ವಿಮಾನ ರೆಸ್ಟೋರೆಂಟ್‌: ಭರ್ಜರಿ ಊಟ ಬಡಿಸಲಿದ್ದಾರೆ ಗಗನ ಸಖಿಯರು!

ವಿಜಯ ದರ್ಪಣ ನ್ಯೂಸ್…

ವಿಮಾನ ರೆಸ್ಟೋರೆಂಟ್‌: ಭರ್ಜರಿ ಊಟ ಬಡಿಸಲಿದ್ದಾರೆ ಗಗನ ಸಖಿಯರು!

ಬೆಂಗಳೂರು : ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ಹೊಸ ರೆಸ್ಟೋರೆಂಟ್ ಒಂದು ಶುರುವಾಗಿದೆ. ಇದು ಸಾಮಾನ್ಯ ರೆಸ್ಟೋರೆಂಟ್ ಅಲ್ಲ. ಇದು ದೊಡ್ಡ ವಿಮಾನದಂತೆ ಕಾಣುತ್ತದೆ. ಒಳಗೆ ಹೋಗಲು ಮತ್ತು ಹೊರಗೆ ಬರಲು ಎರಡು ವಿಮಾನದಂತೆಯೇ ಏಣಿಗಳಿವೆ. ಒಳಗೆ ಹೋದರೆ ವಿಮಾನದಲ್ಲಿ ಕುಳಿತಂತೆ ಅನಿಸುತ್ತದೆ. ಇದೇ ‘ಟೈಗರ್ ಆರೋ ರೆಸ್ಟೋರೆಂಟ್’. ರೆಸ್ಟೋರೆಂಟ್‌ನಲ್ಲಿರುವ ಎಲ್ಲಾ ಆಸನಗಳನ್ನು ವಿಮಾನದಂತೆ ಎರಡೂ ಬದಿಗಳಲ್ಲಿ ಜೋಡಿಸಲಾಗಿದೆ. ಮಧ್ಯದಲ್ಲಿ ವೇಟರ್‌ಗಳು ಓಡಾಡಲು ಜಾಗವಿದೆ.

ಈ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿರುವ ಒಬ್ಬ ಗ್ರಾಹಕರು ವಿಮಾನದಲ್ಲಿ ಕುಳಿತಂತೆ ಅನಿಸುತ್ತದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ. ಇದಕ್ಕೆ ನೀವು ಊಟ ಮಾಡುವುದಕ್ಕೆ ಹೋಗುವುದಕ್ಕೆ ಸೀಟುಗಳನ್ನು ಮುಂಚಿತವಾಗಿ
ಕಾಯ್ದಿರಿಸಬಹುದು. ಹಾಗೆ ಕಾಯ್ದಿರಿಸಿದರೆ ಬೋರ್ಡಿಂಗ್ ಪಾಸ್ ಕೂಡ ಸಿಗುತ್ತದೆ. ಅದನ್ನು ತೆಗೆದುಕೊಂಡು ಒಳಗೆ ಹೋಗಿ ಕಾಯ್ದಿರಿಸಿದ ಸೀಟಿನಲ್ಲಿ ಕುಳಿತುಕೊಳ್ಳಬಹುದು. ರೆಸ್ಟೋರೆಂಟ್ ಬಗ್ಗೆ ಮಾಹಿತಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ, ಅನೇಕ ಜನರು ರೆಸ್ಟೋರೆಂಟ್ ವಿಮರ್ಶೆಯನ್ನು ನೀಡಿದ್ದಾರೆ.

ರೆಸ್ಟೋರೆಂಟ್ ಒಳಗೆ ವಿಮಾನದಲ್ಲಿ ಕುಳಿತಂತೆ ಅನಿಸುತ್ತದೆ ಎಂಬುದರಲ್ಲಿ ಯಾರಿಗೂ ಅನುಮಾನವಿಲ್ಲ. ಮಕ್ಕಳೊಂದಿಗೆ ಒಂದು ದಿನ ಹೋಗಲು ಒಳ್ಳೆಯ ಜಾಗ ಎಂದು ಕೆಲವರು ಆಹಾರ ಸಾಧಾರಣ. ಆದರೆ, ಮಕ್ಕಳೊಂದಿಗೆ ವಿಮಾನದ ಒಳಭಾಗವನ್ನು ಅನುಭವಿಸಲು ಒಳ್ಳೆಯ ಜಾಗ. ಅಸಾಮಾನ್ಯ ಐಡಿಯಾ, ಹೃದಯಸ್ಪರ್ಶಿ ಅನುಭವ’ ಎಂದು ಒಬ್ಬರು ಬರೆದಿದ್ದಾರೆ. ಆದರೆ, ಇನ್ನೊಬ್ಬರಿಗೆ ಸೇವೆ ಅಷ್ಟು ಚೆನ್ನಾಗಿಲ್ಲ ಅನಿಸಿದೆ. ತುಂಬಾ ಜನಸಂದಣಿ. ಸೇವೆ ತುಂಬಾ ನಿಧಾನ. ಆಹಾರದ ಗುಣಮಟ್ ಮತ್ತು ರುಚಿಯೂ ಸಾಧಾರಣವಾಗಿದೆ. ಬಹುಶಃ, ಕಾಲಾನಂತರದಲ್ಲಿ ಇದು ಸುಧಾರಿಸಬಹುದು. ಇನ್ನು ವಿಮಾನ ರೆಸ್ಟೋರೆಂಟ್ ಮಾಲೀಕರಿಗೂ ಇದು ಹೊಸ ಅನುಭವವಾಗಿದೆ’ ಎಂದು ಇನ್ನೊಬ್ಬರು ಬರೆದಿದ್ದಾರೆ. ‘ಇತ್ತೀಚಿನ ದಿನಗಳಲ್ಲಿ ಯಾವ ವಿಮಾನವೂ ಟಿಕೆಟ್‌ನೊಂದಿಗೆ ಊಟ ನೀಡುವುದಿಲ್ಲ.