ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ ಎಕ ವ್ಯಕ್ತಿ ನಾಟಕ ಪ್ರೇಮಮಯಿ ಹಿಡಿಂಬೆ .

ವಿಜಯ ದರ್ಪಣ ನ್ಯೂಸ್…

ರಂಗ ವಿಜಯಾ ತಂಡವು ನಗರದ ಕನ್ನಡ ಭವನದಲ್ಲಿ ಗೀತಾ ರಾಘವೇಂದ್ರರ ಮೂಲಕ ಅಭಿನಯಿಸಿದ ಎಕ ವ್ಯಕ್ತಿ ನಾಟಕ ಪ್ರೇಮಮಯಿ ಹಿಡಿಂಬೆ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುವಲ್ಲಿ ಯಶಸ್ವಿಯಾಯಿತು.

ಕೋಲಾರ:ಸುಮಾರು ಒಂದುವರೆ ಗಂಟೆ ಕಾಲ ಹಿಡಿಂಬೆ ಪಾತ್ರದಲ್ಲಿ ಕೋಲಾರದವರೇ ಆದ ಗೀತಾ ರಾಘವೇಂದ್ರ ಜೀವಿಸುವ ಮೂಲಕ ಹಿಡಂಬೆಯ ವನ ಮತ್ತು ಅವಳ ಪ್ರೇಮ, ಮನಸ್ಸಿನೊಳಗಿನ ರಾಕ್ಷಸಿ ಗುಣ, ನೋವು, ತೊಳಲಾಟ, ವಿರಹ ವೇದನೆಯನ್ನು ಪ್ರೇಕ್ಷಕರಿಗೆ ಪರಿಣಾಮಕಾರಿಯಾಗಿ ಪರಿಚಯಿಸುವಲ್ಲಿ ಸಫಲರಾದರು. ಬೆಂಗಳೂರಿನ ಹಲವು ರಂಗ ಮಂದಿರಗಳಲ್ಲಿ ಮೊದಲ ಯಶಸ್ವಿ ಪ್ರದರ್ಶನದ ನಂತರ ರಾಜ್ಯದ ಐದಾರು ಕಡೆ ಪ್ರದರ್ಶನ ನೀಡಿ ತವರು ಪ್ರೇಕ್ಷಕರ ಸಮ್ಮುಖದಲ್ಲಿ ಹಿಡಿಂಬೆ ಯಾಗಿ ಗೀತಾ ರಾಘವೇಂದ್ರ ವಿಜೃಂಭಿಸುವ ಮೂಲಕ ಏಕ ವ್ಯಕ್ತಿ ನಾಟಕದ ಯಶಸ್ಸಿಗೆ ಕಾರಣಕರ್ತರಾದರು.

ಹಿಡಿಂಬೆ ರಾಕ್ಷಸಿ ಮಾತ್ರವಲ್ಲ ಅವಳಲ್ಲಿಯೂ ಪ್ರೇಮಮಯಿ ಮನಸಿತ್ತು ಎಂಬುದನ್ನು ನಾಟಕ ಪ್ರೇಕ್ಷಕರ ಮನಸಿಗೆ ನಾಟುವಂತೆ ಮಾಡುವಲ್ಲಿ ನಾಟಕ ಯಶಸ್ವಿಯಾಯಿತು. ಈ ನಾಟಕವನ್ನು ಬರೆದು ರಂಗ ವಿನ್ಯಾಸ ಮಾಡಿ ನಿರ್ದೇಶನ ಮಾಡಿದ ಡಾ. ಬೇಲೂರು ರಘುನಂದನ್ ರ ಪ್ರಯತ್ನವನ್ನು ಗೀತಾ ರಾಘವೇಂದ್ರ ತಮ್ಮ ಪರಿಪಕ್ವವಾದ ಅಭಿನಯದ ಮೂಲಕ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಯಶಸ್ಸು ಕಂಡರು. ಈಗಾಗಲೇ ಹಲವಾರು ಚಲನಚಿತ್ರಗಳು ಹಾಗೂ ಧಾರವಾಹಿಗಳಲ್ಲಿ ಕಾಣಿಸಿಕೊಂಡಿರುವ ಗೀತಾ ರಾಘವೇಂದ್ರ ತಮಗೆ ಅವಕಾಶ ಸಿಕ್ಕಲ್ಲಿ ಎಂತದ್ದೇ ಪಾತ್ರವನ್ನು ನಿಭಾಯಿಸುವ ಸಾಮರ್ಥ್ಯ ತಮಗಿದೆ, ಎನ್ನುವುದನ್ನು ಏಕವ್ಯಕ್ತಿ ನಾಟಕದ ಮೂಲಕ ಸಾಬೀತುಪಡಿಸಿದರು.

ರಂಗ ವಿಜಯಾ ತಂಡದ ವಿಜಯದ ತಂಡದ ಮಾಲೂರು ವಿಜಿ ಮಾತನಾಡಿ ತಮ್ಮ ಮಕ್ಕಳನ್ನು ರಂಗಕ್ಕೆ ತರಬೇಕೆಂಬ ಆಶಯದಿಂದ ರಂಗ ವಿಜಯಾಕ್ಕೆ ಪರಿಚಯವಾದ ಗೀತಾ ರಾಘವೇಂದ್ರ ವೇದಿಕೆ ಹತ್ತಲು ಹಿಂಜರಿಯುವಂತಹ ಸಾಂಪ್ರದಾಯಸ್ಥ ಗೃಹಿಣಿಯಾಗಿದ್ದರು. ಆದರೆ ಅವರಲ್ಲಿದ್ದ ಅಭಿನೇತ್ರಿ ಅವರನ್ನು ಒಂದುವರೆ ಗಂಟೆ ಏಕವ್ಯಕ್ತಿ ನಾಟಕ ನಿಭಾಯಿಸುವಷ್ಟರ ಮಟ್ಟಿಗೆ ಸಜ್ಜುಗೊಳಿಸಿದೆ ಇದು ಮೆಚ್ಚುವಂತಹ ಸಂಗತಿ ಮತ್ತು ಪ್ರತಿಯೊಬ್ಬ ಗೃಹಿಣಿಯು ಈ ಪ್ರಯತ್ನ ಮಾಡಿದರೆ ಸಾಧಿಸಲು ಸಾಧ್ಯ ಎಂಬುದನ್ನು ಸಾಬೀತುಪಡಿಸಿದರು. ಈಗಾಗಲೇ ಆರು ಪ್ರದರ್ಶನ ಕಂಡು ಈ ನಾಟಕ ಕೋಲಾರದಲ್ಲಿ 7ನೇ ಪ್ರದರ್ಶನ ನೀಡುತ್ತಿದೆ. ಈ ನಾಟಕವನ್ನು ರಾಜ್ಯ ಹೊರ ರಾಜ್ಯ ವಿದೇಶಗಳಲ್ಲಿಯೂ ನೂರಕ್ಕೂ ಹೆಚ್ಚು ಪ್ರದರ್ಶನ ನೀಡುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು. ಟಿ.ಎನ್. ರಾಘವೇಂದ್ರರಾವ್ ನಾಗ ಪೂಜಾ, ರಕ್ಷಿತಾ ನಾಟಕ ನಿರ್ವಹಣೆಯ ಜವಾಬ್ದಾರಿ ಹೊತ್ತುಕೊಂಡಿದ್ದರು. ಗಣೇಶ್ ಮಾಲೂರು ವಸ್ತ್ರ ವಿನ್ಯಾಸಕರಾಗಿದ್ದು ಪ್ರತಿಭಾ ಚಂದ್ರವೀರ ಸಾಗರ್ ಸಹಕಾರ ನೀಡಿದ್ದು, ಬಿಎಸ್ ವೈಷ್ಣವ್ ರಾವ್ ಸಂಗೀತ, ರವಿಶಂಕರ್ ಬೆಳಕು, ಅಭಿಷೇಕ್ ಪ್ರಸಾಧನ, ಶ್ರೀನಿ ಸಂಪತ್ ಲಕ್ಷ್ಮಿ ಧ್ವನಿ ಮುದ್ರಿತ ಸಂಗೀತ ನಿರ್ವಹಣೆ ನೇಪಥ್ಯದಲ್ಲಿ ಸಿಹಿ ಮೊಗ್ಗೆ ಪವನ್, ತನ್ಮಯ್ ಆರ್ ಸಿದ್ದಾರ್ಥ್, ಡಾ. ಪಲ್ಲವಿ ಮಣಿ ಡಾ.ವಕ್ಕಲೇರಿ ಕೆ. ನಾರಾಯಣಸ್ವಾಮಿ ಡಾ. ಜಿ. ಸುರೇಶ್ ಬಾಬು, ಮಾಸ್ತಿ ಟಿ.ಸಿ. ರಮೇಶ್ ಡಾ. ಎಸ್ ಜಿ ನಾರಾಯಣಸ್ವಾಮಿ ಇತರರ ಸಹಕಾರ ನಾಟಕಕ್ಕೆ ಇತ್ತು ಪ್ರೇಮಮಯಿ ಹಿಡಿಂಬೆ ನಾಟಕವು ಅಂತಿಮವಾಗಿ ಪ್ರೇಕ್ಷಕರ ಜೋರಾದ ಚಪ್ಪಾಳೆ ಗಿಟ್ಟಿಸಿಕೊಂಡು ಸಮಾಪ್ತಿಗೊಂಡಿತು. ಹಲವಾರು ಗಣ್ಯರು ನಾಟಕ ಕುರಿತಂತೆ ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದರು.