ಭಾರತದಲ್ಲಿನ “ಎಕ್ಸೀಡ್ 3.0 ಕ್ಯಾಂಪಸ್ ಚಾಲೆಂಜ್”ನ ವಿಜೇತರನ್ನು ಪ್ರಕಟಿಸಿದ ವ್ಯಾಬ್ಟೆಕ್

ವಿಜಯ ದರ್ಪಣ ನ್ಯೂಸ್….

ಭಾರತದಲ್ಲಿನ “ಎಕ್ಸೀಡ್ 3.0 ಕ್ಯಾಂಪಸ್ ಚಾಲೆಂಜ್”ನ ವಿಜೇತರನ್ನು ಪ್ರಕಟಿಸಿದ ವ್ಯಾಬ್ಟೆಕ್

ಬೆಂಗಳೂರು: ಫೆಬ್ರವರಿ 4, 2025 – ವ್ಯಾಬ್ಟೆಕ್ ಕಾರ್ಪೊರೇಷನ್, ಇಂದು ಭಾರತದಲ್ಲಿ ಕಂಪನಿಯ 2024-25 ರ “ಎಕ್ಸೀಡ್ 3.0 ಕ್ಯಾಂಪಸ್ ಚಾಲೆಂಜ್”ನ ವಿಜೇತರನ್ನು ಘೋಷಿಸಿದೆ. ಮೂರನೇ ಆವೃತ್ತಿಯಲ್ಲಿ, ಈ ಚಾಲೆಂಜ್ ಮಹತ್ವಾಕಾಂಕ್ಷಿ ವೃತ್ತಿಪರರಿಗೆ ತಮ್ಮ ಸೃಜನಶೀಲ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಮತ್ತು ಅವರು ರೈಲು ಉದ್ಯಮದ ಕ್ರಿಯಾತ್ಮಕ, ಸಂಕೀರ್ಣ ವಾಸ್ತವಗಳೊಂದಿಗೆ ಹೊಂದಿಕೊಳ್ಳುವ ಅವಕಾಶವನ್ನು ಒದಗಿಸಿದೆ.

“ಎಕ್ಸೀಡ್ ಕ್ಯಾಂಪಸ್ ಚಾಲೆಂಜ್, ನಾಳಿನ ಚಿಂತಕರನ್ನು ಮತ್ತು ದಕ್ಷ ಕಾರ್ಯಪಡೆಯನ್ನು ಬೆಳೆಸಲು ಒಂದು ಆದರ್ಶ ದ್ವೈವಾರ್ಷಿಕ ವೇದಿಕೆಯನ್ನು ಒದಗಿಸುತ್ತದೆ” ಎಂದು ಭಾರತದಲ್ಲಿನ ವಾಬ್ಟೆಕ್ ಕಾರ್ಪೊರೇಷನ್‌ನ ಹಿರಿಯ ಉಪಾಧ್ಯಕ್ಷೆ ಮತ್ತು ಪ್ರಾದೇಶಿಕ ನಾಯಕಿ ಡಾ. ಸುಜಾತಾ ನಾರಾಯಣ್ ಹೇಳಿದರು. “ವಿಜೇತ ತಂಡಗಳು, ರೈಲು ಉದ್ಯಮದಲ್ಲಿ ಯಶಸ್ವಿಯಾಗಲು ಅಗತ್ಯವಾದ ನವೀನ ಮನೋಭಾವ, ತಾಂತ್ರಿಕ ಕುಶಾಗ್ರಮತಿ, ಸಮರ್ಪಣೆ ಮತ್ತು ಉತ್ಸಾಹವನ್ನು ಪ್ರದರ್ಶಿಸಿದವು.”

ಭೋಪಾಲ್‌ನ ವಿಐಟಿ (ವೆಲ್ಲೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ)ಯನ್ನು ಪ್ರತಿನಿಧಿಸಿದ್ದ ಎಕ್ಸೀಡ್ 3.0 ನ ವಿಜೇತ ತಂಡವು, ‘ದೋಷಗಳ ಸರಳೀಕರಣ, ವರ್ಗೀಕರಣ ಮತ್ತು ಅವುಗಳ ಆವರ್ತನದ ಸಮೇತ ಚಿತ್ರಾತ್ಮಕವಾಗಿ ಪ್ರತಿನಿಧಿಸಿ ನವೀನ ಪರಿಕಲ್ಪನೆಯನ್ನು ಪ್ರದರ್ಶಿಸಿತು. ವಡೋದರಾದ ಗತಿ ಶಕ್ತಿ ವಿಶ್ವವಿದ್ಯಾಲಯದವರು ಮೊದಲ ರನ್ನರ್ ಅಪ್ ಆಗಿದ್ದು, ಅವರು ‘ಸ್ವಯಂಚಾಲಿತ ರೈಲು ವೇಳಾಪಟ್ಟಿ ಮತ್ತು ರೂಟಿಂಗ್’ ಅನ್ನು ಪ್ರಸ್ತುತಪಡಿಸಿದರು. ‘ರೈಲುಗಳ ಸುರಕ್ಷಿತ ಸೈಡಿಂಗ್’ ಅನ್ನು ಪ್ರಸ್ತಾಪಿಸಿದ ಪುಣೆಯ ಕಮ್ಮಿನ್ಸ್ ಕಾಲೇಜ್ ಆಫ್ ಎಂಜಿನಿಯರಿಂಗ್ ಫಾರ್ ವುಮೆನ್ ಮತ್ತು ‘ರೈಲು ಮೂಲಸೌಕರ್ಯ ಪರಿಶೀಲನೆಗಾಗಿ ಕಂಪ್ಯೂಟರ್ ದೃಷ್ಟಿಯ ಅನ್ವಯ’ವನ್ನು ಪ್ರಸ್ತಾಪಿಸಿದ ಚೆನ್ನೈನ ವಿಐಟಿ (ವೆಲ್ಲೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ತಂಡಗಳು ಎರಡನೇ ರನ್ನರ್ ಅಪ್ ಸ್ಥಾನವನ್ನು ಹಂಚಿಕೊಂಡವು.

ಈ ಪ್ಯಾನ್-ಇಂಡಿಯಾ ಸ್ಪರ್ಧೆಯಲ್ಲಿ ವಿಜೇತರಾಗಲು 150 ತಂಡಗಳು, ಮತ್ತು 70 ಸಂಸ್ಥೆಗಳಿಂದ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. 150 ತಂಡಗಳಲ್ಲಿ, ಎಂಟು ತಂಡಗಳು ಅಂತಿಮ ಸುತ್ತಿಗೆ ಅರ್ಹತೆ ಪಡೆದು, ಬೆಂಗಳೂರಿನ ವ್ಯಾಬ್ಟೆಕ್ ಇಂಡಿಯಾ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಕೇಂದ್ರದ ಪ್ರಮುಖರಿಗೆ ಯೋಜನೆಗಳನ್ನು ಪ್ರಸ್ತುತಪಡಿಸಿದವು. ಮೂರು ಅಗ್ರ ಫೈನಲಿಸ್ಟ್‌ಗಳು ಒಟ್ಟು ರೂ. 2.25 ಲಕ್ಷ ನಗದು ಬಹುಮಾನವನ್ನು ಗೆದ್ದರು.

“ಕಳೆದ ಕೆಲವು ವರ್ಷಗಳಿಂದ ನಮ್ಮ ಕ್ಯಾಂಪಸ್ ಭೇಟಿ ಕಾರ್ಯಕ್ರಮವು ಬೆಳೆಯುತ್ತಿದೆ” ಎಂದು ವಾಬ್ಟೆಕ್ ಕಾರ್ಪೊರೇಷನ್ ಇಂಡಿಯಾದ ಮಾನವ ಸಂಪನ್ಮೂಲಗಳ ಹಿರಿಯ ನಿರ್ದೇಶಕ ಅನುಪ್ ಕುಮಾರ್ ಪಾಲ್ ಹೇಳಿದರು. “ಎಕ್ಸೀಡ್ ಕ್ಯಾಂಪಸ್ ಚಾಲೆಂಜ್‌ನ ಪ್ರತಿಯೊಂದು ಆವೃತ್ತಿಯು ನಿರೀಕ್ಷಿತ ಉದ್ಯೋಗಿಗಳಿಗೆ, ಭಾರತ ಮತ್ತು ಪ್ರಪಂಚದಾದ್ಯಂತದ ಸಾರಿಗೆ ಸಮಸ್ಯೆಗಳನ್ನು ವ್ಯಾಬ್ಟೆಕ್ ಹೇಗೆ ಪರಿಹರಿಸುತ್ತಿದೆ ಎಂಬುದರ ಕುರಿತು ತಿಳಿದುಕೊಳ್ಳಲು ಇರುವ ಒಂದು ಅವಕಾಶವಾಗಿದೆ. ರೈಲು ಉದ್ಯಮವನ್ನು ಮೀರಿ, ಇನ್ನು ಹೆಚ್ಚಿನ ಪ್ರಭಾವ ಬೀರುವ ವಿಚಾರಗಳನ್ನು ನಾವು ಇಷ್ಟಪಡುತ್ತೇವೆ. “

ಈ ಸವಾಲಿಗೆ ವ್ಯಾಬ್ಟೆಕ್ ಆಗಸ್ಟ್ 2024 ರಲ್ಲಿ ಅರ್ಜಿಗಳನ್ನು ಕೋರಿತು. ಈ ಸವಾಲು ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗಳಿಂದ ಹಿಡಿದು ಪಿಎಚ್‌ಡಿ ಅಂತಿಮ ವರ್ಷದವರೆಗಿನ ವಿದ್ಯಾರ್ಥಿಗಳಿಗೆ ಮುಕ್ತವಾಗಿತ್ತು. ಈ ಸ್ಪರ್ಧೆಯು, ಮೆಕ್ಯಾನಿಕಲ್ ಮತ್ತು ಸಾಫ್ಟ್‌ವೇರ್ ಎಂಜಿನಿಯರಿಂಗ್‌ನಲ್ಲಿನ ಅಂತರಶಿಸ್ತೀಯ ನಾವೀನ್ಯತೆಗಳು, ರೊಬೊಟಿಕ್ಸ್ ಮತ್ತು ಸುಧಾರಿತ ಸಾಫ್ಟ್‌ವೇರ್ ಅಭಿವೃದ್ಧಿಯಂತಹ ಅತ್ಯಾಧುನಿಕ ತಂತ್ರಜ್ಞಾನಗಳ ಪರಿಶೋಧನೆ, ಪರ್ಯಾಯ ಇಂಧನಗಳು ಮತ್ತು ಸಂಬಂಧಿತ ಸುರಕ್ಷತಾ ಅಂಶಗಳು, ಕೃತಕ ಬುದ್ಧಿಮತ್ತೆ, ಕ್ಲೌಡ್ ಕಂಪ್ಯೂಟಿಂಗ್, ಸ್ಥಿತಿ ಮೇಲ್ವಿಚಾರಣೆ, ದೃಷ್ಟಿ ವರ್ಧನೆ, ಹೈಡ್ರೋಜನ್-ಚಾಲಿತ ಲೋಕೋಮೋಟಿವ್ ಮತ್ತು ಬ್ರೇಕಿಂಗ್ ಕಾರ್ಯಕ್ಷಮತೆಯಂತಹ ವೈವಿಧ್ಯಮಯ ವಿಷಯಗಳನ್ನು ಹೊಂದಿತ್ತು.