ಮಡಿಕೇರಿಯಲ್ಲಿ ಮೊಳಗಿದ ರೈತರ ಕಹಳೆ
ವಿಜಯ ದರ್ಪಣ ನ್ಯೂಸ್….
ಮಡಿಕೇರಿಯಲ್ಲಿ ಮೊಳಗಿದ ರೈತರ ಕಹಳೆ
ಮಡಿಕೇರಿ: ಸಿ ಮತ್ತು ಡಿ ಜಮೀನು ಸಮಸ್ಯೆಗೆ ಪರಿಹಾರ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಗೆ ಪಕ್ಷಾತೀತ ಬೆಂಬಲ ವ್ಯಕ್ತವಾಯಿತು.
ಹಸಿರು ಶಾಲು ತೊಟ್ಟು ರಸ್ತೆಗಿಳಿದ ಸಾವಿರಾರು ಕೃಷಿಕರು ಪ್ರತಿಭಟನಾ ಮೆರವಣಿಗೆ, ಸಮಾವೇಶದ ಮೂಲಕ ತಮ್ಮ ಬೇಡಿಕೆಗಳನ್ನು ಸರಕಾರದ ಮುಂದಿಟ್ಟರು. ಮೂಲೆ ಮೂಲೆಯಿಂದ ಬಸ್, ಕಾರು ಸೇರಿದಂತೆ ನೂರಾರು ವಾಹನಗಳಲ್ಲಿ ಜಿಲ್ಲಾಕೇಂದ್ರಕ್ಕೆ ಆಗಮಿಸಿದ್ದ ರೈತರು, ಸಂಘಟನೆಗಳ ಪ್ರಮುಖರು ಸುದರ್ಶನ ವೃತ್ತದಲ್ಲಿ ಜಮಾಯಿಸಿದರು. ಅಲ್ಲಿಂದ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ಗಾಂಧಿ ಮೈದಾನದಲ್ಲಿ ಸಮಾವೇಶಗೊಂಡರು.
ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಬೇಡಿಕೆ ಈಡೇರಿಕೆಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಪಕ್ಷಾತೀತವಾಗಿ ರಾಜಕೀಯ ಮುಖಂಡರು, ಜನಪ್ರತಿನಿಗಳು, ನಾನಾ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದು ಹೋರಾಟಕ್ಕೆ ಮತ್ತಷ್ಟು ಬಲ ತುಂಬಿತು.
ರೈತರ ಪ್ರತಿಭಟನೆಯಿಂದಾಗಿ ಮಡಿಕೇರಿಯಲ್ಲಿ ಸಂತೆ ದಿನವಾದ ಶುಕ್ರವಾರ ನಾನಾ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತು ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸಾಮಾಜಿಕ ಕಾರ್ಯಕರ್ತ ಸುಧೀರ್ ಕುಮಾರ್ ಮುರೊಳ್ಳಿ ಗಾಂ ಮೈದಾನದಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, ‘‘ಕೊಡಗಿನಲ್ಲಿ ಐತಿಹಾಸಿಕ ಹೋರಾಟ ನಡೆಯುತ್ತಿದೆ. ಇದು ಕೊಡಗು, ಹಾಸನ, ಸಕಲೇಶಪುರ ಸಮಸ್ಯೆ ಮಾತ್ರವಲ್ಲ. 36 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಸಮಸ್ಯೆಯೆಂದು ನಾವು ಧ್ವನಿ ಎತ್ತಿದಾಗ ಸರಕಾರವನ್ನು ಎಚ್ಚರಿಸಲು ಸಾಧ್ಯವಾಗುತ್ತದೆ,’’ ಎಂದರು.
‘‘ಸಿ ಮತ್ತು ಡಿ ಲ್ಯಾಂಡ್ ಕೊಟ್ಟಿದ್ದು, ವಾಪಸ್ ಪಡೆದಿರುವುದು ಈಗ ಲೆಕ್ಕಕ್ಕೆ ಬರುವುದಿಲ್ಲ. ಅರಣ್ಯ ಕಾಯಿದೆಯ ಮೇಲೆ ಸೆಕ್ಷನ್ 4 ಘೋಷಣೆ ಮಾಡಿ ಸೆಟಲ್‌ಮೆಂಟ್ ಮಾಡುವುದರ ಮೇಲೆ ಗೊಂದಲ ಸೃಷ್ಟಿಯಾಗಿದೆ. ಸೆಕ್ಷನ್ 4 ಎಂದು ಘೋಷಣೆ ಮಾಡಿರುವುದು ತಪ್ಪಾಗಿದೆ. ಅದನ್ನು ವಾಪಸ್ ಪಡೆಯಬೇಕೆಂಬುದು ನಮ್ಮ ಧ್ವನಿ ಆಗಬೇಕು,’’ ಎಂದರು.
‘‘ನಾವು ಒತ್ತುವರಿದಾರರಲ್ಲ. ನಮ್ಮ ಕೃಷಿ ಭೂಮಿಗೆ ನೀವು ಒತ್ತುವರಿದಾರರಾಗಿ ಬರುತ್ತಿದ್ದೀರಿ ಎಂಬ ಸಂದೇಶವನ್ನು ನೀಡಬೇಕಿದೆ. ನಾವೆಲ್ಲರೂ ಒಟ್ಟಾಗಿದ್ದೇವೆ ಎಂಬ ಸಂದೇಶವನ್ನು ನೀಡುವ ಅವಶ್ಯಕತೆ ಇದೆ. ದೇವರಕಾಡು ಹೆಸರಿನಲ್ಲಿಅರಣ್ಯವನ್ನು ಉಳಿಸಿರುವುದು ನಾವು, ನೀವಲ್ಲಎಂಬ ಸಂದೇಶವನ್ನು ಕಾಂಕ್ರಿಟ್ ಪರಿಸರವಾದಿಗಳಿಗೆ ನೀಡುವ ಕೆಲಸ ಮಾಡಬೇಕು,’’ ಎಂದರು.
ಶಾಸಕ ಡಾ.ಮಂತರ್ ಗೌಡ ಮಾತನಾಡಿ, ‘‘ರಾಜಕೀಯ ಲಾಭ ಪಡೆದುಕೊಳ್ಳುವುದಕ್ಕಿಂತ ರೈತರ ಹಿತ ಕಾಪಾಡುವುದು ಮುಖ್ಯ. ಹೀಗಾಗಿ ಹೋರಾಟಕ್ಕೆ ನನ್ನ ಬೆಂಬಲವಿದೆ. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದ್ದು, ಜ.3 ಅಥವಾ 4ರಂದು ಜಂಟಿ ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕಂದಾಯ, ಅರಣ್ಯ ಸಚಿವರು ಸೇರಿದಂತೆ ಮಲೆನಾಡು ಭಾಗದ 36 ಶಾಸಕರನ್ನೊಳಗೊಂಡ ಸಭೆ ನಡೆಯಲಿದ್ದು, ಇಲ್ಲಿನ ಸಂಘಟನೆಗಳ ಮುಖಂಡರೂ ಭಾಗಿಯಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು,’’ ಎಂದು ಸಲಹೆ ನೀಡಿದರು.
ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಮಾತನಾಡಿ, ‘‘ಈ ದೇಶದ ಕಾನೂನು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲಎಂಬಂತೆ ವರ್ತಿಸುತ್ತಿದ್ದಾರೆ. ಏನೇ ಹೇಳಿದರೂ ಸುಪ್ರಿಂಕೋರ್ಟ್ ಆದೇಶ ಇದೆ. ಡೀಮ್ಡ್ ಫಾರೆಸ್ಟ್ ಎಂಬ ಉತ್ತರ ನೀಡುತ್ತಾರೆ. ಮತ್ತೊಂದೆಡೆ ಕಂದಾಯ ಇಲಾಖೆ ಅಕಾರಿಗಳು ಕೂಡ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದರಿಂದ ಸಮಸ್ಯೆಯುಂಟಾಗುತ್ತಿದೆ. ಅಕಾರಿಗಳು ತಾವು ಹೇಳಿದ್ದೇ ಕಾನೂನು ಎಂಬಂತೆ ವರ್ತಿಸುತ್ತಿದ್ದಾರೆ. ಅಕಾರಿಗಳು ಹೇಳಿದ್ದೇ ಕಾನೂನು ಎನ್ನುವುದಾದರೆ ಜನಪ್ರತಿನಿಗಳು ಯಾಕೆ ಬೇಕು,’’ ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಎಂ.ಪಿ ಅಪ್ಪಚ್ಚು ರಂಜನ್ ಮಾತನಾಡಿ, ‘‘ಗಾಡ್ಗೀಲ್, ಕಸ್ತೂರಿರಂಗನ್ ವರದಿ ಸಂಬಂಧ ಈಗಾಗಲೇ ಪಕ್ಷಾತೀತವಾಗಿ ಹೋರಾಟ ಮಾಡಿದ್ದೇವೆ. ಸಿ ಮತ್ತು ಡಿ ಎಂಬುದು ಪೈಸಾರಿ ಜಾಗ. ಲ್ಯಾಂಡ್ ಬ್ಯಾಂಕ್‌ನಿಂದ ಜಾಗವನ್ನು ನೆಡುತೋಪು ಬೆಳೆಸಲು ಅಂದಿನ ಸರಕಾರ ಅರಣ್ಯ ಇಲಾಖೆಗೆ ನೀಡಿತ್ತು. ಇದನ್ನು ಯಾವುದೇ ಸಂದರ್ಭದಲ್ಲಿ ವಾಪಸ್ ಪಡೆಯಬಹುದು ಎನ್ನುವ ನಿಬಂಧನೆಗಳನ್ನು ಹಾಕಲಾಗಿದೆ. ಇದನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ 2017 ರಲ್ಲಿ ಸಿ ಮತ್ತು ಡಿ ಲ್ಯಾಂಡ್‌ಗೆ ಹಕ್ಕುಪತ್ರ ನೀಡಬಹುದೆನ್ನುವ ಆದೇಶ ಕೂಡ ಆಗಿದೆ. 94ಸಿ, 94ಸಿಸಿ ಯಡಿ 500 ಕ್ಕೂ ಅಕ ಹಕ್ಕುಪತ್ರವನ್ನು ಈಗಾಗಲೇ ವಿತರಿಸಲಾಗಿದೆ. ಇದು ಕಂದಾಯ ಇಲಾಖೆ ಜಾಗವಾಗಿದ್ದು, ಅರಣ್ಯ ಮಂತ್ರಿಗಳು ಯಾಕೆ ಆದೇಶ ನೀಡುತ್ತಾರೆ,’’ ಎಂದು ಪ್ರಶ್ನಿಸಿದರು.