆಗೆ ಬಂದು, ಕೆಲಸ ಮುಗಿದ ನಂತರ ಪೋಕರ್ ಆಡುತ್ತಾರೆ. ಈ ಕಾನೂನು ಮುಂದುವರಿದರೆ, ರಾತ್ರಿ ಆಡುವುದಕ್ಕೆ ನಿಷೇಧ ವಿಧಿಸಿದ ಏಕೈಕ ದೇಶ ಭಾರತ ಎಂಬ ಕುಖ್ಯಾತಿಗೆ ಪಾತ್ರವಾಗುತ್ತದೆ. 12 ರಿಂದ 5 ಗಂಟೆಯ ಸಮಯವು ನಿದ್ರೆಯ ಸಮಯ ಎಂದು ಯಾರೋ ಕೆಲವರು ನಿರ್ಧಾರ ಮಾಡಿದ ಕಾರಣಕ್ಕೆ ಈ ನಿಷೇಧ ವಿಧಿಸುವುದು ಸರಿಯಲ್ಲ.”

ಈ ನಿರ್ಬಂಧ ವಿಧಿಸುವ ನಿಯಮಾವಳಿಗಳು ಜಾಗತಿಕ ರಿಯಲ್ ಮನಿ ಗೇಮಿಂಗ್ ಉದ್ಯಮದಲ್ಲಿ ಭಾರತದ ಅಸ್ತಿತ್ವ ಹೆಚ್ಚುತ್ತಿರುವುದನ್ನು ಪ್ರತಿರೋಧಿಸುತ್ತವೆ ಎಂದು ಇಪಿಡಬ್ಲ್ಯೂಎ ಮತ್ತು ವೃತ್ತಿಪರ ಗೇಮಿಂಗ್ ಸಮುದಾಯವು ಹೇಳಿದೆ. ಕಾನೂನು ಮೂಲಕ ಹೋರಾಟ ನಡೆಸುವ ಮೂಲಕ ವೃತ್ತಿಪರ ಆಟಗಾರರಿಗೆ ರಕ್ಷಣೆ ಒದಗಿಸುವ ಪ್ರಯತ್ನ ನಡೆಸಲಾಗುತ್ತಿದ್ದು, ಸಾವಿರಾರು ಆಟಗಾರರು ಜೀವನಕ್ಕಾಗಿ ಈ ಆನ್‌ಲೈನ್ ಗೇಮಿಂಗ್ ಮೇಲೆ ಅವಲಂಬಿತರಾಗಿದ್ದಾರೆ.