ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿ/ ಗಿರವಿ ಸಂಸ್ಥೆಗಳ ವಿರುದ್ಧ ದೂರು ನೀಡಿ
ವಿಜಯ ದರ್ಪಣ ನ್ಯೂಸ್….
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿ/ ಗಿರವಿ ಸಂಸ್ಥೆಗಳ ವಿರುದ್ಧ ದೂರು ನೀಡಿ
ಬೆಂ.ಗ್ರಾ ಜಿಲ್ಲೆ, ಫೆ.03: ನೊಂದಾಯಿತ ಲೇವಾದೇವಿ/ಗಿರವಿ ಸಂಸ್ಥೆಗಳು ಕರ್ನಾಟಕ ಲೇವಾದೇವಿ ಅಧಿನಿಯಮದಡಿ ಸಾರ್ವಜನಿಕರ ಭದ್ರತೆ ಸಾಲಗಳಿಗೆ ಗರಿಷ್ಟ ವಾರ್ಷಿಕ ಶೇಕಡಾ 14 ರಷ್ಟು ಹಾಗೂ ಭದ್ರತೆ ಇಲ್ಲದ ಸಾಲಗಳಿಗೆ ವಾರ್ಷಿಕ ಶೇಕಡಾ 16 ರಷ್ಟು ಬಡ್ಡಿ ವಿಧಿಸಬೇಕು.
ಹೆಚ್ಚುವರಿ ಬಡ್ಡಿ ವಿಧಿಸುತ್ತಿರುವ ನೋಂದಾಯಿತ ಲೇವಾದೇವಿ/ ಗಿರವಿ ಸಂಸ್ಥೆಗಳು ಕಂಡುಬಂದಲ್ಲಿ ಸಾರ್ವಜನಿಕರು ಕೆಳಕಂಡ ಕಛೇರಿಗೆ ದೂರು ಸಲ್ಲಿಸಬಹುದು.
ಸಹಕಾರ ಸಂಘಗಳ ಜಂಟಿ ನಿಬಂಧಕರ ಕಛೇರಿ, ಬೆಂಗಳೂರು ಪ್ರಾಂತ-ದೂ.ಸಂಖ್ಯೆ:080-26612911, ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ-ದೂ.ಸಂಖ್ಯೆ-080-22442152, ಸಹಕಾರ ಸಂಘಗಳ ಸಹಾಯಕ ಉಪ ನಿಬಂಧಕರ ಕಚೇರಿ ದೊಡ್ಡಬಳ್ಳಾಪುರ, ದೂ.ಸಂಖ್ಯೆ:9901539026 ಸಂಪರ್ಕಿಸಬಹುದಾಗಿದೆ ಎಂದು ಸಹಕಾರ ಸಂಘಗಳ ಉಪನಿಂಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
&&&&&&&&&&&&&&&&&&&&&&&&&&
ರೈತರಿಗಾಗಿ ಅಟಲ್ ಭೂ ಜಲ ಯೋಜನೆ ತರಬೇತಿ ಕಾರ್ಯಾಗಾರ
ಜಿಲ್ಲಾ ಕೃಷಿ ತರಬೇತಿ ಕೇಂದ್ರ ವತಿಯಿಂದ ರೈತರಿಗಾಗಿ 2024-25ನೇ ಸಾಲಿನ ಅಟಲ್ ಭೂಜಲ್ ಯೋಜನೆಯ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಫೆಬ್ರವರಿ 07 ರಂದು ಬೆಳಿಗ್ಗೆ 10:30 ಗಂಟೆಗೆ ದೇವನಹಳ್ಳಿ ತಾಲ್ಲೂಕಿನ ಬೊಮ್ಮವಾರದ ಸೋಮೆಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ತರಬೇತಿಯಲ್ಲಿ ಆಟಲ್ ಬೂಜಲ್ ಯೋಜನೆಯಡಿ (ABY) ಸಮುದಾಯ ಸಹಭಾಗಿತ್ವದೊಂದಿಗೆ ಅಂತರ್ಜಲ ನಿರ್ವಹಣೆ, ಜಲಭದ್ರತಾಯೋಜನೆ ಸಿದ್ದಪಡಿಸುವುದು, ನೀರಿನ ಬಳಕೆ ಕಡಿಮೆ ಮಾಡುವ ಸೂಕ್ಷ್ಮ ನೀರಾವರಿ ತಾಂತ್ರಿಕತೆಗಳು ಮತ್ತು ನೀರಿನ ಮರು ಪೂರೈಕೆ ಕ್ರಮಗಳ ಬಗ್ಗೆ ಚರ್ಚಿಸಿ ಮಾಹಿತಿ ನೀಡಲಾಗುವುದು.
ಆಸಕ್ತ ರೈತ ಭಾಂದವರು ತರಬೇತಿಯಲ್ಲಿ ಭಾಗವಹಿಸಲು ಮೊಬೈಲ್ ಸಂಖ್ಯೆ: 9901635511 / 8277929958 ಕರೆ ಮಾಡಿ ನೋಂದಾಯಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದುಕೊಳ್ಳವಂತೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.