ನಿಸರ್ಗದ ಮಡಿಲಿನಲ್ಲಿ ಕಟ್ಟಡ ತಲೆ ಎತ್ತಿ ನಿಂತರು ಕಾರ್ಯಗತಗೊಳ್ಳದ ಹಾಲು ಉತ್ಪಾದಕ ಮೇಕೆ ಸಾಕಾಣಿಕಾ ಘಟಕ
ವಿಜಯ ದರ್ಪಣ ನ್ಯೂಸ್…
ನಿದ್ದೆ ಬಿಡದ ಪಶುಪಾಲನಾ ಇಲಾಖೆ
ನಿಸರ್ಗದ ಮಡಿಲಿನಲ್ಲಿ ಕಟ್ಟಡ ತಲೆ ಎತ್ತಿ ನಿಂತರು ಕಾರ್ಯಗತಗೊಳ್ಳದ ಹಾಲು ಉತ್ಪಾದಕ ಮೇಕೆ ಸಾಕಾಣಿಕಾ ಘಟಕ
ಕೊಡಗು: ಕುಶಾಲನಗರ ತಾಲ್ಲೂಕಿನ ಕೂಡಿಗೆ ಗ್ರಾಮ ಪಂಚಾಯಿತಿಗೆ ಒಳಪಡುವ ಬ್ಯಾಡಗೊಟ್ಟ ಗ್ರಾಮದಲ್ಲಿ ಕಳೆದ ಮೂರು ವರ್ಷದ ಹಿಂದೆ 2 ರಿಂದ 3 ಕೋಟಿ ರೂಪಾಯಿ ಹಣವನ್ನು ಸರ್ಕಾರದಿಂದ ಖರ್ಚು ಮಾಡಿ ಮೇಕೆ ಸಾಕಾಣಿಕ ಘಟಕ ಮತ್ತು ಜರ್ಸಿತಳಿ ಸಂವರ್ಧನಾಕ್ಷೇತ್ರ ವರ್ಷಗಳೆ ಕಳೆದರು ಕಾರ್ಯಗತ ಗೊಂಡಿಲ್ಲ.
ಕುರಿ ಮತ್ತು ಉಣ್ಣೆ ಉತ್ಪಾದಕರ ಜಿಲ್ಲಾ ಸಹಕಾರ ಸಂಘದಲ್ಲಿ 250 ಸದಸ್ಯರಿದ್ದು ಪಶುಸಂಗೋಪನ ಇಲಾಖೆಯಿಂದ ತಳಿಗಳಿಗೆ ತಕ್ಕಂತೆ ಕೂಡಿಗೆ ಫಾಂ ಹೌಸ್ನಲ್ಲಿ ತರಬೇತಿ ನೀಡಿರುತ್ತಾರೆ.
ಸರಿಸುಮಾರು 15 ರಿಂದ 20 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಲೀಟರಿಗೆ 200/-ರಿಂದ 250/- ರೂ ಗಳಿಗೆ ಬೆಲೆಬಾಳುವ ಮೇಕೆಹಾಲು ಮನುಷ್ಯನಿಗೆ ಆರೋಗ್ಯಕರವಾದ ಹಾಲು ಆದರೂ ರೋಗನಿರೋದಕ ಶಕ್ತಿಯನ್ನು ಹೊಂದಿದೆ.
ಮಾನ್ಯ ಶಾಸಕರು ಈ ಬಗ್ಗೆ ಗಮನಹರಿಸಿ ಘಟಕ ಪ್ರಾರಂಭಗೊಂಡರೆ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಿದಲ್ಲಿ ಜನರ ಬದುಕು ಸಾರ್ಥಕವಾಗಲಿದೆ.
ಪ್ರಕಾಶ್ ವಿ ವಿ
#################£#########
ಪುಟ್ಟ ತಂಗಿ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಬಣ್ಣ ಬಣ್ಣ ಅಂಗಿ ತೊಟ್ಟು
ಮನೆ ತುಂಬಾ ಓಡಾಡ್ತಾಳೆ
ತೊದಲು ತೊದಲು ಮಾತಾಡ್ತಾಳೆ
ನನ್ನ ಹಿಂದೆ ಬರ್ತಿರ್ತಾಳೆ
ಬೈದ್ರೆ ಕೆನ್ನೆ ಊದಿಸ್ತಾಳೆ
ಬಟ್ಟಲುಗಣ್ಣು ಸಂಪಿಗೆ ಮೂಗು
ಇವಳ ನಗೆಯು ಅರಳುವ ಮೊಗ್ಗು
ಅಣಕಿಸ್ತಾಳೆ ಮಾತು ಬಿಟ್ಟು
ಹೆಗಲ ಮೇಲೆ ಏರಿಬಿಟ್ಟು
ಗುಂಗುರು ಹೆರಳು ಹಿಡಿದಿರ್ತಾಳೆ
ಮೊಂಡು ಹಠವಾ ಮಾಡ್ತಿರ್ತಾಳೆ
ಅಣ್ಣ ಅಣ್ಣ ಅಂತಿರ್ತಾಳೆ
ಮುದ್ದು ತಂಗಿ ನಗ್ತಿರ್ತಾಳೆ
ರಾಧಿಕಾ ವಿಶ್ವನಾಥ್, ಮಡಿಕೇರಿ