ಹಿತದಲ್ಲೂ ಅಹಿತವಿದೆ!
ವಿಜಯ ದರ್ಪಣ ನ್ಯೂಸ್….
ಹಿತದಲ್ಲೂ ಅಹಿತವಿದೆ!
ಚೆಂದದ ಬದುಕು ಕಟ್ಟಿಕೊಳ್ಳಲು ವ್ಯಾಯಾಮ. ನಿಯಮಿತ ಆಹಾರ: ಸೇವನೆ, ಸಮಯ ಪರಿಪಾಲನೆ, ಸದಾ ಲವಲವಿಕೆಯಿಂದಿರುವುದು ಇನ್ನೂ ಇತ್ಯಾದಿ. ಆದರೆ ನಮಗೆ ಈ ಮೇಲಿನ ಪಟ್ಟಿಯಲ್ಲಿ ಯಾವುದರಲ್ಲೂ : ಹಿತವಿಲ್ಲವೆನಿಸುತ್ತದೆ. ಎಚ್ಚರವಾದರೂ ಮತ್ತು ಮುಸುಕೆಳೆದು ಮಲಗುವುದರಲ್ಲಿ: ಹಿತವಿದೆ. ಓದು ಹಿತ ನೀಡದು ಮೊಬೈಲ್ ಹಿಡಿದು ಕುಳಿತುಕೊಳ್ಳುವಲ್ಲಿ ಅದೆಷ್ಟು : ಹಿತವಿದೆ. ಮನೆಯಲ್ಲಿಯ ಅಡುಗೆಗಿಂತ ಹೊರಗಿನ ಜಂಕ್ ಫುಡ್ ಬಾಯಲ್ಲಿ: ನೀರೂರಿಸುತ್ತದೆ. ಯಾವುದೇ ಕಾರ್ಯಕ್ರಮಕ್ಕೆ ಸಮಯಕ್ಕೆ ಸರಿಯಾಗಿ ಹೋಗುವುದರಲ್ಲಿ ಹಿತವಿಲ್ಲ. ನಾವು ಹಿತ ಅಂದುಕೊಂಡಿದ್ದರಲ್ಲಿ ಅಹಿತವಿದೆಯೆಂದು ಗೊತ್ತಿದ್ದೂ ಕಣ್ಣುಚ್ಚಿ : ಜೀವನ ನಡೆಸುತ್ತಿದ್ದೇವೆ. ಹಿತದಲ್ಲೂ ಅಹಿತವನ್ನು ಮುಚ್ಚಿಟ್ಟಿರುವ ಹಿತಶತ್ರುಗಳು ಸಾಕಷ್ಟಿವೆ. ಅವುಗಳಲ್ಲಿ ಕೆಲವು ಮುಖ್ಯವಾದುವುಗಳನ್ನು ನೋಡೋಣ ಬನ್ನಿ.
ತಪ್ಪು:
‘ಏನನ್ನೂ ಮಾಡದವನು ಮಾತ್ರ ಯಾವುದೇ ತಪ್ಪುಗಳನ್ನು ಮಾಡುವುದಿಲ್ಲ. ಆದರೆ ಅದೇ ದೊಡ್ಡ ತಪ್ಪು’ ‘ನಡೆಯುವವನು ಎಡುವುತ್ತಾನೆಯೇ ಹೊರತು ಕುಳಿತುಕೊಂಡವನಲ್ಲ. ಜಗದಲ್ಲಿ ತಪ್ಪು ಮಾಡದವರು ಯಾರೂ ಇಲ್ಲ. ತಪ್ಪು ಮಾಡಿ ಕಲಿತವರು ಸಾಧಕರಾಗಿದ್ದಾರೆ. ತಪ್ಪನ್ನು ಒಪ್ಪಿಕೊಳ್ಳದೇ ಮುಂದುವರೆಸಿದವರು ಹಿಂದಕ್ಕೆ ಬಿದ್ದಿದ್ದಾರೆ. ತಪ್ಪನ್ನು ಒಪ್ಪಿಕೊಂಡರೆ ಮರ್ಯಾದೆ ಹೋಗುತ್ತದೆ ಎನ್ನುವ ಧೋರಣೆ ತಪ್ಪು ತಪ್ಪನ್ನು ಒಪ್ಪಿಕೊಳ್ಳದಿರಲ್ಲಿ ನಿಜಕ್ಕೂ ಹಿತ ನೀಡುತ್ತದೆ. ಆರಿವಿಲ್ಲದೇ ಮಾಡುವುದು ತಪ್ಪು ತಪ್ಪನ್ನು ತಿದ್ದಿಕೊಳ್ಳದಿರುವುದು ಉದ್ದಟತನ ತಪ್ಪನ್ನು ಮನ್ನಿಸಬಹುದು ಹೊರತು ಉದ್ದಟತನವನ್ನೆಲ್ಲ. ಬೇರೆಯವರು ತಪ್ಪು ಮಾಡಿದರೆ ಗುರುತಿಸುವುದು ಸುಲಭ. ನಾವೇ ತಪ್ಪು ಮಾಡಿದರೆ ಸ್ವೀಕರಿಸುವುದು ಕಷ್ಟ, ತಪ್ಪನ್ನು ತಿದ್ದಿಕೊಂಡರೆ ಪ್ರಗತಿಯತ್ತ ಸಾಗುತ್ತೇವೆ. ಮಾಡಿದ ತಪ್ಪು ಒಪ್ಪುಗಳ ಬಗ್ಗೆ: ಕೂಲಂಕಷವಾಗಿ ಪರಿಶೀಲಿಸಿ ಮುನ್ನಡೆಯಬೇಕು. ನಡೆದು ಬಂದ ದಾರಿಯನ್ನು ಮತ್ತೊಮ್ಮೆ ಅವಲೋಕನ ಮಾಡುವುದನ್ನು ಸಿಂಹದಿಂದ ಕಲಿಯಬೇಕು. ಅದು: ಪಯಣಿಸುವಾಗ ಸ್ವಲ್ಪ ದೂರ ನಡೆದ ಮೇಲೆ ಹಿಂತಿರುಗಿ ತಾನು ನಡೆದ ಬಂದ ದಾರಿಯನ್ನು ನೋಡಿ ಮುಂದೆ ಸಾಗುತ್ತದೆ. ಹಾಗೆ ಆತ್ಮಾವಲೋಕನ ಮಾಡಿಕೊಂಡಾಗ ಮುಂದಿನ ದಾರಿ ಸ್ಪಷ್ಟವಾಗುತ್ತದೆ. ನೀವು ತಪ್ಪು ಮಾಡಿದ ಮಾತ್ರಕ್ಕೆ ತಪ್ಪು ಎಂದರ್ಥವಲ್ಲ.’ ಎಂದು ಹೇಳಿದ್ದಾರೆ ಜಾರ್ಜೆಟ್ ಮೊಸ್ಟಾಕರ್. ತಪ್ಪು ಅತ್ಯುತ್ತಮ ಶಿಕ್ಷಕ. ತಪ್ಪಿನಿಂದ ಪಾಠ ಕಲಿತು ಮುನ್ನಡೆಯಬೇಕು.
ಆಲಸ್ಯತನ :
“ಆಲಸ್ಯಕ್ಕಿಂತ ದೊಡ್ಡ ಶತ್ರುವಿಲ್ಲ, ಉದ್ಯೋಗಕ್ಕಿಂತ ದೊಡ್ಡ ಬಂಧುವಿಲ್ಲ” ಎಂಬ ” ಮಾತು ಸರ್ವವೇದ್ಯ. ಕೆಲಸ ಮಾಡುವ ಸಾಮರ್ಥ್ಯವಿದ್ದರೂ ಕೆಲಸದ ಬಗ್ಗೆ ಇರುವ, ನಿರಾಸಕ್ತಿಯೇ ಆಲಸ್ಯತನ, ಆಲಸ್ಯತನ ಆವರಿಸಿದಾಗ ದೇಹಕ್ಕೆ ಹಿತವೆನಿಸುತ್ತದೆ. ಆದ್ದರಿಂದ ಇದು ಹಿತಶತ್ತು. ಇದೊಂದು ತರಹ ಬೆಳೆಯನ್ನು ಬೆಳೆಯಲು ಬಿಡದ ಕಳೆಯಂತೆ. ಗೊತ್ತಾಗದಂತೆ ದಿನದಿಂದ ದಿನಕ್ಕೆ ಹೆಚ್ಚುತ್ತ ಹೋಗುತ್ತದೆ. ಅದರ ವಿಷ ವರ್ತುಲದಲ್ಲಿ ಸಿಲುಕಿದರೆ ಸಾಕು ಹೊರ ಬರಲು ಮನಸ್ಸಾಗುವುದೇ ಇಲ್ಲ. ಇದು ಸಿಹಿಯಾದ ವಿಷದಂತೆ ದಿನವೂ ಸ್ವಲ್ಪ ಸ್ವಲ್ಪ ಕೊಲ್ಲುತ್ತ ಹೋಗುತ್ತದೆ. ಸೋಮಾರಿತನದ ಅದ್ಭುತವೆಂದರೆ, ನಮ್ಮಿಂದ ಸಾಧ್ಯವಾದುದನ್ನು ಅಸಾಧ್ಯವಾಗಿಸುತ್ತದೆ. ಮಾಡಬೇಕಾದ ಕೆಲಸ ಕಾರ್ಯಗಳತ್ತ ಮುಖ ಮಾಡದೆ
ಇಂದಾಗುವ ಕೆಲಸವನ್ನು ನಾಳೆಗೆ ಮುಂದೂಡಿಸುತ್ತದೆ. ಥಾಮಸ್ ಅಲ್ವಾ ಎಡಿಸನ್‌ರವರ ಸಾವಿರಾರು ಅನ್ವೇಷಣೆಗಳಿಗೆ ಮುಖ್ಯ ಕಾರಣ ಅವರು ಸೋಮಾರಿತನವನ್ನು ಎಂದೂ ತನ್ನ ದಿನಚರಿಯನ್ನು ಅವರಿಸಲು ಬಿಡಲಿಲ್ಲ
ಸಮಯ :
‘ಕಳೆದು ಹೋದ ಸಮಯವೆಂದರೆ ಹರಿಯುತ್ತಿರುವ ನದಿಯ ನೀರಿನಂತೆ ಅದೇ ನೀರು ಮತ್ತೆ ಸಿಗಲಾರದು.’ ಅಂತೆಯೇ ಅದೇ ಸಮಯ ಮತ್ತೆ ಸಿಗಲಾರದು. ಆದ್ದರಿಂದ ಕೈಯಲ್ಲಿರುವ ಕ್ಷಣಗಳನ್ನು ವ್ಯರ್ಥ ಮಾಡಿಕೊಳ್ಳಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಮುಖ ಹುದುಗಿಸಿ ಕುಳಿತರೆ ಸಮಯ ಸರಿದಿದ್ದೇ ಗೊತ್ತಾಗುವುದಿಲ್ಲ. ಮೊಬೈಲಿನ ಮುಖದ ಮೇಲೆ ಬೆರಳಾಡಿಸುವುದು ಹಿತವೆನಿಸುತ್ತದೆ, ಆದರೆ, ಅದು ಸಮಯವನ್ನು ತಿಂದು ಹಾಕುತ್ತದೆ. ನಿರ್ದಿಷ್ಟ ಉದ್ದೇಶಕ್ಕಾಗಿ ಮಾತ್ರ ಸಮಯ ವಿನಿಯೋಗಿಸಬೇಕು. ಯಾವುದೇ ಕೆಲಸ ಮಾಡುವಾಗ ಇದು ನನ್ನ ಗುರಿಗೆ ಪೂರಕವಾಗಿದೆಯೋ ಇಲ್ಲವೋ ಎಂದು ಪ್ರಶ್ನಿಸಿಕೊಳ್ಳುತ್ತಿರಬೇಕು. ಇದು ಪರಿಣಾಮಕಾರಿ’ ಬದಲಾವಣೆ ತರಬಲ್ಲದು. ನಾವು ಸಮಯ ಸದುಪಯೋಗದ ಬಗ್ಗೆ ಆಳವಾಗಿ ಗಮನ ಹರಿಸುವುದೇ ಕಡಿಮೆ. ಸಮಯದ ಮೌಲ್ಯ ಅರಿತಾಗ ಸೂಕ್ಷ್ಮತೆ ಅರ್ಥವಾಗುವುದು. ದೊಡ್ಡ ಪಾತ್ರೆಯಲ್ಲಿರುವ ಹಾಲಿಗೆ ಹನಿ ಹುಳಿ ಹಿಂಡಿದರೂ ಸಾಕು, ಅದು ಕೆಡುವುದು ಹಾಗೆಯೇ ದಿನದ ಇಪ್ಪತ್ನಾಲ್ಕು ತಾಸಿನಲ್ಲಿ ಕೆಲ ಗಂಟೆಗಳನ್ನು ವ್ಯರ್ಥ ಮಾಡಿದರೂ ‘ಕಾರ್ಯಕ್ಷಮತೆ ಕ್ಷೀಣಿಸುತ್ತದೆ. ಅದಕ್ಕಾಗಿ ಅದನ್ನು ವ್ಯರ್ಥ ಮಾಡದೇ ಅರ್ಥಪೂರ್ಣವಾಗಿ ಉಪಯೋಗಿಸಬೇಕು.
ಕನಸು
ನಾವು ಕನಸು ಕಾಣುವುದರಲ್ಲಿ ಹಿಂದೆ ಬಿದ್ದಿಲ್ಲ. ಎಷ್ಟೋ ಸಲ ಹಗಲುಗನಸು ಕಾಣುವುದು ಹಿತ ನೀಡುತ್ತದೆ. ಕನಸೆಂದರೆ ಹರುಷದ ಸ್ಥಿತಿ. ಪ್ರೇರಣೆಗೊಳಿಸುವ ಸಂಗತಿಗಳಲ್ಲಿ ಕನಸು ಅಗ್ರಪಂಕ್ತಿಯದು.. ‘ಒಂದು ಹೆಜ್ಜೆಯ ಆರಂಭ ನೂರಾರು ಮೈಲಿ ಕರೆದೊಯ್ದಂತೆ ಕನಸು ಯಶಸ್ಸಿನ ತುತ್ತ ತುದಿಗೆ ನಿಲ್ಲಿಸುತ್ತದೆ.’ ಕಟ್ಟಿಕೊಂಡ ಹೊಂಗನಸು ಅದೆಷ್ಟು ಸುಂದರವೆಂದು ಬೆರಗುಗೊಳ್ಳುತ್ತೇವೆ. ಕನಸನ್ನು ನನಸಾಗಿಸಲು ಮೊದಲ ಹೆಜ್ಜೆ ಇಡುವುದು ಮುಖ್ಯ ಆರಂಭದಲ್ಲಿ ಬಣ್ಣದ ಕನಸುಗಳತ್ತ ಹುರುಪು ತೋರಿಸುತ್ತೇವೆ. ಕ್ರಮೇಣ ನಿರುತ್ಸಾಹ ಸಣ್ಣಗೆ ಹೆಜ್ಜೆಯಿಡುತ್ತ ಮನದಲ್ಲಿ ಮನೆ ಮಾಡುತ್ತದೆ. ನರಿ ಕೈಗೆಟುಕದ ದ್ರಾಕ್ಷಿಗೆ, ಹುಳಿ ಎಂದಂತೆ. ಆ ಕನಸು ನನಗೆ ಸರಿಯಾದುದಲ್ಲ ಎಂದು ನಿರ್ಧರಿಸುತ್ತವೆ. ಮನಸ್ಸು ಕೆಲ ಕಾಲ ಮುದುಡುತ್ತದೆ. ಕಂಗಳು ಮತ್ತೆ ಹೊಸ ಕನಸನ್ನು ಕಾಣುತ್ತದೆ. ಅದರ ಸ್ಥಿತಿಯೂ ಮೊದಲಿನ ಕನಸುಗಳಂತೆಯೇ ಆಗಿ ಬಿಡುತ್ತದೆ. ಕನಸುಗಳನ್ನು ಹಿಂಬಾಲಿಸುವ ನಿಟ್ಟಿನಲ್ಲಿ ತುಡಿತವಿರಬೇಕು. ಕನಸಿನಿಂದಲೇ ಜ್ಞಾನ, ವಿಜ್ಞಾನ, ತಂತ್ರಜ್ಞಾನದಲ್ಲಿ ಮುಗಿಲೆತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂಬುದನ್ನು ಮರೆಯುವಂತಿಲ್ಲ. ಕೊನೆ ಹನಿ ಗುರಿಯ ಬಗ್ಗೆ ಸ್ಪಷ್ಟತೆ ಇಲ್ಲದೆ ದಿನಗಳೆಯುವುದು ಹಿತ, ಗುರಿಯಿಲ್ಲದೇ ನಿರೀಕ್ಷಿತ ಫಲಿತಾಂಶಗಳನ್ನು ಪಡೆಯಲು ಸಾಧ್ಯವಿಲ್ಲ. ಗುರಿಯಿಲ್ಲದ ಬಾಳು ಬಾಲಂಗೋಚಿಯಿಲ್ಲದ ಪಟದಂತೆ ಹಾರಲಾಗುವುದಿಲ್ಲ. ದುರ್ಜನರ ಸಂಗ ಕೆಸರಿನಲ್ಲಿ ಕಾಲಿಟ್ಟಂತೆ. ‘ಬಲ್ಲವರೊಡನೆ ಸಂಗವ ಮಾಡಿದಡೆ ಮೊಸರು ಕಡೆದು ಬೆಣ್ಣೆ ತೆಗೆದುಕೊಂಬಂತೆ’ ಎನ್ನುವ ಅಕ್ಕನ ನುಡಿಗಳಂತೆ ಉತ್ತಮರೊಡನೆ ಸ್ನೇಹ ಬೆಳೆಸಬೇಕು. ಹಿತಶತ್ರುಗಳ ಬಗ್ಗೆ ಎಚ್ಚರವಹಿಸಿದರೆ ನಿಜವಾದ ಹಿತವೆಂಬ ತುಂತುರು ಮಳೆ ಖಚಿತ.
ಜಯಶ್ರೀ ಜೆ. ಅಬ್ಬಿಗೇರಿ. ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ, 9449234142