ಎಚ್‌ಜಿಎಚ್‌ ಇಂಡಿಯಾದ 16ನೇ ಆವೃತ್ತಿ – ಬೆಂಗಳೂರಿನಲ್ಲಿ ಉದ್ಘಾಟನೆ

ವಿಜಯ ದರ್ಪಣ ನ್ಯೂಸ್….

ಎಚ್‌ಜಿಎಚ್‌ ಇಂಡಿಯಾದ 16ನೇ ಆವೃತ್ತಿ – ಬೆಂಗಳೂರಿನಲ್ಲಿ ಉದ್ಘಾಟನೆ

· ಇದರೊಂದಿಗೆ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ದ್ವೈವಾರ್ಷಿಕ ವ್ಯಾಪಾರ ಮೇಳ ವಿಸ್ತರಣೆ
· ಎಚ್‌ಜಿಎಚ್ ಇಂಡಿಯಾ 2024 ಡಿಸೆಂಬರ್ 3 ರಿಂದ 6 ವರೆಗೆ ಬಿಐಇಸಿಯಲ್ಲಿ ನಡೆಯುತ್ತಿದೆ

ಬೆಂಗಳೂರು, 3 ಡಿಸೆಂಬರ್ 2024:
ಮನೆ ಬಟ್ಟೆಗಳು, ಮನೆ ಅಲಂಕಾರ, ಮನೆ ಪೀಠೋಪಕರಣ, ಹೌಸ್‌ವೇರ್ ಮತ್ತು ಉಡುಗೊರೆಗಳ ಪ್ರಮುಖ ಟ್ರೇಡ್‌ ಶೋ ಆಗಿರುವ ಎಚ್‌ಜಿಎಚ್‌ ಇಂಡಿಯಾ ತನ್ನ 16ನೇ ಆವೃತ್ತಿಯಲ್ಲಿ ಭಾರತ ಮತ್ತು ಇತರ ದೇಶಗಳ 225 ಉತ್ಪಾದಕರು ಮತ್ತು ಬ್ರ್ಯಾಂಡ್‌ಗಳ ಹಲವು ಅನ್ವೇಷಣೆಗಳನ್ನು ಅನಾವರಣಗೊಳಿಸಿದೆ. ಹಲವು ಪ್ರಥಮ ಬಾರಿಯ ಪ್ರದರ್ಶನಕಾರರು ಇಲ್ಲಿ ಇದ್ದು, ಬೆಂಗಳೂರು ಇಂಟರ್‌ನ್ಯಾಷನಲ್ ಎಕ್ಸಿಬಿಶನ್ ಸೆಂಟರ್ (ಬಿಐಇಸಿ) ಯಲ್ಲಿ ಎಚ್‌ಜಿಎಚ್‌ ಇಂಡಿಯಾ ನಡೆಯಲಿದೆ. 2024 ಡಿಸೆಂಬರ್ 3 ರಿಂದ 6 ರ ವರೆಗೆ ಇದು ನಡೆಯುತ್ತಿದ್ದು, ವಿವಿಧ ಮನೆ ಬಟ್ಟೆಗಳು, ಪೀಠೋಪಕರಣಗಳು, ಮನೆ ಅಲಂಕಾರ, ಮನೆ ಪೀಠೋಪಕರಣ, ಹೌಸ್‌ವೇರ್ ಮತ್ತು ಉಡುಗೊರೆಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಅಲ್ಲದೆ, ಪ್ರಮುಖ ಬ್ರ್ಯಾಂಡ್‌ಗಳು, ಉತ್ಪಾದಕರು ಮತ್ತು ಆಮದುದಾರರು ಕೂಡಾ ಇದರಲ್ಲಿ ಭಾಗವಹಿಸುತ್ತಿದ್ದಾರೆ. ಟ್ರೇಡ್ ಶೋ ಅನ್ನು ಜನಪ್ರಿಯ ಗಣ್ಯರು ಉದ್ಘಾಟನೆ ಮಾಡಿದ್ದಾರೆ. ಮಣಿಪಾಲ್ ಗ್ರೂಪ್‌ನ ಟಿ ಸುಧಾಕರ ಪೈ, ಶಾರದಾ ಟೆರಿ ಪ್ರಾಡಕ್ಟ್ ಪ್ರೈ. ಲಿ. ಚೇರ್ಮನ್ ಜಿ ಕಣ್ಣಪ್ಪನ್, ಬರ್ಗ್ನರ್ ಇಂಪೆಕ್ಸ್ (ಇಂಡಿಯಾ) ಪ್ರೈ. ಲಿ. ನಿರ್ದೇಶಕ ಉಮೇಶ್ ಗುಪ್ತಾ, ಅಮೆಜಾನ್ ಇಂಡಿಯಾದ ಮನೆ, ಅಡುಗೆಮನೆ ಮತ್ತು ಹೊರಾಂಗಣ ವಿಭಾಗದ ನಿರ್ದೇಶಕ ಶ್ರೀಕಾಂತ್ ಕೆ.ಎನ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಬಿಐಇಸಿಯಲ್ಲಿ 40,000 ಚದರ ಮೀಟರುಗಳಲ್ಲಿ ವ್ಯಾಪಿಸಿರುವ ಟ್ರೇಡ್ ಶೋ ದೇಶೀಯ ಭಾರತೀಯ ಮಾರುಕಟ್ಟೆಯನ್ನು ಬಲಪಡಿಸುವ ಗುರಿಯನ್ನು ಹೊಂದಿತ್ತು. ವ್ಯವಸ್ಥಾಪಕ ನಿರ್ದೇಶಕ ಅರುಣ್ ರೂಂಗ್ಟಾ ಮಾತನಾಡಿ “ಎಚ್‌ಜಿಎಚ್‌ ಇಂಡಿಯಾದಲ್ಲಿ ದೇಶೀಯ ಮಾರುಕಟ್ಟೆಯ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವುದು, ಬೆಳವಣಿಗೆಯನ್ನು ಪ್ರೋತ್ಸಾಹಿಸುವುದು ಮತ್ತು ಸಹಭಾಗಿತ್ವದ ಮೇಲೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಎಲ್ಲ ಪಾಲುದಾರರ ಮಧ್ಯೆಯೂ ಸೂಕ್ತ ಸಹಕಾರವನ್ನು ಸಾಧ್ಯವಾಗಿಸುವ ಮೂಲಕ ಮನೆ ಜವಳಿ, ಮನೆ ಅಲಂಕಾರ, ಮನೆ ಪೀಠೋಪಕರಣ, ಮನೆ ಬಳಕೆ ಪಾತ್ರೆಗಳು ಮತ್ತು ಉಡುಗೊರೆಗಳ ಮಾರುಕಟ್ಟೆಯ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವ ಗುರಿಯನ್ನು ನಾವು ಹೊಂದಿದ್ದೇವೆ.

ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಮಣಿಪಾಲ್ ಗ್ರೂಪ್‌ನ ಚೇರ್ಮನ್ ಶ್ರೀ ಟಿ ಸುಧಾಕರ್ ಪೈ “ದೇಶದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಬೆಂಗಳೂರು ಕೂಡಾ ಒಂದು. ಎಚ್‌ಜಿಎಚ್‌ ಇಂಡಿಯಾ 16ನೇ ಆವೃತ್ತಿಯನ್ನು ಬೆಂಗಳೂರಿನಲ್ಲಿ ನಡೆಸುತ್ತಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಮುಂಬೈನಲ್ಲಿ ನಡೆದ ಎಚ್‌ಜಿಎಚ್‌ ಇಂಡಿಯಾದ ಮೊದಲ ಆವೃತ್ತಿಯಿಂದಲೂ ನಾನು ಇದರ ಭಾಗವಾಗಿದ್ದೇನೆ. ವಿಶ್ವವು ಅವಕಾಶಗಳ ಗುಚ್ಛವಾಗಿದೆ ಮತ್ತು ಇದು ತುಂಬಾ ವೈವಿಧ್ಯಮಯವೂ ಆಗಿದೆ. ಆ ಅವಕಾಶವನ್ನು ಬಳಸಿಕೊಂಡು ಭಾರತವು ಬೆಳೆಯಬೇಕಿದೆ ಮತ್ತು ಆ ವೇಗವನ್ನೂ ಭಾರತವು ಪಡೆದುಕೊಳ್ಳಬೇಕಿದೆ. ಎಚ್‌ಜಿಎಚ್ ಇಂಡಿಯಾದಂತಹ ಉದ್ಯಮದ ಪ್ಲಾಟ್‌ಫಾರಂಗಳನ್ನು ಬಳಸಿಕೊಂಡು ಉತ್ತಮ ಬಾಂಧವ್ಯ ಮತ್ತು ವ್ಯಾಪಾರ ವಿನಿಮಯ ನಡೆಯುವ ಭರವಸೆಯನ್ನು ನಾವು ಹೊಂದಿದ್ದೇವೆ.”

ಅಮೆಜಾನ್ ಇಂಡಿಯಾದ ಮನೆ, ಅಡುಗೆ ಮನೆ ಮತ್ತು ಹೊರಾಂಗಣ ವಿಭಾಗದ ನಿರ್ದೇಶಕ ಕೆ ಎನ್ ಶ್ರೀಕಾಂತ್ ಮಾತನಾಡಿ “ಅಮೆಜಾನ್‌ನಲ್ಲಿ ಹೋಮ್ ವಿಭಾಗವು ಅತ್ಯಂತ ದೊಡ್ಡದಾಗಿದೆ ಮತ್ತು ಅತಿ ವೇಗವಾಗಿ ಬೆಳೆಯುವ ಬ್ಯುಸಿನೆಸ್ ಆಗಿದೆ. ಇಬ್ಬರಲ್ಲಿ ಒಬ್ಬ ಗ್ರಾಹಕರು ಈ ವಿಭಾಗದಲ್ಲಿ ಖರೀದಿ ಮಾಡುತ್ತಾರೆ ಮತ್ತು ಪ್ರತಿ ಐದು ಪ್ರೈಮ್ ಸದಸ್ಯರ ಪೈಕಿ ನಾಲ್ಕು ಸದಸ್ಯರು ಈ ವಿಭಾಗದಲ್ಲಿ ಶಾಪಿಂಗ್ ಮಾಡುತ್ತಾರೆ. ನಮಗೆ ಹೋಮ್ ಸೆಗ್ಮೆಂಟ್ ಒಂದು ದೊಡ್ಡ ಮಾರುಕಟ್ಟೆಯಾಗಿದೆ ಮತ್ತು ನಮ್ಮೆಲ್ಲರಿಗೂ ಬೆಳೆಯುವುದಕ್ಕೆ ಇಲ್ಲಿ ಅಪಾರ ಅವಕಾಶಗಳಿವೆ. ಗ್ರಾಹಕರು ಹೋದಲ್ಲೆಲ್ಲ ನಾವು ಹೋಗುತ್ತೇವೆ. ಅವರು ಆನ್‌ಲೈನ್ ಗೆ ಹೋದರೆ ನಾವು ಕೂಡ ಆನ್‌ಲೈನ್‌ನಲ್ಲಿ ನಮ್ಮ ಗಮನ ಕೇಂದ್ರೀಕರಣ ಮಾಡುತ್ತೇವೆ. ಕೆಲವು ಬಾರಿ ಗ್ರಾಹಕರೇ ನಮಗೆ ದಾರಿ ತೋರಿಸುತ್ತಾರೆ, ಕೆಲವು ಬಾರಿ ನಾವು ಅವರಿಗೆ ದಾರಿ ತೋರಿಸುತ್ತೇವೆ. ಉದ್ಯಮದ ಎಲ್ಲ ಪಾಲುದಾರರನ್ನೂ ಒಂದೇ ಸೂರಿನಡಿ ಎಚ್‌ಜಿಎಚ್ ಇಂಡಿಯಾ ತರುತ್ತಿರುವುದು ನಮಗೆ ಖುಷಿಯ ಸಂಗತಿಯಾಗಿದೆ ಮತ್ತು ಈ ಆವೃತ್ತಿಯ ಭಾಗವಾಗುತ್ತಿರುವುದಕ್ಕೆ ನನಗೆ ಖುಷಿಯಾಗಿದೆ. ಇಲ್ಲಿನ ಭಾವವು ನನಗೆ ತುಂಬಾ ಖುಷಿ ನೀಡುತ್ತದೆ ಮತ್ತು ಎಚ್‌ಜಿಎಚ್‌ ಇಂಡಿಯಾದ ಇನ್ನೂ ನೂರು ಆವೃತ್ತಿಯನ್ನು ನಾನು ಎದುರು ನೋಡುತ್ತಿದ್ದೇನೆ. ಪ್ರತಿ ಅವೃತ್ತಿಯಲ್ಲೂ ನಾವು ನಿರಂತರವಾಗಿ ಭಾಗವಹಿಸುತ್ತೇವೆ” ಎಂದಿದ್ದಾರೆ.

ಬರ್ಗ್ನರ್ ಇಂಪೆಕ್ಸ್ (ಇಂಡಿಯಾ) ಪ್ರೈ ಲಿ ನಿರ್ದೇಶಕ ಉಮೇಶ್ ಗುಪ್ತಾ ಮಾತನಾಡಿ “ನಾನು ಯಾವಾಗಲೂ ಹೇಳುವಂತೆ, ಭಾರತದ ಅಡುಗೆ ಮನೆ ಎಂದಿಗೂ ಮುಚ್ಚುವುದಿಲ್ಲ. ದಕ್ಷಿಣ ಭಾರತದ ಅಡುಗೆಯು ಒಂದು ಆಹ್ಲಾದಕರ ಊಟವಾಗಿದ್ದು, ನಂತರದಲ್ಲಿ ಒಂದು ಚೇತೋಹಾರಿ ಕಾಫಿ ಇರುತ್ತದೆ. ದಕ್ಷಿಣ ಭಾರತದ ಅಡುಗೆಯೊಂದು ಶಾಂತಿಯ ವಲಯ. ಎಚ್‌ಜಿಎಚ್‌ ಇಂಡಿಯಾ ಸಮ್ಮೇಳನವು ಭಾರತಕ್ಕೆ ದಕ್ಷಿಣ ವಲಯವನ್ನು ಪರಿಚಯಿಸುತ್ತಿದೆ. ದಕ್ಷಿಣ ಭಾರತೀಯ ಅಡುಗೆಗೆಂದೇ ರೂಪಿಸಿದ ವಿಶೇಷ ಕುಕ್‌ವೇರ್ ರೇಂಜ್ ಪ್ರತಿ ಮನೆಗೂ ತಲುಪುತ್ತದೆ ಎಂಬ ಆಶಯವನ್ನು ನಾವು ಹೊಂದಿದ್ದೇವೆ.”