ಸೋಮವಾರಪೇಟೆಯಲ್ಲಿ ಜರುಗಿದ “ಗಾನ ಲಹರಿ” ಕಾರ್ಯಕ್ರಮ

ವಿಜಯ ದರ್ಪಣ ನ್ಯೂಸ್…

ವಿಜಯ ದರ್ಪಣ ನ್ಯೂಸ್….

ಸೋಮವಾರಪೇಟೆಯಲ್ಲಿ ಜರುಗಿದ “ಗಾನ ಲಹರಿ” ಕಾರ್ಯಕ್ರಮ

ಕನ್ನಡ ಸ್ನೇಹ ಬಳಗ ಹಾಗು ವಿದ್ಯಾ ಇನ್ಸ್ಟಾಟ್ ಆಫ್ ಹೆಲ್ತ್ ಕೇರ್ ಟ್ರೇನಿಂಗ ಸೆಂಟರ್ ಸೋಮವಾರಪೇಟೆ ಇವರ ಸೌಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಗಾನ ಲಹರಿ ಕನ್ನಡ ಚಿತ್ರ ಗೀತೆಗಳ ಕಾರ್ಯಕ್ರಮ ಶುಕ್ರವಾರ ಸೋಮವಾರಪೇಟೆಯಲ್ಲಿ ಜರಗಿತು.

ಶಾಂತಿ ಸಂಕೇತವಾದ ಪಾರಿವಾಳಗಳನ್ನು ಹಾರಿ ಬಿಡುವುದರ ಮೂಲಕ “ಗಾನ ಲಹರಿ” ಕಾರ್ಯಕ್ರಮವನ್ನು ಆರಂಭಿಸಲಾಯಿತು.

ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಮುರಳೀಧರ್ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಚಲನ ಚಿತ್ರಗೀತೆಗಳು ಮನದ ಭಾವನೆಗಳನ್ನು ಇನ್ನಷ್ಟು ಮುದಗೊಳಿಸುತ್ತವೆ. ಗಾಯನವು ಪ್ರತಿಯೊಬ್ಬರ ಮನವನ್ನು ಸಂಬಂಧಗಳ ಮೂಲಕ ಹತ್ತಿರವಾಗಿಸುತ್ತದೆ ಎಂದರು.

ಮುಖ್ಯ ಅತಿಥಿಗಳಾದ ಪ್ರಾಧ್ಯಾಪಕ ಹುಚ್ಚೇಗೌಡ ಮಾತನಾಡಿ ಹಳೆಯ ಗಾಯನಗಳು ನಮ್ಮನ್ನು ಗತಕಾಲಕ್ಕೆ ಒಯ್ಯುತ್ತವೆ. ಮನದ ದು:ಖ ದುಮ್ಮಾನಗಳನ್ನು ಕಡಿಮೆಯಾಗಿಸಿ ಮನಸ್ಸನ್ನು ಹಗುರ ಮಾಡಿಸುತ್ತವೆ ಎಂದರು. ಕಾರ್ಯಕ್ರಮದಲ್ಲಿ ಹಲವು ಗಾಯಕರು ಹಾಡಿ ಎಲ್ಲರ ಮನ ರಂಜಿಸಿದರು.

ವೇದಿಕೆಯಲ್ಲಿ ಕನ್ನಡ ಸಿರಿ ಬಳಗದ ಅಧ್ಯಕ್ಷ ಹೆಚ್. ಜೆ ಜವರಪ್ಪ, ಕರ್ನಾಟಕ ಲೇಖಕಿಯರ ಸಂಘ ಕೊಡಗು ಶಾಖೆ ಕಾರ್ಯದರ್ಶಿ ಶರ್ಮಿಳಾ ರಮೇಶ್, ವಿದ್ಯಾ ನರ್ಸಿಂಗ್ ಹೋಂ ತರಬೇತಿ ಕೇಂದ್ರ ಪ್ರಾಂಶುಪಾಲ ಅಲೀಮ ಸುಲೈಮಾನ್, ಹಿರಿಯ ಗಾಯಕ ಪೀಟರ್, ಕನ್ನಡ ಸಿರಿ ಬಳಗ ಕಾರ್ಯದರ್ಶಿ ಪ್ರೇಮ, ಖಜಾಂಚಿ ಸಿ. ಕೆ. ಮಲ್ಲಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕಿ ಮಂಜುಳ ಸ್ವಾಗತಿಸಿದರು.
ಗೀತಾಂಜಲಿ ಮಹೇಶ ನಿರೂಪಿಸಿದರು. ಕವಿತ ವಂದಿಸಿದರು.

₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹♠

ವಿರಾಜಪೇಟೆ ಪೊಲೀಸರಿಂದ ಕಾರ್ಯಾಚರಣೆ

ಗಾಂಜ ಬೆಳೆಯುತ್ತಿದ್ದ ವ್ಯಕ್ತಿಯನ್ನು ಗಾಂಜಾ ಗಿಡಗಳು ಸಹಿತ ಬಂಧನ

ವಿರಾಜಪೇಟೆ ತಾಲೂಕಿನ ಕಾರ್ಮಾಡು ಗ್ರಾಮದಲ್ಲಿ ಮನೆಯ ಆವರಣದಲ್ಲಿ ನಿಷೇಧಿತ ಗಾಂಜಾ ಗಿಡಗಳನ್ನು ಅಕ್ರಮವಾಗಿ ಬೆಳೆದಿದ್ದ ಅಲ್ಲಿನ ಮುಕ್ಕಾಟಿ ಕೊಪ್ಪಲು ನಿವಾಸಿ ಎ.ಬಿ ಮುತ್ತಣ್ಣ (68) ಎಂಬುವವರನ್ನು ಪೊಲೀಸರು ಬಂದಿಸಿ 5 ಕೆ.ಜಿ. 500 ಗ್ರಾಂ ತೂಕದ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ವಿರಾಜಪೇಟೆ ಉಪ ವಿಭಾಗದ ಡಿ.ವೈ. ಎಸ್ ಪಿ .ಆರ್ ಮೋಹನ್ ಕುಮಾರ್ ವಿರಾಜಪೇಟೆ ವೃತ್ತ ನಿರೀಕ್ಷಕ ಅನುಪ್ ಮಾದಪ್ಪ, ವಿರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ಬಿ. ಎಸ್. ವಾಣಿಶ್ರೀ ಹಾಗೂ ಸಿಬ್ಬಂದಿಗಳು ಒಳಗೊಂಡ ವಿಶೇಷ ತಂಡ ಕಾರ್ಯಚರಣೆ ನಡೆಸಿ ಈ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ ಎಂದು ಹೇಳಲಾಗಿದೆ.