ಹನುಮಜಯಂತಿಯಂದೇ ಕಳ್ಳರ ಕೈಚಳಕ : ಆಂಜನೇಯಸ್ವಾಮಿ ದೇಗುಲಕ್ಕೆ ಕನ್ನ

ವಿಜಯ ದರ್ಪಣ ನ್ಯೂಸ್….

ಜಿಂಕೆಬಚ್ಚಹಳ್ಳಿಯಲ್ಲಿ ಹನುಮಜಯಂತಿಯಂದೇ ಕಳ್ಳರ ಕೈಚಳಕ :ಆಂಜನೇಯಸ್ವಾಮಿ ದೇಗುಲಕ್ಕೆ ಕನ್ನ

ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆ: ಜಿಂಕೆ ಬಚ್ಚಹಳ್ಳಿಯ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಆಚರಿಸಿದ ರಾತ್ರಿಯಿಡಿ ಹೊಂಚು ಹಾಕಿ ಬೆಳಗಿನ ಜಾವದಲ್ಲಿ ಕಾಣಿಕೆ ಹುಂಡಿ ಒಡೆದು ಹಣ ಕಳವು ಮಾಡಲಾಗಿದೆ.

ದೇವಾಲಯದಲ್ಲಿ ಶುಕ್ರವಾರ ಹನುಮ ಜಯಂತಿ ಆಚರಿಸಲಾಗಿತ್ತು. ಮಧ್ಯರಾತ್ರಿವರೆಗೂ ಪೂಜೆ ಕಾರ್ಯಗಳು ನಡೆದಿದ್ದು, ಶನಿವಾರ ಬೆಳಗ್ಗೆ ಹುಂಡಿ ಕಳವಾಗಿರುವುದು ಗೊತ್ತಾಗಿದೆ.

ಹುಂಡಿ ಒಡೆದಿರುವ ಕಳ್ಳರು ಹಣ
ಹಾಗೂ ಸಿಸಿ ಟಿವಿ ಕ್ಯಾಮರಾದ ಡಿವಿಆರ್‌ಗಳ ಸಮೇತ ಪರಾರಿಯಾಗಿದ್ದಾರೆ. ಹುಂಡಿಯಲ್ಲಿ ಸುಮಾರು ಒಂದೂವರೆ ವರ್ಷದಿಂದ ಭಕ್ತರ ಕಾಣಿಕೆ ಹಣವಿತ್ತು. ಕಳ್ಳರು ಕೇವಲ ಹುಂಡಿ ಹಣವನ್ನು ಮಾತ್ರ ಕದ್ದಿದ್ದಾರೆ. ಆದರೆ, ದೇವರ ವಿಗ್ರಹದ ಸಮೀಪವಿದ್ದ ಚಿನ್ನಾಭರಣ, ಬೆಳ್ಳಿ ಆಭರಣಗಳನ್ನು ಬಿಟ್ಟಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ ಎಂದು ಮುಖಂಡ ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.