ಮದುವೆಯಲ್ಲಿ ಮದ್ಯ : ಸನ್ನದು ಕಡ್ಡಾಯ ಕೊಡಗು ಜಿಲ್ಲಾ ಅಬಕಾರಿ ಇಲಾಖೆ ಸೂಚನೆ

ವಿಜಯ ದರ್ಪಣ ನ್ಯೂಸ್….

ಮದುವೆಯಲ್ಲಿ ಮದ್ಯ : ಸನ್ನದು ಕಡ್ಡಾಯ ಕೊಡಗು ಜಿಲ್ಲಾ ಅಬಕಾರಿ ಇಲಾಖೆ ಸೂಚನೆ

ಕೊಡಗು: ಮದುವೆ ಸೇರಿದಂತೆ ಇತರ ಖಾಸಗಿ ಕಾರ್ಯಕ್ರಮಗಳಲ್ಲಿ ಮದ್ಯ ಸರಬರಾಜು ಮಾಡಲು ಒಂದು ದಿನದ ಸನ್ನದು ಪಡೆಯುವುದು ಕಡ್ಡಾಯವಾಗಿದೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ನಡೆಯುವ ಮದುವೆ, ಸಭೆ, ಸಮಾರಂಭಗಳಲ್ಲಿ ರಕ್ಷಣಾ ಮದ್ಯ ಹೊರ ರಾಜ್ಯದ ಮದ್ಯ, ನಕಲಿ ಮದ್ಯ, ಅಕ್ರಮ ಮದ್ಯ ಸರಬರಾಜಾಗುತ್ತಿರುವ ಬಗ್ಗೆ ದೂರು ಬಂದಿದ್ದು, ಇದು ರಾಜ್ಯ ಅಬಕಾರಿ ಕಾಯ್ದೆಯನ್ವಯ ಶಿಕ್ಷಾರ್ಹ ಅಪರಾಧ ವಾಗಿದೆ ಎಂದು ಅವರು ಹೇಳಿದ್ದಾರೆ.

ಅಬಕಾರಿ ಕಾಯ್ದೆ ಅಡಿಯಲ್ಲಿ ಒಂದು ದಿನಕ್ಕೆ ಸಂಬಂಧಿಸಿದಂತೆ ಖಾಸಗಿ ಸಮಾರಂಭಗಳಲ್ಲಿ ನಿಗದಿತ ಶುಲ್ಕ ಪಾವತಿಸಿ ಸ್ಥಳದ ಮಾಲೀಕರು,ಸಮಾರಂಭದ ಆಯೋಜಕರು ಅಬಕಾರಿ ವೆಬ್ಸೈಟ್ ಆನ್ ಲೈನ್ನಲ್ಲಿ ನಿಗದಿತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿದಲ್ಲಿ, ಅರ್ಜಿ ಸಲ್ಲಿಸಿದ ಸ್ಥಳಕ್ಕೆ ನಿಯಮಾನುಸಾರ ಮದ್ಯ ಸರಬರಾಜು, ಬಳಕೆ ಮಾಡಲು ಸಿಎಲ್-5 ಸನ್ನದು (ಸಾಂದರ್ಭಿಕ ಸನ್ನದು) ಪಡೆಯಲು ಅವಕಾಶ ಇದೆ.

ಈ ಹಿನ್ನಲೆಯಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ತಮಗೆ ಸೇರಿದ ಕಲ್ಯಾಣ ಮಂಟಪಗಳು, ಹೋಂ ಸ್ಟೇ, ರೆಸಾರ್ಟ್ಸ್ ಹಾಗೂ ಇನ್ನಿತರೇ ಸಾರ್ವಜನಿಕ, ಖಾಸಗಿ ಸ್ಥಳಗಳಲ್ಲಿ ನಡೆಯುವ ಮದುವೆ ಹಾಗೂ ಇನ್ನಿತರೇ ಸಮಾರಂಭಗಳಿಗೆ ಅಬಕಾರಿ ಇಲಾಖೆಯಿಂದ ನೀಡಲಾಗುವುದು.

ಸಾಂದರ್ಭಿಕ ಸನ್ನದು (ಸಿಎಲ್-5) ಪಡೆದಲ್ಲಿ ಮಾತ್ರ ಅನುಮತಿ ಪಡೆದ ಸ್ಥಳದಲ್ಲಿ ಕರ್ನಾಟಕ ರಾಜ್ಯದಲ್ಲಿ ಮಾರಾಟವಾಗುವ ಅಧಿಕೃತ ಮದ್ಯವನ್ನು ಬಳಸಬಹುದಾಗಿದೆ. ಒಂದು ವೇಳೆ ಸ್ಥಳಗಳಲ್ಲಿ ಅಬಕಾರಿ ಇಲಾಖೆಯಿಂದ ಯಾವುದೇ ಸನ್ನದು ಪಡೆಯದೇ ಮದ್ಯ ಬಳಕೆ/ಕಂಡು ಮಾರಾಟ ಮಾಡಿರುವುದು ಬಂದಲ್ಲಿ ಈ ಸ್ಥಳದ ಮಾಲಕರು ಮತ್ತು ಕಾರ್ಯಕ್ರಮದ ಆಯೋಜಕರ ವಿರುದ್ಧ ಅಬಕಾರಿ ಕಾನೂನು ಕೈಗೊಳ್ಳಲಾಗುವುದು ಎಂದು ಉಪ ಆಯುಕ್ತರು ಎಚ್ಚರಿಸಿದ್ದಾರೆ.