ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಂ ಸಿ ಸುನೀಲ್ ಕುಮಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ವಿಜಯ ದರ್ಪಣ ನ್ಯೂಸ್…
ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಂ ಸಿ ಸುನೀಲ್ ಕುಮಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ಬೆಂಗಳೂರು ನಗರ ಸೇರಿ ಆರು ಜಿಲ್ಲೆಗಳಲ್ಲಿ ಭ್ರಷ್ಟಾಚಾರ ಆರೋಪದಡಿ 10 ಸರಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳ್ಳಂ ಬೆಳಗ್ಗೆ ದಾಳಿ ನಡೆಸಿದ್ದಾರೆ .ಈ ವೇಳೆ ಕೋಟ್ಯಾಂತರ ಮೌಲ್ಯದ ಅಕ್ರಮ ಸಂಪತ್ತು ಪತ್ತೆಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿ ಡಾ . ಎಂ ಸಿ ಸುನೀಲ್‌ಕುಮಾರ್ ಮನೆ ಹಾಗೂ ಕಚೇರಿ ಮೇಲೆ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲಿಸಿದರು. ಡಾ . ಎಂ ಸಿ ಸುನೀಲ್ ಕುಮಾರ್ ವಾಸ್ತವ್ಯವಿರುವ ಬೆಂಗಳೂರಿನ ಬಸವೇಶ್ವರ ನಗರದಲ್ಲಿನ ನಿವಾಸದ ಮೇಲೆ ಬೆಳಗ್ಗೆ 6 ಗಂಟೆ ಸುಮಾರಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಆರಂಭಿಸಿದರು.
ಎಂಟು ಅಧಿಕಾರಿಗಳ ತಂಡ ಮುಂಜಾನೆಯೇ ಡಿಎಚ್‌ಒ ಮನೆಯಲ್ಲಿನ ಕಡತಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು. ಇದೇ ವೇಳೆ ದೇವನಹಳ್ಳಿಯ ಜಿಲ್ಲಾಡಳಿತಭವನದಲ್ಲಿನ ಡಿಎಚ್‌ಒ ಕಚೇರಿಯಲ್ಲೂ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ .
ಮುಂಜಾನೆ ದಿಡೀರ್ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಸುಮಾರು 2 ಗಂಟೆ ಕಾಲ ಡಿಎಚ್ಓ ಮನೆ ಪ್ರವೇಶಿಸಲು ತಡವಾಯಿತು ಎನ್ನಲಾಗಿದೆ . ಅಧಿಕಾರಿಗಳು ಬಾಗಿಲು ಬಡಿದರೂ ಒಳಗಡೆಯಿಂದ ಯಾರು ಬಾಗಿಲು ತೆರೆಯಲಿಲ್ಲ .ಕಡೆಗೆ ಡಾ.ಎಂ ಸಿ ಸುನಿಲ್ ಕುಮಾರ್ ಅವರೇ ಬಾಗಿಲು ತೆರೆದರು ಎನ್ನಲಾಗಿದೆ. ಮಧ್ಯಾಹ್ನದವರೆಗೂ ಮನೆಯಲ್ಲಿ ಬೀಡುಬಿಟ್ಟು ಅಧಿಕಾರಿಗಳು ದಾಖಲೆಗಳನ್ನು ವಶಕ್ಕೆ ಪಡೆದು ಡಿಎಚ್ಓ ಅವರಿಂದ ಸಂಬಂಧಿಸಿದ ದಾಖಲೆಗಳ ಕುರಿತು ವಿಚಾರಣೆ ನಡೆಸಿದ್ದಾರೆ.
ಪತ್ತೆಯಾದ ಆಸ್ತಿ : ಒಂದು ಸೈಟ್, ಮೂರು ವಾಸದ ಮನೆ, ₹ 5.17 ಮೌಲ್ಯದ ಸ್ಥಿರಾಸ್ತಿ, ಎರಡು ಲಕ್ಷ ರೂ ನಗದು, ₹ 30 ಲಕ್ಷ ರೂ ಬೆಲೆ ಬಾಳುವ ಚಿನ್ನಾಭರಣ , ₹ 54 . 50 ಲಕ್ಷ ಬೆಲೆಯ ವಾಹನಗಳು ,ಬ್ಯಾಂಕ್ ನಲ್ಲಿ ₹ 60 ಲಕ್ಷ ರೂ ಸೇರಿ ₹ 6.63 ಕೋಟಿ ರೂ ಆಸ್ತಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಅಪಾರ ಪ್ರಮಾಣದ ಆಸ್ತಿ ಪತ್ತೆ ಮಾಡಿದ್ದಾರೆ.