ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಏಕಪಕ್ಷೀಯ ನಿರ್ಧಾರ, ಸರ್ವಾಧಿಕಾರಿ ಧೋರಣೆ ಬಿಡಬೇಕು: ಖಜಾಂಚಿ ಶಿವರುದ್ರಯ್ಯ ವಿ.ವಿ
ವಿಜಯ ದರ್ಪಣ ನ್ಯೂಸ್…
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಏಕಪಕ್ಷೀಯ ನಿರ್ಧಾರ, ಸರ್ವಾಧಿಕಾರಿ ಧೋರಣೆ ಬಿಡಬೇಕು: ಖಜಾಂಚಿ ಶಿವರುದ್ರಯ್ಯ ವಿ.ವಿ
ಬೆಂಗಳೂರು: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಪ್ರಜಾಸತ್ಮಾತಕ ನೌಕರರ ವೇದಿಕೆ ವತಿಯಿಂದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿರವರು ಏಕಪಕ್ಷೀಯವಾಗಿ ನಿರ್ಧಾರ, ಸರ್ವಾಧಿಕಾರಿ ಧೋರಣೆ ಖಂಡಿಸಿ ಮಾಧ್ಯಮಗೋಷ್ಟಿ ಏರ್ಪಡಿಸಲಾಗಿತ್ತು.
ರಾಜ್ಯ ಸರ್ಕಾರ ನೌಕರರ ಸಂಘದ ಖಜಾಂಚಿ ಶಿವರುದ್ರಯ್ಯ ವಿ.ವಿ.ರವರು ಮತ್ತು ಹಾಸನ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ.ಕೃಷ್ಣೇಗೌಡರವರು ಮತ್ತು ಸರ್ಕಾರಿ ನೌಕರರ ಎಸ್.ಸಿ/ಎಸ್.ಟಿ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಖಜಾಂಚಿ ಶಿವರುದ್ರಯ್ಯ ವಿ.ವಿ.ರವರು ಮಾತನಾಡಿ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ 7ಲಕ್ಷ ಸರ್ಕಾರಿ ನೌಕರರು ಇದ್ದಾರೆ ಅವರನ್ನು ಪ್ರತಿನಿಧಿಸುವ ಸಂಸ್ಥೆ ರಾಜ್ಯ ಸರ್ಕಾರಿ ನೌಕರರ ಸಂಘವಾಗಿದೆ.
ಚುನಾವಣೆ ನಡೆದು ಅಧಿಕಾರ ಸ್ವೀಕಾರ ಮಾಡಿ ಒಂದು ವಾರವಾಗಿದೆ ತರಾತುರಿಯಲ್ಲಿ ಮೂರು ಸ್ಥಾನಗಳ ನೇಮಕ ಮಾಡಿ ಆದೇಶ ಮಾಡಿದ್ದಾರೆ.
ಚುನಾಯಿತ ಖಜಾಂಚಿಯಾಗಿರುವ ನಮ್ಮ ಅಭಿಪ್ರಾಯವನ್ನು ಕೇಳಿಲ್ಲ, ಚರ್ಚೆ ಮಾಡಿ ತೀರ್ಮಾನ ಮಾಡಬೇಕಾದ ವಿಷಯವನ್ನು ಚರ್ಚೆ ಮಾಡದೇ ಏಕಪಕ್ಷೀಯ ನಿರ್ಧಾರ ಮಾಡಿ , ನೇಮಕ ಮಾಡಿದ್ದಾರೆ.
ನೌಕರರ ಸಂಘದಲ್ಲಿ ಸಮನ್ವಯತೆ ಇರಬೇಕು ಇಲ್ಲದೇ ಹೋದರೆ ಕಷ್ಟ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆಯಿಂದ ಸರ್ಕಾರಿ ನೌಕರರಿಗೆ ಸಂಕಷ್ಟವಾಗಲಿದೆ.
ಸರ್ಕಾರಿ ನೌಕರರ ಸಂಘದಲ್ಲಿ ಪ್ರತಿ ಪಕ್ಷದವರನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ.
ಎನ್.ಪಿ.ಎಸ್. ಜಾರಿ ಮತ್ತು ನೌಕರರ ಹಿತರಕ್ಷಣೆ ಮುಖ್ಯ ಈ ನಿಟ್ಟಿನಲ್ಲಿ ಅಧ್ಯಕ್ಷ ಷಡಕ್ಷರಿರವರು ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದರು.