ಬೆಟ್ಟಹಲಸೂರು-ರಾಜಾನುಕುಂಟೆ: ವಿಶೇಷ ಯೋಜನೆ ಮಾನ್ಯತೆ
ವಿಜಯ ದರ್ಪಣ ನ್ಯೂಸ್…
ಬೆಟ್ಟಹಲಸೂರು-ರಾಜಾನುಕುಂಟೆ: ವಿಶೇಷ ಯೋಜನೆ ಮಾನ್ಯತೆ
ನವದೆಹಲಿ: ಬೆಂಗಳೂರು-ರಾಜನಕುಂಟೆ ನಡುವಿನ 6.14 ಕಿ.ಮೀ. ರೈಲ್ವೆ ಮಾರ್ಗ ನಿರ್ಮಾಣ ಯೋಜನೆಯನ್ನು ವಿಶೇಷ ಯೋಜನೆಯೆಂದು ಕೇಂದ್ರ ರೈಲ್ವೆ ಸಚಿವಾಲಯ ಪರಿಗಣಿಸಿದೆ. ಈ ಬಗ್ಗೆ ಗೆಜೆಟ್ ಅಧಿಸೂಚನೆಯನ್ನು ಸೋಮವಾರ ಪ್ರಕಟಿಸಲಾಗಿದೆ.
ಈ ಮಾರ್ಗದ ನಡುವೆ ₹248 ಕೋಟಿ ವೆಚ್ಚದಲ್ಲಿ ರೈಲ್ವೆ ಬೈಪಾಸ್ ಮಾರ್ಗ (ಕಾರ್ಡ್ ಲೈನ್) ನಿರ್ಮಾಣಕ್ಕೆ ರೈಲ್ವೆ ಮಂಡಳಿ ಇತ್ತೀಚೆಗೆ ಮಂಜೂರಾತಿ ನೀಡಿದೆ. ಪ್ರಯಾಣಿಕ ರೈಲುಗಳು ಬೈಪಾಸ್ ಮಾರ್ಗದಲ್ಲಿ ಓಡಾಟ ನಡೆಸುವುದರಿಂದ ನಿಲ್ದಾಣದಲ್ಲಿ ಇತರ ರೈಲುಗಳ ಓಡಾಟಕ್ಕೆ ಅನುಕೂಲವಾಗಲಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು. ಯೋಜನೆಯನ್ನು ವಿಶೇಷ ಯೋಜನೆಯೆಂದು ಪರಿಗಣಿಸಬೇಕೆಂದು
ನಾವು ಮಾಡಿಕೊಂಡ ಮನವಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣನ್ ಸ್ಪಂದಿಸಿದ್ದಾರೆ’ ಎಂದರು.
ಈ ಮಾರ್ಗದಲ್ಲಿ ಜೋಡಿ ಹಳಿ ನಿರ್ಮಾಣಕ್ಕೆ ಒಪ್ಪಿಗೆ ನೀಡುವಂತೆ ನೈರುತ್ಯ ರೈಲ್ವೆಯು ರೈಲ್ವೆ ಮಂಡಳಿಗೆ 2022ರಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ಸರ್ವೆ ಹಾಗೂ ಕಾರ್ಯಸಾಧ್ಯತಾ ಅಧ್ಯಯನ ನಡೆಸಲಾಗಿತ್ತು. ಹಳಿ ನಿರ್ಮಾಣ ಸೇರಿದಂತೆ ಸಿವಿಲ್ ಕಾಮಗಾರಿಗೆ ₹216 ಕೋಟಿ, ಸಿಗ್ನಲ್ ಕಾಮಗಾರಿಗೆ ₹21 ಕೋಟಿ, ಎಲೆಕ್ನಿಕಲ್ ಕಾಮಗಾರಿಗೆ ₹14 ಕೋಟಿ ಸೇರಿದಂತೆ ಒಟ್ಟು ₹248 ಕೋಟಿ ವೆಚ್ಚ ಮಾಡಲು ಮಂಜೂರಾತಿ ನೀಡಲಾಗಿದೆ. ಸರಕು ಸಾಗಣೆ ರೈಲುಗಳ ಮಾರ್ಗ ಬದಲಾವಣೆಗೆ ಈ ಬೈಪಾಸ್ ಮಾರ್ಗ ಹೆಚ್ಚು ಅನುಕೂಲ ಕಲ್ಪಿಸಲಿದೆ.
‘ಬೆಂಗಳೂರು ನಗರ ಮತ್ತು ಸುತ್ತ- ಮುತ್ತಲಿನ ನಗರ ಪ್ರದೇಶಗಳ ನಡುವೆ ತಡೆರಹಿತ ರೈಲು ಸೇವೆ ಒದಗಿಸುವ ಉದ್ದೇಶದಿಂದ ಮಾಹಿತಿ ತಂತ್ರಜ್ಞಾನ
ನಗರದ ಸುತ್ತಲೂ 742 ಕಿ.ಮೀ. ಹೊಸ ರೈಲು ಮಾರ್ಗ ಅಂತಿಮ ಸ್ಥಳ ಸಮೀಕ್ಷೆ ನಡೆಸಲಾಗು. ತ್ತಿದೆ. ಬೆಂಗಳೂರಿನ ಸುತ್ತಮುತ್ತಲಿನ ಪ್ರಮುಖ ಪಟ್ಟಣಗಳನ್ನು ಸಂಪರ್ಕಿಸುವ ದೇಶದ ಅತಿದೊಡ್ಡ ವೃತ್ತರೈಲು ಸಂಪರ್ಕಜಾಲವನ್ನು (ಸರ್ಕ್ಯುಲರ್ ರೈಲ್ವೆ) ನಿರ್ಮಿಸುವ ಯೋಜನೆ ಇದ್ದು, ಅದರ ಕಾರ್ಯಸಾಧ್ಯತೆಯ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಮಾರ್ಗದಿಂದ ಸರ್ಕ್ಯುಲರ್ ಬೈಪಾಸ್ ಯೋಜನೆಗೂ ಅನುಕೂಲವಾಗಲಿದೆ’ ಎಂದು ಸಚಿವರು ಹೇಳಿದರು.
‘ರಾಜಾನುಕುಂಟೆ-ಬೆಟ್ಟಹಲಸೂರು ವಿಶೇಷ ರೈಲು ಯೋಜನೆಯಿಂದ ಸರಕು ವಾಹನಗಳಿಗೆ ಹೆಚ್ಚು ಉಪಯೋಗವಾಗುವ ನಿರೀಕ್ಷೆ ಇದೆ. ಈ ಯೋಜನೆಯಿಂದ ವಿಮಾನ ನಿಲ್ದಾಣಕ್ಕೆ ತೆರಳುವ ಜನರಿಗೆ ಸಹಾಯವಾಗಲಿದೆ’ ಎಂದು ರೈಲ್ವೆ ತಜ್ಞ ಕೆ.ಎನ್.ಕೃಷ್ಣಪ್ರಸಾದ್ ಹೇಳಿದರು.