ಜಿಲ್ಲಾ ಯುವ ಜನೋತ್ಸವ ಕಾರ್ಯಕ್ರಮ ಅಗತ್ಯ ಸಿದ್ಧತೆಗೆ ಕ್ರಮ ವಹಿಸಿ: ಜಿಲ್ಲಾಧಿಕಾರಿ ಡಾ.ಶಿವಶಂಕರ

ವಿಜಯ ದರ್ಪಣ ನ್ಯೂಸ್….

ಜಿಲ್ಲಾ ಯುವ ಜನೋತ್ಸವ ಕಾರ್ಯಕ್ರಮ ಅಗತ್ಯ ಸಿದ್ಧತೆಗೆ ಕ್ರಮ ವಹಿಸಿ

ನವಂಬರ್ 30 ರಂದು ಜಿಲ್ಲಾ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮ:ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ನ.16:-2024-25ನೇ ಸಾಲಿನ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ನವೆಂಬರ್ 30 ರಂದು ದೇವನಹಳ್ಳಿ ಟೌನ್ ನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ಸೂಚಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿಕೊಂಡು ಅವರು ಮಾತನಾಡಿದರು.

ನವೆಂಬರ್ 27 ರಂದು ನಡೆಯಲಿರುವ ಯುವ ಜನೋತ್ಸವ ಸ್ಫರ್ಧೆಯಲ್ಲಿ ಜಿಲ್ಲೆಯ 15 ವರ್ಷದಿಂದ 29 ವರ್ಷ ವಯೋಮಾನದೊಳಗಿನ ಯುವಕರು ಹಾಗೂ ಯುವತಿಯರು ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಭಾಗವಹಿಸಬಹುದಾಗಿದೆ.

ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಮಾಹಿತಿ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಕ್ರಮ ವಹಿಸಿ ಎಂದರಲ್ಲದೇ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯಕ್ರಮ ಯಶಸ್ವಿಗೆ ಕಾರ್ಯ ನಿರ್ವಹಿಸಿ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀ, ಜಿಲ್ಲಾ ನೆಹರೂ ಯುವ ಕೇಂದ್ರದ ಯುವ ಅಧಿಕಾರಿ ಶ್ರೀವಾಣಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಯುವ ಜನೋತ್ಸವ ಸ್ಪರ್ಧೆಗಳ ವಿವರ:

ಗುಂಪು ಸ್ಪರ್ಧೆಗಳು:
01. ವಿಜ್ಞಾನ ಮೇಳ (ಗುಂಪು),
02. ಜಾನಪದ ನೃತ್ಯ (ತಂಡ)– (ಕನ್ನಡ/ ಆಂಗ್ಲ/ ಹಿಂದಿ ಭಾಷೆ),
03. ಜಾನಪದ ಗೀತೆ (ತಂಡ)– (ಕನ್ನಡ/ ಆಂಗ್ಲ/ ಹಿಂದಿ ಭಾಷೆ),

ವೈಯಕ್ತಿಕ ಸ್ಪರ್ಧೆಗಳು:
01. ಜಾನಪದ ನೃತ್ಯ–(ಕನ್ನಡ/ ಆಂಗ್ಲ/ ಹಿಂದಿ ಭಾಷೆ),
02. ಜಾನಪದ ಗೀತೆ–(ಕನ್ನಡ/ ಆಂಗ್ಲ/ ಹಿಂದಿ ಭಾಷೆ),
03. ಕವಿತೆ ಬರೆಯುವುದು
04. ಕಥೆ ಬರೆಯುವುದು (ವೈಯಕ್ತಿಕ) ಸ್ಟೋರಿ ರೈಟಿಂಗ್ (1000 ಪದಗಳು ಮೀರದಂತೆ) – (ಕನ್ನಡ/ ಆಂಗ್ಲ/ ಹಿಂದಿ ಭಾಷೆ),
05. ಚಿತ್ರ ಕಲೆ- ಕನ್ನಡ /ಆಂಗ್ಲ /ಹಿಂದಿ)
06. ಮೊಬೈಲ್ ಛಾಯಾಗ್ರಹಯ ಸ್ಫರ್ಧೆ
07. ವಿಜ್ಞಾನ ಮೇಳ (ವೈಯಕ್ತಿಕ)
08. ಯುವ ಚಿತ್ರ ಕಲಾ ಸ್ಫರ್ಧೆ
09. ಛಾಯಾಚಿತ್ರಣ (ವೈಯಕ್ತಿಕ)
10. ಕವನ ಬರಹಗಾರರ ಸ್ಫರ್ಧೆ

ಯುವ ಕೃತಿ:-
01. ಗುಡಿ ಕೈಗಾರಿಕೆಯ ಕಲಾ ಪ್ರಕಾರ
02. ನೇಕಾರಿಕೆ / ಜವಳಿ
03. ಕೃಷಿ ಉತ್ಪನ್ನಗಳು

ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ: 9980590960/ 8328673178 ಅನ್ನು ಸಂಪರ್ಕಿಸಬಹುದು.