ಜಿಲ್ಲಾಧಿಕಾರಿ ಶಿವಶಂಕರ್ ಅವರಿಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ
ವಿಜಯ ದರ್ಪಣ ನ್ಯೂಸ್…
ಜಿಲ್ಲಾಧಿಕಾರಿ ಶಿವಶಂಕರ್ ಅವರಿಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ
ಜನಸ್ನೇಹಿ ಹಾಗೂ ನೌಕರಸ್ನೇಹಿ ಎಂದೇ ಹೆಸರಾಗಿದ್ದ, ಎಂತಹದೇ ಸಮಸ್ಯೆಗಳನ್ನು ಸುಲಲಿತವಾಗಿ ಬಗೆಹರಿಸುತಿದ್ದ, ಜಂಟಲ್ ಮ್ಯಾನ್ ನಿಕಟಪೂರ್ವ ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ ಭಾಆಸೇ ಅವರಿಗೆ ಸಮಸ್ತ ಜಿಲ್ಲಾಡಳಿತ, ಅಧಿಕಾರಿ ಸಿಬ್ಬಂದಿ ವರ್ಗ ಹಾಗೂ ಅವರ ಅಭಿಮಾನಿಗಳಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.
ಹಲವು ಅಧಿಕಾರಿಗಳು ಜಿಲ್ಲಾಧಿಕಾರಿಗಳೊಂದಿಗಿನ ಒಡನಾಟ, ಅವರ ತಾಳ್ಮೆ, ಕೆಲಸದ ವೈಖರಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ರೀತಿ ಅಗಣಿತ ಅಂದರು.
ನಿಕಟಪೂರ್ವ ಜಿಲ್ಲಾಧಿಕಾರಿ ಡಾ.ಶಿವಶಂಕರ ಅವರು ಗೌರವ ಸ್ವೀಕರಿಸಿ ಮಾತನಾಡಿ ಕಳೆದ 1ವರ್ಷ 9 ತಿಂಗಳು ಜಿಲ್ಲೆಯ ಜನತೆ, ಅಧಿಕಾರಿಗಳು ನೀಡಿದ ಕೃತಜ್ಞತೆಯನ್ನು ಸ್ಮರಿಸಿದರು.
ಅಪಾರ ಸಂಖ್ಯೆಯ ಅಭಿಮಾನಿಗಳು ಜನಪ್ರತಿನಿಧಿಗಳು, ಸಾರ್ವಜನಿಕರು ಶುಭಕೋರಿದರು.
&&&&&&&&&&&&&&&&&&&&&&&&