ಗೌಡರ ಬಗ್ಗೆ ಅವಹೇಳನಕಾರಿ ವಿಚಾರಕ್ಕೆ ಖಂಡಿಸಿ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ
ವಿಜಯ ದರ್ಪಣ ನ್ಯೂಸ್….
ಗೌಡರ ಬಗ್ಗೆ ಅವಹೇಳನಕಾರಿ ವಿಚಾರಕ್ಕೆ ಖಂಡಿಸಿ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ
ಮಡಿಕೇರಿ: ಗೌಡ ಜನಾಂಗದ ಬಗ್ಗೆ ಅವಹೇಳನ ವಿಚಾರ
ಗೌಡ ಸಮಾಜದಿಂದ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಗೌಡರ ಬಗ್ಗೆಗಿನ ಅವಹೇಳನಕಾರಿ ವಿಚಾರಕ್ಕೆ ಖಂಡನೆ ವ್ಯಕ್ತಪಡಿಸಿ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಗೌಡ ಬಾಂಧವರು ಮಡಿಕೇರಿಯ ಗುಡ್ಡೆಮನೆ ಅಪ್ಪಯ್ಯ ಗೌಡ ಪ್ರತಿಮೆ ಬಳಿಯಿಂದ ಆರಂಭವಾದ ಮೆರವಣಿಗೆ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಸಾಗಿತು.
ಪ್ರತಿಭಟನೆಗ ಮೈಸೂರು, ಬೆಂಗಳೂರು ಗೌಡ ಸಮಾಜಗಳು ಸಾಥ್ ನೀಡಿದವು. ಶಾಂತಿಯುತವಾಗಿ ನಡೆದ ಪ್ರತಿಭಟನೆಗೆ
ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.
ಮಡಿಕೇರಿ ಮಾತ್ರವಲ್ಲದೆ ಮೈಸೂರು ಬೆಂಗಳೂರು ಸೇರಿದಂತೆ ಹಲವು ಕಡೆಗಳಿಂದ ಗೌಡ ಜನಾಂಗದವರು ಆಗಮಿಸಿದ್ದರು.
ಗೌಡರ ಬಗ್ಗೆ ಅವಹಳೇನ ಮಾಡಿದವರನ್ನು ತಕ್ಷಣವೆ ಬಂಧಿಸುವಂತೆ ಒತ್ತಾಯ ಹೇರಲಾಯಿತು.
ಪ್ರತಿಭಟನೆಯಲ್ಲಿ ಆರು ಸಾವಿರಕ್ಕೂ ಹೆಚ್ಚು ಗೌಡರು ಭಾಗಿ. ನಂತರ ಪ್ರತಿಭಟನೆಕರಾರು, ಜಿಲ್ಲಾಧಿಕಾರಿಗಳ ಕಚೇರಿಗೆ ದಾವಿಸಿ ಜಿಲ್ಲಾಧಿಕಾರಿಗಳಿಗೆ ಹಲವು ಬೇಡಿಕೆಗಳ ಮನವಿಯನ್ನು ಅರ್ಪಿಸಿದರು. ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಇದೆ ಸಂದರ್ಭ ಆಗ್ರಹಿಸಿದ್ದರು.
ನಂತರ ಜಿಲ್ಲಾಧಿಕಾರಿಗಳು ಮಾಧ್ಯಮದವರೊಂದಿಗೆ ಮಾತನಾಡಿ ಮೌನವಾಗಿ ಪ್ರತಿಭಟನೆಯನ್ನು ಮಾಡಿ ಮನವಿಯನ್ನು ಸಲ್ಲಿಸಿದ್ದಾರೆ. ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ನಾವು ಹಾಗೂ ಪೊಲೀಸ್ ಇಲಾಖೆ ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುತ್ತೇವೆ. ಕೊಡಗನ್ನು ಎಲ್ಲ ಜನಾಂಗಗಳ ಶಾಂತಿಯ ತೋಟವನ್ನಾಗಿ ಕಾಪಾಡಿಕೊಳ್ಳಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. ಪ್ರತಿಭಟನೆಯ ವೇಳೆ ಹೆಚ್ಚಿನ ಬಂದೋಬಸ್ತ್ ಪೊಲೀಸ್ ಇಲಾಖೆಯಿಂದ ಏರ್ಪಡಿಸಲಾಗಿತ್ತು.