ಬೆಂಗಳೂರಿನ ಮಡಿವಾಳದಲ್ಲಿ ಪ್ರಯಾಣಿಕರಿಗಾಗಿ ಹೊಸ ಲಾಂಜ್ ಪ್ರಾರಂಭಿಸಿದ ಫ್ಲಿಕ್ಸ್‌ಬಸ್
ವಿಜಯ ದರ್ಪಣ ನ್ಯೂಸ್….
ಬೆಂಗಳೂರಿನ ಮಡಿವಾಳದಲ್ಲಿ ಪ್ರಯಾಣಿಕರಿಗಾಗಿ ಹೊಸ ಲಾಂಜ್ ಪ್ರಾರಂಭಿಸಿದ ಫ್ಲಿಕ್ಸ್‌ಬಸ್
ಬೆಂಗಳೂರು, 30, ನವೆಂಬರ್ 2024: ಇಂಟರ್‌ಸಿಟಿ ಬಸ್ ಪ್ರಯಾಣದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಫ್ಲಿಕ್ಸ್‌ಬಸ್, ಬೆಂಗಳೂರಿನ ಮಡಿವಾಳದಲ್ಲಿ ತನ್ನ ಹೊಸ ಗ್ರಾಹಕರ ವಿಶ್ರಾಂತಿ ಕೋಣೆಯನ್ನು ತೆರೆಯುವುದಾಗಿ ಘೋಷಿಸಿತು. ಈ ಮೂಲಕ ದಕ್ಷಿಣ ಭಾರತದಲ್ಲಿ ಪ್ರಯಾಣದ ಅನುಭವಗಳನ್ನು ಇನ್ನಷ್ಟು ಸುಖಕರಗೊಳಿಸುವ ತನ್ನ ಬದ್ಧತೆಯನ್ನು ಮತ್ತಷ್ಟು ಹೆಚ್ಚಿಸಿತು. ಈ 30 ಆಸನಗಳ ವಿಶ್ರಾಂತಿ ಕೋಣೆ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈ ಲಾಂಜ್ ಗ್ರಾಹಕರಿಗೆ ಆರಾಮದಾಯಕ ಮತ್ತು ಸುರಕ್ಷಿತ ಕಾಯುವ ಪ್ರದೇಶವನ್ನು ಒದಗಿಸುವ ಗುರಿಯನ್ನು ಹೊಂದಿದ್ದು, ಫ್ಲಿಕ್ಸ್‌ಬಸ್ ಮಾರ್ಗಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಬೋರ್ಡಿಂಗ್ ಅನುಭವವನ್ನು ಆರಾಮದಾಯಕವಾಗಿರಸಲಿದೆ.
ಈ ಕುರಿತು ಪ್ರತಿಕ್ರಿಯಿಸಿದ ಫ್ಲಿಕ್ಸ್‌ಬಸ್ ಇಂಡಿಯಾದ, ವ್ಯವಸ್ಥಾಪಕ ನಿರ್ದೇಶಕ, ಸೂರ್ಯ ಖುರಾನಾ, “ದಕ್ಷಿಣ ಭಾರತ, ಅದರಲ್ಲೂ ವಿಶೇಷವಾಗಿ ಬೆಂಗಳೂರು ಫ್ಲಿಕ್ಸ್‌ಬಸ್ಗೆ ದೊಡ್ಡ ಮತ್ತು ಕ್ರಿಯಾತ್ಮಕ ಮಾರುಕಟ್ಟೆಯಾಗಿದೆ. ನಮ್ಮ ಮಡಿವಾಳ ವಿಶ್ರಾಂತಿ ಕೋಣೆಯನ್ನು ಪ್ರಾರಂಭಿಸುವುದರೊಂದಿಗೆ, ಇಂಟರ್‌ಸಿಟಿ ಪ್ರಯಾಣದಲ್ಲಿ ನಮ್ಮ ಜಾಗತಿಕ ಗುಣಮಟ್ಟವನ್ನು ಕಾಯ್ದುಕೊಳ್ಳುವುದರೊಂದಿಗೆ, ಈ ಪ್ರದೇಶದಲ್ಲಿ ಉತ್ತಮ-ಗುಣಮಟ್ಟದ, ಗ್ರಾಹಕ-ಕೇಂದ್ರಿತ ಪ್ರಯಾಣ ಪರಿಹಾರಗಳನ್ನು ತಲುಪಿಸುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತಿದ್ದೇವೆ. ಈ ಉಪಕ್ರಮವು ನಮ್ಮ ಪ್ರಯಾಣಿಕರ ಬೋರ್ಡಿಂಗ್ ಅನುಭವವನ್ನು ಮರು-ವ್ಯಾಖ್ಯಾನಿಸುವುದಲ್ಲದೇ, ಅವರು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದಾಗ ಅವರಿಗೆ ಖಚಿತತೆ ಜೊತೆಗೆ ಭದ್ರತೆಯನ್ನು ನೀಡುತ್ತದೆಂದು ನಾವು ನಂಬುತ್ತೇವೆ.”