ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನಕ್ಕೆ ಸಹಕಾರ: ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ
ವಿಜಯ ದರ್ಪಣ ನ್ಯೂಸ್….
ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಗೆ ಪಟ್ಟಾಧಿಕಾರ
ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನಕ್ಕೆ ಸಹಕಾರ: ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ
ವಿಶ್ವ ಒಕ್ಕಲಿಗರ ಮಠ ಹಾಗೂ ಆದಿಚುಂಚನಗಿರಿ ಮಠ ಎರಡು ಒಂದೇ. ನಾಥ ಪರಂಪರೆ ಮೂಲಕ ನಾವೆಲ್ಲರೂ ಸಮಾಜ ಸೇವೆಯಲ್ಲಿ ತೊಡಗಿದ್ದೇವೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.
ಕೆಂಗೇರಿ ರಸ್ತೆಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದಲ್ಲಿ ಭಾನುವಾರ ಆಯೋಜಿಸಿದ್ದ ‘ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಗೆ ನೂತನ ಪಟ್ಟಾಧಿಕಾರ ಮಹೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಮಠಕ್ಕೆ ಆದಿಚುಂಚನಗಿರಿ ಮಠದ ಸಹಕಾರ ಹಿಂದೆಯೂ ಇತ್ತು, ಮುಂದೆಯೂ ಇರುತ್ತದೆ. ನೂತನ ಗುರುಗಳು ನಮ್ಮ ಮಠದಲ್ಲಿ ಬೆಳೆದಿದ್ದವರು. ಅವರಿಗೆ ಸದಾ ಪ್ರೋತ್ಸಾಹ ಇರಲಿದೆ. ಗುರು ಪರಂಪರೆ ಮತ್ತು ಸಂಪ್ರದಾಯ ಒಂದೇ ಇರುವುದರಿಂದ ಮೂರನೇ ವ್ಯಕ್ತಿ ಬರಲ್ಲ. 1974ರಿಂದ ಹಿರಿಯ ಶ್ರೀಗಳ ನೇತೃತ್ವದಲ್ಲಿ ವಿಶ್ವ ಒಕ್ಕಲಿಗರ ಮಠ ನಡೆಯುತ್ತಿದೆ. ಇದು ಹಳೆಯ ಮಠವಾಗಿದೆ. ನೂತನ ಉತ್ತರಾಧಿಕಾರಿಯಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಮಠವನ್ನು ಇನ್ನಷ್ಟು ಬೆಳೆಸಲು ಸಂಕಲ್ಪ ತೊಟ್ಟಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ನೂತನ ಸ್ವಾಮೀಜಿಗೆ ರುದ್ರಾಕ್ಷಿ ಮುಕುಟಧಾರಣೆ ನೆರವೇರಿಸಲಾಯಿತು. ಆರೋ ಹಣ ಪುಸ್ತಕ ಲೋಕಾರ್ಪಣೆ ಮಾಡಲಾಯಿತು. ಇದಕ್ಕೂ ಮುನ್ನ ಗಂಗೆಪೂಜೆ, ಶಿವಪಾರ್ವತಿ, ಗಣಪತಿ ಪೂಜೆ ನೆರವೇರಿತು. ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಶ್ರೀ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಸ್ಥಟಿಕಪುರಿ ಮಠದ ಶ್ರೀ ಶ್ರೀ ಶ್ರೀ ನಂಜಾವಧೂತ ಸ್ವಾಮೀಜಿ. ವಿಜಯನಗರ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ಸೇರಿ 50ಕ್ಕೂ ಅಧಿಕ ಸ್ವಾಮೀಜಿಗಳು ಉಪಸ್ಥಿತರಿದ್ದರು.
ಸಿದ್ಧಗಂಗಾ ಮಠ, ಬೇಲಿ ಮಠ ಸೇರಿ ರಾಜ್ಯದ 50ಕ್ಕೂ ಅಧಿಕ ಮಠದ ಶ್ರೀಗಳು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಕ್ಕೆ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರನ್ನು ನೂತನ ಉತ್ತಾಧಿಕಾರಿಯಾಗಿ ನೆರವೇರಿಸಿರುವುದು ಚಾರಿತ್ರಿಕವಾದದ್ದು. ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಮೌನತಪಸ್ವಿ. ಹಿರಿಯ ಗುರುಗಳ ಸೇವೆಯನ್ನು ಈ ಸಮಾಜ ಬಳಸಿಕೊಂಡಿದೆ ಎಂದು ಶ್ರೀ ನಿಡುಮಾಮಿಡಿ ಮಠದ ಪೀಠಾಧ್ಯಕ್ಷ ಶ್ರೀ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದರು. ಅಧಿಕಾರ ವರ್ಗದಲ್ಲಿ ಸನ್ಯಾಸತ್ವ ಸ್ವೀಕರಿಸುವುದು ವಿರಾಳ. ಇಂತಹ ಸಂದರ್ಭದಲ್ಲಿ ನಾಗರಾಜು ಸನ್ಯಾಸತ್ವ ಸ್ವೀಕರಿಸಿ ಗುರು ಸ್ಥಾನ ಪಡೆದಿರುವುದು ವಿಶೇಷವಾದದ್ದು. ಪ್ರಾಮಾಣಿಕ, ಬದ್ಧತೆಯಿಂದ ಕಿರಿಯ ಶ್ರೀಗಳು ಮಠವನ್ನು ಇನ್ನಷ್ಟು ಬೆಳೆಸುವಂತಾಗಬೇಕು ಎಂದು ಆಶಿಸಿದರು.