ಬ್ಯಾರಿಕೇಡ್ ಗೆ ಸಿಲುಕಿದ ಕಾಡಾನೆ ರಕ್ಷಿಸಿದ ಅರಣ್ಯ ಇಲಾಖೆ
ವಿಜಯ ದರ್ಪಣ ನ್ಯೂಸ್…
ನಾಗರಹೊಳೆ ಉದ್ಯಾನವನದ ವೀರನ ಹೊಸಳ್ಳಿಯಲ್ಲಿ
ಬ್ಯಾರಿಕೇಡ್ ಗೆ ಸಿಲುಕಿದ ಕಾಡಾನೆ ರಕ್ಷಿಸಿದ ಅರಣ್ಯ ಇಲಾಖೆ
ನಾಗರಹೊಳೆ ಉದ್ಯಾನದಂಚಿನ ವೀರನಹೊಸಹಳ್ಳಿ ವ್ಯಾಪ್ತಿಯ ಅರಸುಹೊಸಕಟ್ಟೆಯ ಕೆರೆಯಲ್ಲಿ ಸಿಮೆಂಟ್ ಕಂಬದ ಬ್ಯಾರಿಕೇಡ್ ದಾಟಲಾರದೆ ಸಿಲುಕಿದ್ದ ಆನೆಯನ್ನು ಅರಣ್ಯ ಇಲಾಖೆ ರಕ್ಷಿಸಿದೆ.
ಎಂದಿನಂತೆ ಶನಿವಾರ ರಾತ್ರಿ ಕಾಡಿನಿಂದ ಹೊರಬಂದು ಹೊಟ್ಟೆ ತುಂಬಿಸಿಕೊಂಡ ಸಲಗ ಭಾನುವಾರ ಮುಂಜಾನೆ ಅರಣ್ಯಕ್ಕೆ ಮರಳುವ ವೇಳೆ ಈ ಘಟನೆ ನಡೆದಿದೆ.
ಸುತ್ತ ಮುತ್ತಲ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಭತ್ತ,ರಾಗಿ ಫಸಲನ್ನು ತಿಂದು ತುಳಿದು ನಾಶಪಡಿಸುತ್ತಿದ್ದ
ಕಾಡಾನೆ ಕೊನೆಗೆ ಜೆ.ಸಿ.ಬಿ ತಂದು ಕಾಡಾನೆಯ ಹಿಂಭಾಗದಿಂದ ಮೇಲೆತ್ತಿ ಸಿಮೆಂಟ್ ಕಂಬ ಅಲ್ಲಾಡಿಸಿ ಕಾಡಾನೆಯನ್ನು ಕಾಡು ಸೇರಿಸುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
&&&&&&&&&&&&&&&&&&&&&&&&
ಮಾಧವ ರಾಧಿಕೆ
ಮಾಧವನೆ ಸುಂದರನೆ
ಮನಸೆಳೆದ ಮನ್ಮಥನೆ
ಮೋಹನನೆ ಚೆನ್ನಿಗನೆ
ನನ್ನೊಲವ ಪ್ರಿಯಸಖನೆ |
ರಾಧೆ ಪ್ರೇಮ ಸುಧೆ
ರಾಧೆ ಪ್ರೇಮ ಸುಧೆ ||
ನೀನು ಜೊತೆಗಿರಲು
ಮುರಳಿಯ ನಾದದೊಳು
ನಿನ್ನ ನೆನಪಿರಲು
ಹರುಷವೆ ಬಾಳಿನೊಳು |
ಮುರಾರೆ ಮಧುಕರನೆ
ಮುರಾರೆ ಮಧುಕರನೆ ||
ನಿನ್ನ ಈ ಲೀಲೆಗಳು
ಪ್ರೇಮ ಜೋಕಾಲಿಯಲಿ
ಕಾಣಿಸದ ಮಾಯೆಗಳು
ಗೋಪಾಲನ ಚಿತ್ತದಲಿ |
ರಾಧೆ ಪ್ರೇಮ ಸುಧೆ
ರಾಧೆ ಪ್ರೇಮ ಸುಧೆ ||
ಜೀವನ ನದಿಯಿದು
ಎಲ್ಲಿಗೇ ಸಾಗಲಿ
ಒಲವು ಹೃದಯದಿ
ನಿನ್ನೆಡೆಗೆ ಹರಿಯಲಿ |
ಮುರಾರೆ ಮಧುಕರನೆ
ಮುರಾರೆ ಮಧುಕರನೆ ||
ಮಾಧವಿಯೆ ರಾಧಿಕೆಯೆ
ಮನಸೆಳೆದ ಸುಂದರಿಯೆ
ರೂಪಸಿಯೆ ದೀಪಿಕೆಯೆ
ನನ್ನೊಲವ ಪ್ರಿಯಸಖಿಯೆ |
ರಾಧೆ ಪ್ರೇಮ ಸುಧೆ
ರಾಧೆ ಪ್ರೇಮ ಸುಧೆ ||
ರಾಧಿಕಾ ವಿಶ್ವನಾಥ್, ಮಡಿಕೇರಿ