ಜಾಗತಿಕ ಸಾರಿಗೆ ಕೇಂದ್ರವಾಗಿ ಭಾರತವನ್ನು ಸ್ಥಾಪಿಸುವ ಕಾರ್ಯತಂತ್ರ ಘೋಷಿಸಿದ ಸಿಐಐ

ವಿಜಯ ದರ್ಪಣ ನ್ಯೂಸ್…

ಜಾಗತಿಕ ಸಾರಿಗೆ ಕೇಂದ್ರವಾಗಿ ಭಾರತವನ್ನು ಸ್ಥಾಪಿಸುವ ಕಾರ್ಯತಂತ್ರ ಘೋಷಿಸಿದ ಸಿಐಐ

24 ಫೆಬ್ರವರಿ 2025: ದೇಶದಲ್ಲಿ ತ್ವರಿತವಾಗಿ ವಿಸ್ತರಣೆಯಾಗುತ್ತಿರುವ ಸಾರಿಗೆ ವಲಯ ಮತ್ತು ಆರ್ಥಿಕ ಸಂಭಾವ್ಯತೆಯನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಭಾರತವನ್ನು “ಜಾಗತಿಕ ಸಾರಿಗೆ ಕೇಂದ್ರ”ವನ್ನಾಗಿ ಸ್ಥಾಪಿಸುವ ಮಹತ್ವದ ಗುರಿಯನ್ನು ಭಾರತೀಯ ಉದ್ಯಮಗಳ ಸಂಘಟನೆ (ಸಿಐಐ) ಹೊಂದಿದೆ. ಜಾಗತಿಕ ಸಾರಿಗೆ ವಲಯದಲ್ಲಿ ಪ್ರಮುಖ ಪಾತ್ರವನ್ನು ಭಾರತ ವಹಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ, ಉದ್ಯೋಗ ಅವಕಾಶಗಳನ್ನು ಒದಗಿಸುವುದು, ಹೂಡಿಕೆಗಳನ್ನು ಆಕರ್ಷಿಸುವುದು ಮತ್ತು ಆರ್ಥಿಕ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದಕ್ಕಾಗಿ ತನ್ನ ವಿಶಿಷ್ಟ ಸಾಮರ್ಥ್ಯವನ್ನು ಬಳಸಿಕೊಳ್ಳುವ ಗುರಿ ಈ ಕಾರ್ಯಕ್ರಮದ್ದಾಗಿದೆ.

ಭಾರತದಲ್ಲಿನ ಸಾರಿಗೆ ವಲಯವು ಇಕಾಮರ್ಸ್‌, ಉತ್ಪಾದನೆ ಮತ್ತು ಜಾಗತಿಕ ಕ್ಯಾಪಬಿಲಿಟಿ ಸೆಂಟರ್‌ಗಳಿಂದಾಗಿ (ಜಿಸಿಸಿ) ಬೆಳವಣಿಗೆ ಕಾಣುತ್ತಿದೆ. ದಕ್ಷತೆ, ಕಡಿಮೆ ವೆಚ್ಚ ಮತ್ತು ಅನ್ವೇಷಣೆಯನ್ನು ಬಯಸುವ ಜಾಗತಿಕ ಉದ್ಯಮಗಳಿಗೆ ಆದ್ಯತೆಯ ಜಿಸಿಸಿ ಕೇಂದ್ರವಾಗಿ ಭಾರತ ಈಗಾಗಲೇ ಸ್ಥಾಪನೆಗೊಂಡಿದೆ. ಇದು ಗಮನಾರ್ಹ ಉದ್ಯೋಗ ಅವಕಾಶಗಳನ್ನು ಉಂಟುಂಆಡುವ ನಿರೀಕ್ಷೆಯನ್ನು ಹೊಂದಿದ್ದು, 2030 ರ ವೇಳೆಗೆ ಅಂದಾಜು 1.5 ಇಂದ 1.7 ಕೋಟಿ ಉದ್ಯೋಗವನ್ನು ಸೃಷ್ಟಿಸಲಿವೆ.

ಸಾರಿಗೆ ವಲಯದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮುವುದಕ್ಕೆ ಭಾರತ ಈಗಾಗಲೇ ಎಲ್ಲ ಅಗತ್ಯ ಅಂಶಗಳನ್ನು ಹೊಂದಿದೆ. ದೇಶದಲ್ಲಿ ತ್ವರಿತವಾಗಿ ಅಭಿವೃದ್ಧಿ ಕಾಣುತ್ತಿರುವ ಸಾರಿಗೆ ಮೂಲಸೌಕರ್ಯವಿದೆ. ಇದು ಸರಾಗ ಸಂಪರ್ಕ ಮತ್ತು ದಕ್ಷ ಪೂರೈಕೆ ಸರಣಿ ನಿರ್ವಹಣೆಗೆ ಉತ್ತಮ ಅಡಿಪಾಯವನ್ನು ಹಾಕುತ್ತದೆ. ಬೆಳವಣಿಗೆಗೆ ಪೂರಕವಾಗಿ ವೈವಿಧ್ಯಮಯ ಮತ್ತು ಕುಶಲ ಕಾರ್ಯಪಡೆಯಿದ್ದು, ನಿರ್ವಹಣೆಯ ಎಲ್ಲ ಹಂತದಲ್ಲೂ ಕುಶಲತೆ ಪಡೆದ ಪಡೆ ಇದೆ. ಇದು ವಿವಿಧ ವಲಯದಲ್ಲಿ ಪರಿಣಿತಿ ಮತ್ತು ಹೊಂದಾಣಿಕೆಯನ್ನು ಹೊಂದಿರುತ್ತದೆ.

ಇದರ ಜೊತೆಗೆ, ಬ್ಯುಸಿನೆಸ್ ಮತ್ತು ಟೆಕ್ನಾಲಜಿ ವಲಯದಲ್ಲಿ ಅಪಾರ ಪ್ರತಿಭೆಯನ್ನು ಭಾರತ ಹೊಂದಿದೆ. ಇವರು ಉದ್ಯಮದಲ್ಲಿ ಅನ್ವೇಷಣೆ ಮತ್ತು ಮಹತ್ವದ ಬೆಳವಣಿಗೆಯನ್ನು ಮುನ್ನಡೆಸುತ್ತಾರೆ. ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್‌ಗಳ ಅಸ್ತಿತ್ವ ವಿಸ್ತರಣೆಯಾಗುತ್ತಿದ್ದು, ಅಂತಾರಾಷ್ಟ್ರೀಯ ಬ್ಯುಸಿನೆಸ್ ಆಪರೇಶನ್ಸ್‌ಗೆ ಭಾರತವನ್ನು ಕೇಂದ್ರವನ್ನಾಗಿಸುತ್ತದೆ.

ದೇಶದಲ್ಲಿ ಬೆಳೆಯುತ್ತಿರುವ ಸ್ಟಾರ್ಟಪ್ ಪರಿಸರವು ಕ್ರಿಯಾಶೀಲತೆ ಮತ್ತು ತಾಂತ್ರಿಕ ಸುಧಾರಣೆಯನ್ನು ಪ್ರೋತ್ಸಾಹಿಸುತ್ತದೆ. ಅಲ್ಲದೆ, ಸಾರಿಗೆ ವಲಯದಲ್ಲಿ ಮಹತ್ವದ ಅನ್ವೇಷಣೆಗೆ ಕಾರಣವಾಗಿದೆ. ಈ ಪ್ರಗತಿಯು ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯ ಬೆಂಬಲವನ್ನು ಹೊಂದಿದ್ದು, ಉದ್ಯಮ ತೊಡಗಿಸಿಕೊಳ್ಳುವಿಕೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಭವಿಷ್ಯದ ಸವಾಲುಗಳನ್ನು ಪೂರೈಸಲು ಮುಂದಿನ ತಲೆಮಾರಿನ ವೃತ್ತಿಪರರನ್ನು ಇದು ಸಿದ್ಧಪಡಿಸುತ್ತದೆ. ಇದರ ಜೊತೆಗೆ ಸರ್ಕಾರದ ನೀತಿಗಳು ಕೂಡಾ ಪೂರಕವಾಗಿದ್ದು, ಸಾರಿಗೆ ವಲಯದಲ್ಲಿ ಬೆಳವಣಿಗೆ ಮತ್ತು ಅಂತಾರಾಷ್ಟ್ರೀಯ ಸಹಭಾಗಿತ್ವಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತದೆ.

ಲಾಜಿಸ್ಟಿಕ್ಸ್ ಫಾರ್ ಆಲ್‌ – ಸಿಐಐ ನ ಒಂದು ಮಹತ್ವದ ಕಾರ್ಯಕ್ರಮ

ಈ ಗುರಿಯನ್ನು ಸಾಧಿಸಲು ಲಾಜಿಸ್ಟಿಕ್ಸ್ ಫಾರ್ ಆಲ್ ಕಾರ್ಯಕ್ರಮವನ್ನು ಸಿಐಐ ಬಿಡುಗಡೆ ಮಾಡಿದ್ದು, ಸಾರಿಗೆ ಪರಿಸರದಲ್ಲಿನ ಎಲ್ಲ ಪಾಲುದಾರರನ್ನು ಒಳಗೊಳ್ಳುವ ಪ್ರಯತ್ನವಾಗಿದೆ. ಈ ಉಪಕ್ರಮವು ಹಲವು ಅವಕಾಶಗಳನ್ನು ಉದ್ಯಮಗಳು ಮತ್ತು ವಿವಿಧ ದೇಶಗಳಲ್ಲಿ ನಿರ್ಮಿಸಲಿದ್ದು, ವೃತ್ತಿ ಅವಕಾಶ, ವೃತ್ತಿಪರ ಬೆಳವಣಿಗೆ ಮತ್ತು ಉದ್ಯಮಶೀಲತೆ ಅವಕಾಶಗಳನ್ನು ಒದಗಿಸಲಿದೆ.

ಲಾಜಿಸ್ಟಿಕ್ಸ್ ಫಾರ್ ಆಲ್‌ ಎಂಬುದು ಸಿಐಐ ಉಪಕ್ರಮವಾಗಿದ್ದು, ಎಲ್ಲ ಪಾಲುದಾರರನ್ನೂ ಇದು ತೊಡಗಿಸಿಕೊಳ್ಳಲಿದೆ. ಭಾರತವನ್ನು ಜಾಗತಿಕ ಸಾರಿಗೆ ಕೇಂದ್ರವನ್ನಾಗಿಸುವ ಗುರಿಗೆ ಇದು ಅತ್ಯಂತ ಮಹತ್ವದ್ದಾಗಿದೆ. ಈ ಉಪಕ್ರಮವು ಹಲವು ಅವಕಾಶಗಳನ್ನು ಉದ್ಯಮಗಳು ಮತ್ತು ವಿವಿಧ ದೇಶಗಳಲ್ಲಿ ನಿರ್ಮಿಸಲಿದ್ದು, ವೃತ್ತಿ ಅವಕಾಶ, ವೃತ್ತಿಪರ ಬೆಳವಣಿಗೆ ಮತ್ತು ಉದ್ಯಮಶೀಲತೆ ಅವಕಾಶಗಳನ್ನು ಒದಗಿಸಲಿದೆ” ಎಂದು ಸಿಐಐ ಇನ್‌ಸ್ಟಿಟ್ಯೂಟ್‌ನ ಸಾರಿಗೆ ಸಲಹಾ ಸಮಿತಿಯ ಚೇರ್ಮನ್ ಆರ್‌ ದಿನೇಶ್‌ ಹೇಳಿದ್ದಾರೆ.

ಸಿಐಐ ಇನ್‌ಸ್ಟಿಟ್ಯೂಟ್ ಆಫ್ ಲಾಜಿಸ್ಟಿಕ್ಸ್‌ ಒಂದು ಸಹಭಾಗಿತ್ವ ಪ್ಲಾಟ್‌ಫಾರಂ ಆಗಿದ್ದು, ನೀತಿ ನಿರೂಪಕರು, ಉದ್ಯಮದ ಪಾಲುದಾರರು (ಸಾರಿಗೆ ಸೇವೆ ಪೂರೈಕೆದಾರರು ಮತ್ತು ಬೆಳಕೆದಾರರ ವಿಭಾಗಗಳು ಸೇರಿದಂತೆ), ಶೈಕ್ಷಣಿಕ ಸಂಸ್ಥೆ, ತರತಬೇತಿ ಕೇಂದ್ರಗಳು ಮತ್ತು ಇತರರನ್ನು ಒಂದುಗೂಡಿಸುತ್ತದೆ ಮತ್ತು ಈ ಮೂಲಕ ಭಾರತವನ್ನು ಜಾಗತಿಕ ಸಾರಿಗೆ ಕೇಂದ್ರವನ್ನಾಗಿಸುವ ಗುರಿಯನ್ನು ತಲುಪುವಲ್ಲಿ ಕೆಲಸ ಮಾಡುತ್ತದೆ.

ಸಾರಿಗೆಯಲ್ಲಿ ಪರಿಣಿತಿ ಸಾಧಿಸಲು ಕಾರ್ಯಪಡೆಯನ್ನು ರೂಪಿಸುವುದು

ಸಿಐಐ ಕಾರ್ಯಕ್ರಮದ ಪ್ರಮುಖ ಆಧಾರ ಸ್ಥಂಭವೆಂದರೆ, ಸಾರಿಗೆ ವಲಯದಲ್ಲಿ ಕಾರ್ಯಪಡೆಯನ್ನು ರೂಪಿಸುವುದಾಗಿದೆ. ಈ ಉದ್ಯಮಕ್ಕೆ ಪೂರಕವಾಗಿ ತರಬೇತಿ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸುವುದು ಮತ್ತು ಈ ಉದ್ಯಮದ ಅಗತ್ಯಕ್ಕೆ ಅಭ್ಯರ್ಥಿಗಳನ್ನು ಉತ್ತಮವಾಗಿ ತರಬೇತಿ ಪಡೆದುಕೊಳ್ಳುವ ವ್ಯವಸ್ಥೆಯನ್ನು ಮಾಡುವುದಾಗಿದೆ. ಸಾರಿಗೆ ವಲಯದಲ್ಲಿನ ಉದ್ಯೋಗಗಳ ಬಗ್ಗೆ ಪದವಿ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವುದು ಮತ್ತು ಕಡಿಮೆ ವಯಸ್ಸಿನಲ್ಲೇ ಈ ವಲಯದ ಬಗ್ಗೆ ಜನರಲ್ಲಿ ಆಸಕ್ತಿ ಮೂಡಿಸುವುದರ ಮೇಲೆ ಇದು ಗಮನ ಕೇಂದ್ರೀಕರಿಸುತ್ತದೆ. ಪ್ರಾದೇಶಿಕ ಬೇಡಿಕೆಯನ್ನು ಪೂರೈಸಲು, 2 ಮತ್ತು 3ನೇ ಹಂತದ ನಗರಗಳಲ್ಲಿ ಸ್ಥಳೀಯ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಮತ್ತು ದೇಶದ ಎಲ್ಲೆಡೆ ಕೌಶಲ ಅಭಿವೃದ್ಧಿ ಅವಕಾಶವನ್ನು ಒದಗಿಸಲಾಗುತ್ತಿದೆ.

ಇದರ ಜೊತೆಗೆ, ಕುಶಲ ಪ್ರತಿಭೆಯನ್ನು ಆಕರ್ಷಿಸಲು ಸಂಭಾವ್ಯ ವೃತ್ತಿ ಪಥವನ್ನಾಗಿ ಸಾರಿಗೆ ವಲಯವನ್ನು ಪ್ರೋತ್ಸಾಹಿಸುವ ಗುರಿಯನ್ನು ಇದು ಹೊಂದಿದೆ. ಅಂತಾರಾಷ್ಟ್ರೀಯ ಮಾನ್ಯತೆ ಹೊಂದಿರುವ ತರಬೇತಿ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಜಾಗತಿಕ ಮಟ್ಟದಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸುವುದಕ್ಕಾಗಿ ಮಹತ್ವ ಸಹಭಾಗಿತ್ವಗಳನ್ನು ಕೈಗೊಳ್ಳಲಾಗುತ್ತಿದೆ. ಮಾನದಂಡವನ್ನು ನೀಡಲು ಮತ್ತು ಅಭ್ಯರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಪ್ಲೇಸ್‌ಮೆಂಟ್‌ಗಳನ್ನು ಒದಗಿಸಲು ಅಂತಾರಾಷ್ಟ್ರೀಯ ಉದ್ಯಮಗಳ ಜೊತೆಗೂ ಸಿಐಐ ತೊಡಗಿಸಿಕೊಳ್ಳುತ್ತದೆ ಮತ್ತು ಜಾಗತಿಕ ಮಾನದಂಡಗಳಿಗೆ ಭಾರತದ ಸಾರಿಗೆ ವಲಯದ ಕಾರ್ಯಪಡೆಯನ್ನು ಸಿದ್ಧಪಡಿಸುತ್ತದೆ.

ಸಿಐಐ ಹೊಂದಿರುವ ಆರು ಹಂತದ ಕಾರ್ಯಪಡೆ ಅಭಿವೃದ್ಧಿ ಕಾರ್ಯತಂತ್ರವು ಗ್ರಾಮೀಣ ಮತ್ತು ನಗರದ ಮಧ್ಯೆ ಇರುವ ಅಂತರವನ್ನು ಕಡಿಮೆ ಮಾಡುವುದು, ಎಸ್‌ಎಂಇ ಮತ್ತು ದೊಡ್ಡ ಉದ್ಯಮಗಳ ವಿಶಿಷ್ಟ ಅಗತ್ಯಗಳನ್ನು ಪೂರೈಸುವುದು ಮತ್ತು ಸಾರಿಗೆ ಕಾರ್ಯಪಡೆಯಲ್ಲಿ ಲಿಂಗ ವೈವಿಧ್ಯತೆಯನ್ನು ವೃದ್ಧಿಸುವ ದೃಷ್ಟಿಕೋನವನ್ನು ಇಟ್ಟುಕೊಂಡು ವಿನ್ಯಾಸ ಮಾಡಲಾಗಿದೆ. ಜಾಗತಿಕ ಸಾರಿಗೆ ಮತ್ತು ಪೂರೈಕೆ ಸರಣಿ ನಿರ್ವಹಣೆಯಲ್ಲಿನ ವೃತ್ತಿಗಳನ್ನು ಅಭ್ಯರ್ಥಿಗಳು ತೆಗೆದುಕೊಳ್ಳಲು ಈ ಪ್ರಯತ್ನಗಳು ನೆರವಾಗುತ್ತವೆ ಮತ್ತು ಜಾಗತಿಕ ಸಾರಿಗೆ ವಲಯದಲ್ಲಿ ಭಾರತವನ್ನು ಒಂದು ಪ್ರಮುಖ ಬಲವನ್ನಾಗಿ ರೂಪಿಸಲು ಸಹಾಯ ಮಾಡುತ್ತದೆ.