ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಗಂಗಾಧರಪ್ಪ ಅಭೂತಪೂರ್ವ ಗೆಲುವು
ವಿಜಯ ದರ್ಪಣ ನ್ಯೂಸ್….
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಗಂಗಾಧರಪ್ಪ ಅಭೂತಪೂರ್ವ ಗೆಲುವು
ದೇವನಹಳ್ಳಿ , ಡಿಸೆಂಬರ್ 04: ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ, ಜಿಲ್ಲಾ ಖಜಾಂಚಿ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷರಾಗಿ ಪಿ .ಗಂಗಾಧರಪ್ಪ 49 ಮತಗಳು, ಜಿಲ್ಲಾ ಖಜಾಂಚಿಯಾಗಿ ಉಮಾಶಂಕರ್ ಎಂ.53 ಮತಗಳು ರಾಜ್ಯಪರಿಷತ್ ಸದಸ್ಯರಾಗಿ ನಾರಾಯಣಗೌಡ 50 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ರಾಜು ಸಭಾಸ್ಟಿಯನ್ ಘೋಷಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಗಂಗಾಧರಪ್ಪ ಮಾತನಾಡಿ
ಎಲ್ಲಾ ಇಲಾಖೆಯ ನಿರ್ದೇಶಕರ ಸಹಕಾರದಿಂದ ಈ ಅಭೂತಪೂರ್ವ ಗೆಲವು ಸಾಧಿಸಲು ಸಾಧ್ಯವಾಯಿತು,ನಮ್ಮ ಸರ್ಕಾರಿ ನೌಕರರು ಹಿತ ಕಾಪಾಡಲು ಮತ್ತು ಆಶೋತ್ತರಗಳನ್ನು ಈಡೇರಿಸಲು ಸದಾ ಸಿದ್ಧ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ನಗರಕ್ಕೆ ಹೊಂದಿಕೊಂಡಿರುವ ಕಾರಣ ಎಚ್ ಆರ್ ಐ ಮತ್ತು ಸಿ ಸಿ ಗ್ರಾಮಾಂತರ ಜಿಲ್ಲೆಗೂ ವಿಸ್ತರಿಸಬೇಕು, ಓಪಿಎಸ್ ಮರುಸ್ಥಾಪನೆ,ಆರೋಗ್ಯ ಸಂಜೀವಿನಿ ಯೋಜನೆಗಳನ್ನು ಜಾರಿಗೆ ತರುವಂತೆ ಒತ್ತಾಯಿಸಲಾಗುವುದು ಪ್ರಮುಖ ಮೂರು ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಂಘದ ಅಭಿವೃದ್ಧಿಯನ್ನು ಮುಂದುವರಿಸಲಾಗುವುದು
ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ಇಲಾಖೆಯ ನಿರ್ದೇಶಕರುಗಳು ಎಷ್ಟೇ ಅಡೆತಡೆ ಬಂದರೂ ಹಗಲು ರಾತ್ರಿ ನನ್ನೂಂದಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಹಾಗೂ ಈ ಗೆಲುವನ್ನು ನಮ್ಮ ಎಲ್ಲಾ ಸರ್ಕಾರಿ ನೌಕರರಿಗೆ ಅರ್ಪಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ದೇವನಹಳ್ಳಿ ತಾಲೂಕು ತಹಸೀಲ್ದಾರ್ ಎಚ್ .ಬಾಲಕೃಷ್ಣ, ನಿವೃತ್ತ ತಹಸೀಲ್ದಾರ್ ವಿಜಯ್ ಕುಮಾರ್, ಜಿಲ್ಲಾ ನಿರ್ದೇಶಕರಾದ ಆದರ್ಶ್, ನಾಗೇಶ್, ಮಂಜುನಾಥ್,ಶಾರದಾ ಗಂಗಾಧರಪ್ಪ,ಪುರಸಭಾ ಸದಸ್ಯ ಮುನಿಕೃಷ್ಣ,ಹನುಮಂತರಾಯಪ್ಪ,ಸುದೀಪ್,ಸಂತೋಷ್, ಅಬಕಾರಿ ಇನ್ಸ್ಪೆಕ್ಟರ್ ಸುನೀಲ್ ,ಮಣಿ, ಜಯರಾಮ್, ಗೀತಾ, ದಿಲೀಪ್ ಕುಮಾರ್ ,ಚೇತನ್ ,ಚೈತ್ರಾ ,ನಿವೃತ್ತ ಶಿಕ್ಷಕ ಶಿವರಾಮಯ್ಯ ಸೇರಿದಂತೆ ಹಲವಾರು ನಾಮ ನಿರ್ದೇಶಕರು ಹಾಗೂ ಸರ್ಕಾರಿ ನೌಕರರು ಉಪಸ್ಥಿತರಿದ್ದರು.