EDII , EDU: ಭಾರತದ ಸಂಸ್ಥೆಗಳನ್ನು ವಾಣಿಜ್ಯೋದ್ಯಮ ಕೇಂದ್ರಗಳಾಗಿ ಪರಿವರ್ತಿಸುವುದು
ವಿಜಯ ದರ್ಪಣ ನ್ಯೂಸ್…
EDIIನ InnovateEDU: ಭಾರತದ ಸಂಸ್ಥೆಗಳನ್ನು ವಾಣಿಜ್ಯೋದ್ಯಮ ಕೇಂದ್ರಗಳಾಗಿ ಪರಿವರ್ತಿಸುವುದು
· EDII ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು www.ediindia.org ಗೆ ಭೇಟಿ ನೀಡಿ
ಬೆಂಗಳೂರು: ‘ಉತ್ಕೃಷ್ಟತೆಯ ಕೇಂದ್ರ’ ಎಂದು ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದಿಂದ ಗುರುತಿಸಲ್ಪಟ್ಟ, ಭಾರತೀಯ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ (EDII), ಅಹಮದಾಬಾದ್, ‘ಇನ್ನೋವೇಟ್ EDU: ಉದ್ಯಮಶೀಲ ಮನಸ್ಸುಗಳನ್ನು ಉತ್ತೇಜಿಸುವುದು’ ಎಂಬ ಪ್ರಮುಖ ಕಾರ್ಯಕ್ರಮವನ್ನು ಪ್ರಕಟಿಸಿದೆ. ಈ ಮೂರು ವರ್ಷಗಳ ಕಾರ್ಯಕ್ರಮವು, ಒಂದು ವಿನೂತನ ಕಾರ್ಯಕ್ರಮವಾಗಿದ್ದು, ಉದ್ಯಮಶೀಲ ಪರಿಸರ ವ್ಯವಸ್ಥೆಗಳನ್ನು ಬಲಪಡಿಸುತ್ತದೆ.
ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಾಂಸ್ಥಿಕ ಸಂಶೋಧನಾ ಸಾಮರ್ಥ್ಯಗಳ ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು InnovateEDU, ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳನ್ನು ಸಮಗ್ರ ಉದ್ಯಮಶೀಲತಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಲ್ಲಿ ಭಾಗವಹಿಸಲು ಆಹ್ವಾನಿಸುತ್ತದೆ. ಸೂಕ್ತವಾದ ಮಾರ್ಗದರ್ಶನ ಮತ್ತು ಅತ್ಯುತ್ತಮ ಸಂಪನ್ಮೂಲ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು 2025-2026 ಸಮೂಹಕ್ಕಾಗಿ ಕೇವಲ 20 ಸಂಸ್ಥೆಗಳನ್ನು ಆನ್‌ಬೋರ್ಡ್ ಮಾಡಲಾಗುತ್ತಿದೆ.
EDIIನ ವಾಣಿಜ್ಯೋದ್ಯಮ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಮತ್ತು ನಿರ್ದೇಶಕ ಡಾ. ಸತ್ಯ ರಂಜನ್ ಆಚಾರ್ಯ ಮಾತನಾಡಿ, “InnovateEDU ಅನ್ನು, ಭಾರತದ ಶೈಕ್ಷಣಿಕ ಸಂಸ್ಥೆಗಳ ಅತ್ಯಂತ ಮೂಲಭೂತವಾದ ಉದ್ಯಮಶೀಲ ಚಿಂತನೆಯನ್ನು ಪ್ರೇರೇಪಿಸಲು ಜಾಗರೂಕತೆಯಿಂದ ವಿನ್ಯಾಸಗೊಳಿಸಲಾಗಿದೆ. ಈ ಪ್ರಮುಖ ಉಪಕ್ರಮವು ಶ್ರೇಣೀಕೃತ, ರಚನಾತ್ಮಕ ವಿಧಾನವಾಗಿದ್ದು, ಇದು ರಾಷ್ಟ್ರೀಯ ಆದ್ಯತೆಯನ್ನು ಹೊಂದಿದ್ದು, ಸ್ಟಾರ್ಟ್‌ಅಪ್‌ಗಳನ್ನು, ನಾವೀನ್ಯತೆಯನ್ನು ಮತ್ತು ಸ್ವಾವಲಂಬನೆಯನ್ನು ಉತ್ತೇಜಿಸುತ್ತದೆ.
ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ, ವಿಚಾರದ ಪ್ರಾರಂಭದಿಂದ ಹಿಡಿದು ಹೂಡಿಕೆದಾರರನ್ನು ದೊರಕಿಸುವವರೆಗೆ ಮಾರ್ಗದರ್ಶನ ನೀಡುವ ಮೂಲಕ ಉದ್ಯಮಶೀಲತೆಯ ಶಿಕ್ಷಣವನ್ನು ಪರಿವರ್ತಿಸುತ್ತದೆ. ಸಾಮಾಜಿಕ ಕಳಕಳಿಯ ನಾವೀನ್ಯತೆಗೆ ಒತ್ತು ನೀಡುತ್ತಾ ಈ ಕಾರ್ಯಕ್ರಮವು ಅಂತರರಾಷ್ಟ್ರೀಯ ಜಾಲಗಳು, ಸಹಯೋಗದ ಸಂಶೋಧನೆ ಮತ್ತು ಮಾರ್ಗದರ್ಶನದ ಮೂಲಕ ಜಾಗತಿಕ ದೃಷ್ಟಿಕೋನಗಳನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳು ಆದಾಯವನ್ನು ಗಳಿಸುವ ವ್ಯವಹಾರಗಳನ್ನು ಅಭಿವೃದ್ಧಿಪಡಿಸಲು ಕಲಿಯುತ್ತಾರೆ ಮತ್ತು ಇದರಿಂದ ಅರ್ಥಪೂರ್ಣ ಸಾಮಾಜಿಕ ಬದಲಾವಣೆಯನ್ನು ತರಲು ಸಾಧ್ಯವಾಗುತ್ತದೆ, ಹಾಗೇ ಅವರು ವಿಶ್ವ ವೇದಿಕೆಯಲ್ಲಿ ಪ್ರಭಾವಶಾಲಿ ಉದ್ಯಮಿಗಳಾಗಿ ಹೊರಹೊಮ್ಮುತ್ತಾರೆ. ಕಾರ್ಯಕ್ರಮದ ಸಂಪೂರ್ಣ ಮಾಹಿತಿಯ ಸೆಷನ್ಅನ್ನು ಜನವರಿ 21, 2025 ರಂದು ನಡೆಸಲಾಗುವುದು, ಮತ್ತು ಆಯ್ದ ಸಂಸ್ಥೆಗಳಿಗೆ ಜನವರಿ 30, 2025 ರೊಳಗೆ ಸೂಚಿಸಲಾಗುವುದು.