ಪುಟ್ ಪಾತ್ ಗಳನ್ನೆ ನುಂಗುತ್ತಿರುವ ಪುಟ್ ಪಾತ್ ಅಂಗಡಿಗಳು
ವಿಜಯ ದರ್ಪಣ ನ್ಯೂಸ್….
ಪುಟ್ ಪಾತ್ ಗಳನ್ನೆ ನುಂಗುತ್ತಿರುವ ಪುಟ್ ಪಾತ್ ಅಂಗಡಿಗಳು … ಹೆಸರಿಗೆ ಮಾತ್ರ ಜನಸಾಮಾನ್ಯರು ಓಡಾಡುವ ಜಾಗ….
ಸುದ್ದಿ ಬಂದರು ಸದ್ದೆ ಮಾಡದ ಕೂಡುಮಂಗಳೂರು ಗ್ರಾಮಪಂಚಾಯತ್
ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮಪಂಚಾಯತಿಗೆ ಒಳಪಡುವ ಮುಖ್ಯ ರಸ್ತೆ
ಇಲ್ಲಿನ ಜನರು ವಾಹನ ಸವಾರರ ಬೈಗುಳದ ಮದ್ಯೆಮುಖ್ಯ ರಸ್ತೆಯಲ್ಲಿಯೇ ನಡೆದಾಡಬೇಕಾದ ಪರಿಸ್ಥಿತಿ.
ರಸ್ತೆ ಎರಡು ಬದಿಗಳಲ್ಲೂ ಪುಟ್ ಪಾತ್ಅಂಗಡಿಗಳಿಂದ ಕಂಗೊಳಿಸುತ್ತಿದ್ದರೆ ಅಂಗಡಿ ಸ್ಥಳಕ್ಕಾಗಿ ಪ್ರತಿದಿನ ಮಾತಿನ ಚಕಮಕಿ ನಡೆಯುವುದು ಸರ್ವೆ ಸಾಮಾನ್ಯ.
ಇನ್ನೂ ಸಂತೆದಿನ ರಸ್ತೆಯನ್ನೆ ಆಸರೆ ಪಡೆದು ರಸ್ತೆಯಲ್ಲಿಯೇ ವ್ಯಾಪಾರದ ಭರಾಟೆ ಜೋರು ಹೀಗಿದ್ದರು ತನ್ನ ಅರಿವೆ ಇಲ್ಲದಂತೆ ಇರುವ ಗ್ರಾಮಪಂಚಾಯತ್. ತನ್ನ ಕ್ಪೇತ್ರ ಸಾಕಷ್ಟು ವಿಸ್ತರಣೆ ಇಲ್ಲದಿದ್ದರೂ ಇರುವ ಜಾಗದಲ್ಲಿ ಚರಂಡಿ ನಿರ್ವಹಣೆ. ರಸ್ತೆ ಬದಿ ತ್ಯಾಜ್ಯ ನಿರ್ವಹಣೆ. ಕೊಳಚೆ ನೀರು ಕಾವೇರಿ ನದಿ ಸೇರುತಿರುವುದು ದುರದುಷ್ಟಕರ ಸಂಗತಿ.
ಸಂಚಾರಿ ಪೊಲೀಸ್ ಠಾಣೆ ಪಕ್ಕದಲ್ಲೇ ಇದ್ದರು ಅರಿವೆ ಇಲ್ಲದ ಹಾಗೆ ಸಂತೆದಿನ ಬೈಕ್ ಗಳನ್ನು ದಾರಿಮದ್ಯೆ ನಿಲ್ಲಿಸುವುದು. ಪೊಲೀಸ್ ಠಾಣೆ ಮುಂದೆಯೇ ಹೆಲ್ಮೆಟ್ ಧರಿಸದೆ ವಾಹನಗಳಲ್ಲಿ ಓಡಾಡುವುದು ಸರ್ವೆ ಸಾಮಾನ್ಯ ಹೀಗಿದ್ದರು ಎಚ್ಚೆತ್ತುಕೊಳ್ಳದ ಇಲಾಖೆ ಇನ್ನೂ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಕಾದು ನೋಡಬೇಕಾಗಿದೆ.
@@@@@######@@@@@@@@@#@@
ಎ.ಎಸ್.ಐ. ಆಗಿ ಮುಂಬಡ್ತಿ
ಮಡಿಕೇರಿಯ ಪೋಲಿಸ್ ಇಲಾಖೆಯಲ್ಲಿ
ಕಾರ್ಯನಿರ್ವಹಿಸುತ್ತಿರುವ
ನವೀನ್ ಕುಮಾರ್ ಎಂ.ಕೆ
ಇವರು ಹೆಡ್ ಕಾನ್ಸ್ಟೇಬಲ್ ನಿಂದ
ಎ..ಎಸ್. ಐ. ಆಗಿ ಮುಂಬಡ್ತಿಯನ್ನು
ಪೋಲಿಸ್ ವರಿಷ್ಠಾಧಿಕಾರಿ
ರಾಮರಾಜನ್ ರವರಿಂದ ಸ್ವೀಕರಿಸಿದರು.
–-ಪ್ರಕಾಶ್ ವಿ ವಿ