ಭರತ ಭೂಮಿ ನನ್ನ ತಾಯಿ ನಾಟಕಕ್ಕೆ ರಾಷ್ಟ್ರೀಯ ಮಟ್ಟದ ಉತ್ತಮ ನಾಟಕ ಪ್ರಶಸ್ತಿ.

ವಿಜಯ ದರ್ಪಣ ನ್ಯೂಸ್ ….

ಬೆಂಗಳೂರು ನಗರ ಜಿಲ್ಲೆಯ ಪಿಎಂ ಶ್ರೀ ನವೋದಯ ವಿದ್ಯಾಲಯದ ಮಕ್ಕಳು ಅಭಿನಯಿಸಿದ ಭರತ ಭೂಮಿ ನನ್ನ ತಾಯಿ ಎಂಬ ನಾಟಕ ರಾಷ್ಟ್ರೀಯ ಮಟ್ಟದ ಉತ್ತಮ ನಾಟಕ ಎಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.


ಬೆಂಗಳೂರು ನಗರ ಜಿಲ್ಲೆಯ ಬಾಗಲೂರಿನಲ್ಲಿ ಇರುವ ಪಿಎಂಶ್ರೀ ನವೋದಯ ವಿದ್ಯಾಲಯದ ಮಕ್ಕಳು ರಂಗ ವಿಜಯ ತಂಡದ ಸಂಸ್ಥಾಪಕ ಹಾಗೂ ಖ್ಯಾತ ರಂಗಭೂಮಿ ನಿರ್ದೇಶಕ ಕಲಾ ಶ್ರೇಷ್ಠ ಮಾಲೂರು ವಿಜಿ ಪರಿಕಲ್ಪನೆ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮೂಡಿ ಬಂದ ಭರತ ಭೂಮಿ ನನ್ನ ತಾಯಿ ಎಂಬ ನಾಟಕ ರಾಷ್ಟ್ರೀಯ ಅತ್ಯುತ್ತಮ ನಾಟಕ ಎಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಒಂದು ತಿಂಗಳ ಕಾಲ ನವೋದಯ ವಿದ್ಯಾಲಯದಲ್ಲಿ ರಂಗ ತರಬೇತಿ ಶಿಬಿರವನ್ನು ಯೋಜನೆ ಮಾಡಿ ಅದರಲ್ಲಿ ಸಿದ್ಧವಾದ ನಾಟಕ ಮೊದಲು ಕ್ಲಸ್ಟರ್ ಮಟ್ಟದಲ್ಲಿ ಮೊದಲ ತಂಡವಾಗಿ ಆಯ್ಕೆಯಾಯಿತು .

ಅದಾದ ನಂತರ ವಲಯ ಮಟ್ಟದಲ್ಲಿ ಐದು ರಾಜ್ಯಗಳ ನಾಟಕ ಸ್ಪರ್ಧೆಯಲ್ಲಿ ಪ್ರಥಮ ತಂಡವಾಗಿ ಹೊರಹೊಮ್ಮಿತು ನಂತರದಲ್ಲಿ ಹೈದರಾಬಾದಿನಲ್ಲಿ ನಡೆದ ನವೋದಯ ವಿದ್ಯಾಲಯದ ರಾಷ್ಟ್ರೀಯ ಏಕತಾ ಸಮ್ಮೇಳನದಲ್ಲಿ ದೇಶದ ಎಲ್ಲಾ ರಾಜ್ಯಗಳು ತಮ್ಮ ತಮ್ಮ ನಾಟಕಗಳನ್ನು ಅಲ್ಲಿ ಪ್ರದರ್ಶನ ಗೊಳಿಸಿತು ಆ ಪ್ರದರ್ಶನದಲ್ಲಿ ಉತ್ತಮ ಮೂರು ತಂಡಗಳನ್ನು ಆಯ್ಕೆ ಮಾಡಲಾಯಿತು ಅದರಲ್ಲಿ ಈ ತಂಡದ ನಾಟಕ ಅತ್ಯುತ್ತಮ ರಾಷ್ಟ್ರೀಯ ನಾಟಕ ಎಂಬ ಪ್ರಶಸ್ತಿಯನ್ನು ಗಳಿಸುವಲ್ಲಿ ಯಶಸ್ವಿಯಾಯಿತು.

ಈ ನಾಟಕ ಭಾರತದ ಇಂದಿನ ಪರಿಸ್ಥಿತಿಯನ್ನು ವಿವರಿಸುತ್ತಾ ರಾಮಾಯಣ, ಮಹಾಭಾರತದಲ್ಲಿ ಮಹಿಳೆಯರ ಬದುಕಿನ ಬವಣೆಯನ್ನು ಚಿತ್ರಿಸುತ್ತಾ, ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳೆಯ ಸಾಧನೆ, ಸ್ವಾತಂತ್ರ್ಯ ನಂತರದಲ್ಲಿ ಮಹಿಳೆಯರ ಸಾಧನೆ, ಎಲ್ಲವನ್ನು ವಿವರಿಸುತ್ತಾ ಪ್ರಸ್ತುತ ಭಾರತದಲ್ಲಿ ಆಗುತ್ತಿರುವ ಶೋಷಣೆಗಳನ್ನು ಎತ್ತಿ ಹೇಳುತ್ತಾ, ಮಹಿಳೆಗೆ ಉತ್ತಮ ಸ್ಥಾನಮಾನ ನೀಡಬೇಕು ಎನ್ನುವ ಧ್ಯೇಯ ವಾಕ್ಯದೊಂದಿಗೆ ನಾಟಕ ಮುಗಿಯುತ್ತದೆ.
ನಾಟಕದ ಹಿನ್ನೆಲೆಯಲ್ಲಿ ನೃತ್ಯ ಸಂಯೋಜನೆ ಹಾಗೂ ಸಹ ನಿರ್ದೇಶನದಲ್ಲಿ ರಕ್ಷಿತಾ ರಾಘವೇಂದ್ರ, ಪ್ರಸಾದನ ಮತ್ತು ವಸ್ತ್ರ ವಿನ್ಯಾಸ ಗೀತಾ ರಾಘವೇಂದ್ರ, ರಂಗ ಪರಿಕರ ಜಯಚಂದ್ರ ರಾಜೇನಹಳ್ಳಿ ಕೆಲಸ ನಿರ್ವಹಿಸಿದ್ದರು.

ಕಲಾವಿದರಾಗಿ ಬಿ.ಆದ್ಯ,ಎನ್. ಧನುಶ್ರೀ, ಎಸ್. ಎಸ್. ಧಾತ್ರಿ, ಬಿ.ಎಂ. ಜೀವಿತ, ಖುಷ್ಬೂ ಪಾಟೇಲ್, ಆರ್. ಬಿ.ವೈಷ್ಣವಿ,‌ ಎನ್.ಅನುಶ್ರೀ, ಎಸ್. ವಿಸ್ಮಿತ, ಆರ್. ನಿಶ್ಚಿತ, ಆರ್. ತನ್ವಿ,ಎಮ್.ಅಶ್ವಿನ್, ಪಿ. ಕೆ. ಭಾರ್ಗವ,ಜೆ.ಲಲಿತ್ ,ಎಸ್. ಮಿಥಿಲೇಶ್,ಎಮ್.ನಮನ್,ಕೆ. ಜೆ.ಇಂದ್ರಜಿತ್ ಮುಂತಾದವರು ಅಭಿನಯಿಸಿದರು.

ಈ ಕಾರ್ಯಕ್ರಮಕ್ಕೆ ನವೋದಯ ವಿದ್ಯಾಲಯದ ಪ್ರಾಂಶುಪಾಲ ಉಮೇಶ್ ಚಂದ್ರ ಪ್ರಜಾಪತಿ, ಉಪ ಪ್ರಾಂಶುಪಾಲ ಸುಂದರ್ ಕುಮಾರ್, ನವೀನ್ ಕುಮಾರ್ ಕಾರ್ಯಕ್ರಮ ಸಂಯೋಜಕರಾಗಿ ಇಂಗ್ಲೀಷ್ ಆಧ್ಯಾಪಕ ಹರೀಶ್, ಸಂಗೀತ ಶಿಕ್ಷಕರ ಸುಧೀರ್, ಚಿತ್ರಕಲಾ ಶಿಕ್ಷಕರಾದ ಬಾಬುರಾವ್, ಕಾಂತ ಮುಂತಾದವರು ಶ್ರಮಿಸಿದ್ದಾರೆ.