ಇರಲಾರದೇ ಇರುವೆ ಬಿಟ್ಟುಕೊಂಡ ‘ಜಗ್ಗಿ’

ವಿಜಯ ದರ್ಪಣ ನ್ಯೂಸ್….

ಇರಲಾರದೇ ಇರುವೆ ಬಿಟ್ಟುಕೊಂಡ ‘ಜಗ್ಗಿ’

ಬೆಂಗಳೂರು: ಕನ್ನಡ ಚಿತ್ರರಂಗದ ಅತ್ಯುತ್ತಮ ಬರಹಗಾರ ನಿರ್ದೇಶಕ. ಇತ್ತೀಚಿನ ನಟ ಗುರುಪ್ರಸಾದ್ ಅವರು ಅತ್ಮಹತ್ಯೆ ಮಾಡಿಕೊಂಡು ಅಕಾಲಿಕ ಮರಣ ಹೊಂದಿದರು ತನ್ನ ಶತ್ರುವೇ ಸತ್ತರೂ ಆತ ದೇವರ ಸಮಾನ. ಆತನ ಬಗ್ಗೆ ಎರಡು ಒಳ್ಳೆ ಮಾತನಾಡಬೇಕು.

ಸಾವಿನ ಮನೆಯಲ್ಲಿ ಒಲೆಗೆ ಬೆಂಕಿ ಹಚ್ಚಬಾರದೆoಬುದು ತಿಳಿದಿದ್ದರೂ ಕಿಚ್ಚನ್ನೇ ಹಚ್ಚಲು ಶತ ಪ್ರಯತ್ನ ಪಟ್ಟಿದ್ದು ಗ್ರೇಟ್ ನಟ, ಲಾಟರಿ ರಾಜ್ಯಸಭಾ ಸದಸ್ಯ ಇದೇ ಗುರುಪ್ರಸಾದ್ ನಿರ್ದೇಶಿಸಿದ ‘ಮಠ’, ‘ಎದ್ದೇಳು ಮಂಜುನಾಥ’ ಚಿತ್ರಗಳ ಮೂಲಕ ಪುನರ್ಜನ್ಮ ಪಡೆದ ಈತ ಆತನ ವ್ಯಕ್ತಿತ್ವದ ಬಗ್ಗೆ ಆತ ತೋರಿಸುತ್ತಿದ್ದ ಆಟಿಟ್ಯೂಡ್ ಬಗ್ಗೆ ಕಿಚಾಯಿಸಿ ಹೇಳಿಕೆ ಕೊಡುತ್ತಾನೆ. ಜಗ್ಗೇಶ್ ಹಾಕಿಕೊಂಡು ‘ರಂಗ ನಾಯಕ’ ಚಿತ್ರ ಮಾಡಿ ಅದಾಗಲೇ ಸಾಲದ ಸುಳಿಯಲ್ಲಿದ್ದ ಗುರುಪ್ರಸಾದ್ ಮತ್ತೆಂದು ತಾನು ಮೇಲೇಳಲಾರೆ ಎಂದುಕೊoಡು ಆತ್ಮಹತ್ಯೆಯ ನಿರ್ಧಾರ ಮಾಡಿದ,

ಈತ ಹೇಳುವುದು ಅವನೊಬ್ಬ ಮೂರ್ಖ, ಹಠಮಾರಿ, ಕುಡುಕ, ದುರಂಅಹoಕಾರಿ ಎಂದು. ಹೌದು ಪುನರ್ಜನ್ಮ ಕೊಟ್ಟ ಗುರುಪ್ರಸಾದ್ ಪೆನ್ನು ಪೇಪರ್ ಹಿಡಿದುಕೊಳ್ಳುವ ಬ್ಯಾಗಿನಲ್ಲಿ ಗುಂಡು ಬಾಟಲಿಗಳನ್ನು ತರುತ್ತಿದ್ದರು ಎನ್ನುತ್ತಾರಲ್ಲ. ಇದೇ ರಾಯರ ಭಕ್ತ, ಕಚಡಾ ಕಲಾವಿದ ಜಗ್ಗೇಶ ಮಕ್ಕಳಿಬ್ಬರು ಸಾಚಗಳಾ…? ಹಗಲು ಕುಡುಕರು. ಬೆಂಗಳೂರಿನ ಬಿಲಿಯರ್ಡ್ಸ್ ಕ್ಲಬ್‌ಗೆ ಮಟ ಮಟ ಮದ್ಯಾಹ್ನವೇ ಲಗ್ಗೇ ಇಡುವ ಮಕ್ಕಳಿಬ್ಬರು ಅಲ್ಲಿ ಲಾಲಿ ಪಪ್ ತಿನ್ನುತ್ತಾರಾ …?
‘ಮಠ’, ‘ಎದ್ದೇಳು ಮಂಜುನಾಥ’ ಚಿತ್ರವನ್ನು ನಿರ್ದೇಶಕ ಗುರುಪ್ರಸಾದ್ ಮಾಡಿರದಿದ್ದರೆ, ಆ ಚಿತ್ರ ಯಶಸ್ವಿ ಆಗಿರದಿದ್ದರೇ ಕಪ್ಪೆಗಳಂತೆ ಎಗರಿ ಎಗರಿ ತಪ್ಪಿಸಿಕೊಳ್ಳುತ್ತಿದ್ದ ನಿರ್ಮಾಪಕರನ್ನು ಒಗ್ಗೂಡಿಸಿ ಆ ಚಿತ್ರ ಗಳನ್ನು ತೆರೆಗೆ ತರದೇ ಇದ್ದಿದ್ದರೆ ಈ ಜಗ್ಗೇಶ ಆದಾ ಗಲೇ ಶೆಡ್‌ಗೆ ಸೇರಿ ಆಗಿರುತ್ತಿತ್ತು ತನ್ನ ಮಕ್ಕಳನ್ನು ಹತೋಟಿಯಲ್ಲಿಡಲಾಗದ ಬೆಂಗಳೂರಿನ ಜೆ.ಸಿ ನಗರದಲ್ಲಿ ಗಾಂಚಾಲಿ ಮಾಡಿ ತೊಡೆ ಸೀಳಿಸಿಕೊಂಡ ಮಗನಿಗೆ ಬುದ್ಧಿ ಕಲಿಸಲಾಗಲಿಲ್ಲ ಈ ರಾಯರ ಪರಮ ಭಕ್ತನಿಗೆ.ತನಗಾಗಿ ತನ್ನ ಹೆಂಡತಿ ಮಕ್ಕಳಿಗಾಗಿ ಎನನ್ನೂ ಮಾಡದೇ ಸಿನಿಮಾವನ್ನೇ ಉಸಿರಾಗಿಸಿಕೊಂಡು ಸಿನಿಮಾಗಾಗಿ ಕೋಟ್ಯಾಂತರ ಹಣ ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಂಡ ಬುದ್ಧಿವಂತ ನಿರ್ದೇಶಕ ಗುರುಪ್ರಸಾದ್ ಬಗ್ಗೆ ಹೇಸಿಗೆ ಹೇಳಿಕೆ ಕೊಟ್ಟಿದ್ದು ಅಸಹ್ಯ, ಅಹಂಕಾರ, ಕನ್ನಡ ಸಿನಿಮಾ ರಂಗದ ದುರ್ಗತಿ ಎಂದೇ ಹೇಳಬಹುದು.


*ಬಿ.ಆರ್. ನರಸಿಂಹಮೂರ್ತಿ
9448194932