ಯಕ್ಷಾಲಾಪ ಏಕವ್ಯಕ್ತಿ ನಾಟಕ

ವಿಜಯ ದರ್ಪಣ ನ್ಯೂಸ್….

ಯಕ್ಷಾಲಾಪ ಏಕವ್ಯಕ್ತಿ ನಾಟಕ

ಬೆಂಗಳೂರು: ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಬೆಂಗಳೂರಿನ ಉದಯಭಾನು ಕಲಾಸಂಘವು ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಕನ್ನಡ ಹವ್ಯಾಸಿ ರಂಗೋತ್ಸವ-2024ರ ಉದ್ಘಾಟನಾ ಸಮಾರಂಭದಂದು ಅಂದರೆ 4ನೇ ನವೆಂಬರ್ 2024ರಂದು ಸಂಜೆ ಆರು ಗಂಟೆಗೆ ಜರುಗುವುದು. ಡಾ. ಎಂ. ಬೈರೇಗೌಡರ ಅಭಿನಯದ ಯಕ್ಷಾಲಾಪ ಏಕವ್ಯಕ್ತಿ ಪ್ರದರ್ಶನವಿದೆ.

ಈ ಸರಣಿಯಲ್ಲಿ ಒಟ್ಟು ಏಳು ನಾಟಕಗಳಿದ್ದು ಮೊದಲ ನಾಟಕ ಯಕ್ಷಾಲಾಪವಿರುತ್ತದೆ.ಕಾಳಿದಾಸನ ಮೇಘದೂತ ಒಂದು ವಿಶಿಷ್ಟ ಕೃತಿ. ಮಹಾಕಾವ್ಯದಲ್ಲಿ ಅಡಕಮಾಡಬಹುದಾದ ವಿವರಗಳು ಈ ಕಾವ್ಯದಲ್ಲಿವೆ. ಪ್ರೊ. ನಾರಾಯಣಘಟ್ಟ (ನಾಹೊ) ಕನ್ನಡದ ಅನುಸೃಷ್ಟಿ ‘ಮೇಘದೂತ ದರ್ಶನಂ’ ನಲ್ಲಿ ದರ್ಶನ ಮಾಡಿಸಿದ್ದಾರೆ.ಸಂಗೀತ: ಪ್ರಸನ್ನಕುಮಾರ್ ಎಂ.ಎಸ್., ಬೆಳಕು, ರಂಗಪರಿಕರಗಳು: ವಿಶ್ವನಾಥ ಮಂಡಿ, ಸಂಗೀತ ನಿರ್ವಹಣೆ: ಗಜಾನನ ಟಿ. ನಾಯ್ಕ, ವಿನ್ಯಾಸ, ನಿರ್ದೇಶನ: ಎಂಸಿ. ನಾಗರಾಜ್ ಕನಕಪುರ, ಅಭಿನಯ: ಡಾ.ಎಂ.ಬೈರೇಗೌಡ.ಮಹಾಕವಿ ಕಾಳಿದಾಸ ಎರಡು ಮಹಾಕಾವ್ಯ (ಕಮಾರಸಂಭವ, ರಘುವಂಶ), ಎರಡು ಖಂಡಕಾವ್ಯ (ಋತುಸಂಹಾರ, ಮೇಘದೂತ), ಮೂರು ನಾಟಕಗಳು (ಮಾಳವಿಕಾಗ್ನಿಮಿತ್ರ, ವಿಕ್ರಮೋರ್ವಶೀಯ, ಅಭಿಜ್ಞಾನ ಶಾಕುಂತಲ) ಒಟ್ಟು ಏಳು ಶ್ರೇಷ್ಟ ಕೃತಿಗಳನ್ನು ರಚಿಸಿದ್ದಾನೆ. ಅಂತ ಶ್ರೇಷ್ಟಕವಿ ಕಾಳಿದಾಸ ಕೃತಿ ಆಧಾರಿತ ಕನ್ನಡದ ಮೇಘದೂತ ದರ್ಶನಂ ಕಾವ್ಯಭಾಗದಿಂದ ರಚಿತವಾದ ಏಕಾಂಕ ನಾಟಕ-ಈ ‘ಯಕ್ಷಾಲಾಪ’.ಮಣಿಕಂಠನೆಂಬ ಯಕ್ಷ ಅಲಕಾಪುರ ನಿವಾಸಿ. ಕುಬೇರನರ ಮನೆಯ ಸುಂದರ ಪರಿಸರದಲ್ಲಿ ಅವನ ಮನೆ. ಇಂತಿರಲು ಕುಬೇರನಿಗೆ ಪ್ರಿಯವಾದ ಹೂದೋಟವನ್ನು ಇಂದ್ರನ ಐರಾವತ ಹಾಳುಮಾಡಿತ್ತು. ತೋಟದ ಅಧಿಕಾರಿ ಯಕ್ಷ. ಆತನ ಅಜಾಗರೂಕತೆ ಕಾರಣದಿಂದಲೇ ಹೀಗಾಯಿತೆಂದು ಭಾವಿಸಿದ ಕುಬೇರ ಅವನಿಗೆ ಒಂದು ವರ್ಷದ ಗಡಿಪಾರಿನ ಕಠಿಣಶಿಕ್ಷೆ ವಿಧಿಸಿದ. ಒಂದು ಸಣ್ಣ ತಪ್ಪಿಗೆ ಇಂಥ ಕ್ರೂರ ಶಿಕ್ಷೆಯೇ ಎಂದು ಮರುಗಿದ.

 

ಶಾಪವಿಮೋಚನೆಗೆ ವಿಂಧ್ಯಪರ್ವತ ತಪ್ಪಲಿನ ರಾಮಗಿರಿಯನ್ನು ಆಯ್ದುಕೊಂಡ.  ವಿಧಿಯನ್ನು ಅಳಿದುಕೊಳ್ಳುತ್ತಾ ಎಂಟು ತಿಂಗಳು ಕಳೆದಿದ್ದಾನೆ. ಯಕ್ಷ ಖಿನ್ನತೆಯಿಂದ ಅಲೆದಾಡುತ್ತ, ಹುಚ್ಚನಂತೆ ಕಾಣುತ್ತಾನೆ.  ಆಗ ಅವನ ನೆರವಿಗೆ ಬರುವುದು ಮೇಘ. ಮೇಘನ ಮೂಲಕ ತನ್ನ ಮಡದಿಗೆ ಸಂದೇಶವನ್ನು ಕಳುಹಿಸುವ ಈ ಪ್ರದರ್ಶನವೇ ಯಕ್ಷಾಲಾಪ ಎಂದು ಉದಯಭಾನು ಕಲಾಸಂಘದ ಪ್ರಕಟಣೆ ತಿಳಿಸಿದೆ.

Dr. M. Byregowda. 9448102158